ಬಸವತತ್ತ-್ವ ಪ್ರವಚನಕ್ಕೆ ಸೀಮಿತವಾಗದೆ ಆಚರಣೆಗೆ ಬರಲಿ: ಸಚಿವ ತಿಮ್ಮಾಪುರ

ಬಸವತತ್ತ-್ವ ಪ್ರವಚನಕ್ಕೆ ಸೀಮಿತವಾಗದೆ ಆಚರಣೆಗೆ ಬರಲಿ: ಸಚಿವ ತಿಮ್ಮಾಪುರ  Basavatatta should not be limited to discourse but should be put into practice: Minister Thimmapura

ಲೋಕದರ್ಶನ ವರದಿ 

ಜಮಖಂಡಿ 22: ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಗುಡಿಯಲ್ಲಿ ಇಡುವುದಲ್ಲ. ಬಸವತತ್ತ-್ವ ಕೇವಲ ಪ್ರವಚನಕ್ಕೆ ಸೀಮಿತ ಆಗಬಾರದು. ಬದಲಾಗಿ ಬಸವತತ್ತ-್ವ ಆಚರಣೆಗೆ ಬರಬೇಕು. ಬಸವತತ್ತ-್ವ ಪಾಲನೆಯಿಂದ ವಿಶ್ವಮಾನವರಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.ನಗರದ ಓಲೆಮಠದಲ್ಲಿ ನಡೆದ ಬಸವ ಜಯಂತಿ ನಿಮಿತ್ತ ಆರು ದಿನಗಳ ಜಮಖಂಡಿ ಓಲೆಮಠದ ಜಾತ್ರಾಮಹೋತ್ಸವದ ಕೊನೆಯ ದಿನದಂದು ಸಂಜೆಯ ನಡೆದ ಬಸವ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಬದುಕು, ರಾಜಕಾರಣ, ಆಹಾರ, ನೀರು ಎಲ್ಲವೂ ಕಲುಷಿತಗೊಂಡಿದೆ.

ಮಾನವನಿಗೆ ದಿಕ್ಕು ತೋಚಲಾರದಂತಾಗಿದೆ. ಮನುಷ್ಯರನ್ನು ಮನುಷ್ಯರಂತೆ ಕಾಣದ ಸ್ಥಿತಿ ನಿರ್ಮಾಣ ಆಗಿದೆ. ಧರ್ಮ-ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿದೆ. ಒಂದೇ ಧರ್ಮದ ಒಳಗಡೆಯೂ ಸಂಘರ್ಷ ನಡೆಯುತ್ತಿದೆ. ಮನುಷ್ಯ ಯಾವ ದಿಕ್ಕಿಗೆ ಸಾಗುತ್ತಿದ್ದಾನೆ ಗೊತ್ತಿಲ್ಲ. ಇಂತಹ ಕಲುಷಿತ ವಾತಾವರಣವನ್ನು ತಿಳಿಸಿಗೊಳಿಸಲು ಮಠಮಾನ್ಯಗಳು ಬೆಳೆಯಬೇಕು. ಕಲಿತ ಯುವಕರಿಗೆ ಉದ್ಯೋಗ ಕೊಡಲಾಗದೆ ಕೈಚೆಲ್ಲುವ ಸಂದರ್ಭ ಬಂದಿದೆ. ಕೈಮೀರಿ ಹೋಗುವ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಮಠಮಾನ್ಯಗಳು ತೋರುವ ಬೆಳಕಿನಲ್ಲಿ ಸಾಗಬೇಕಾಗಿದೆ.

ಮನುಷ್ಯನಿಗೆ ಶಾಂತಿ ನೆಮ್ಮದಿ ಮಠಮಾನ್ಯಗಳಿಂದ ಮಾತ್ರ ಸಾಧ್ಯ ಎಂದರು.ಉದ್ದಿಮೆದಾರ ಸಂಗಮೇಶ ನಿರಾಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಓಲೆಮಠದ ಪೂಜ್ಯರು ಕೈಗೊಂಡಿರುವ ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಜನಜಾಗೃತಿ ಅಭಿಯಾನ ಯಶಸ್ವಿಯಾಗಿದೆ. ನೆರೆಯ ತಾಲ್ಲೂಕಿನ ಗ್ರಾಮಗಳ ಗ್ರಾಮಸ್ಥರು ಕೂಡ ತಮ್ಮೂರಿಗೆ ಬಂದು ವ್ಯಸನಮುಕ್ತ ಮಾಡಲು ಮನವಿ ಮಾಡುತ್ತಿದ್ದಾರೆ ಎಂದರು.ಜಿ.ಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಅಂಜುಮನ್‌-ಎ-ಇಸ್ಲಾಂ ಕಮೀಟಿ ಅಧ್ಯಕ್ಷ ತೌಫೀಕ ಪಾರ್ಥನಳ್ಳಿ, ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಬಾಗೇನವರ ಮಾತನಾಡಿದರು.

ಮಹಾದೇವಪ್ಪ ಝುಲಪಿ ವಿರಚಿತ ವೈಜ್ಞಾನಿಕ ವೈಚಾರಿಕ ಪ್ರಜ್ಞೆ-2, ವಿಶ್ವಗುರು ಬಸವಣ್ಣನವರ ನೂರೊಂದು ವಚನ ದೀಪ್ತಿ ಮಾಲಿಕೆ-4 ಕೃತಿಗಳನ್ನು ಲೋಕರೆ​‍್ಣ ಮಾಡಲಾಯಿತು.ಮಂಜುನಾಥ ಬೋಸಲೆ, ಪುಟ್ಟ ಬಾಲಕಿ ನಿಸರ್ಗ ಕರ್ಕರಿ ಭರತನಾಟ್ಯ ಪ್ರದರ್ಶನ ನೀಡಿದರು. ಲಿಂಗರಾಜ ಸಿಂಗಾಡಿ, ಶಂಕರ ಅಂಬಿಗೇರ ಸಿನಿಮಾ ಹಾಡು ಹೇಳಿದರು. ಅಕ್ಷತಾ ಮಹಾಲಿಂಗಪುರಮಠ ನೃತ್ಯ ಪ್ರದರ್ಶಿಸಿದರು. ಸಾನಿಯಾ ಹುನಗುಂದ ಹಾಗೂ ತಂಡದಿಂದ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ-ಅಲ್ಲಮಪ್ರಭು ನಡುವೆ ನಡೆದ ಸಂವಾದ ಕುರಿತು ಪ್ರದರ್ಶನ ನೀಡಿದರು. 

ಓಲೆಮಠದ ಆನಂದ ದೇವರು ಶ್ರೀಗಳು ನೇತೃತ್ವ ವಹಿಸಿದ್ದರು. ಹುಲ್ಯಾಳದ ದುಂಡಯ್ಯ ಸ್ವಾಮಿಗಳು, ಆಲಗೂರಿನ ಲಕ್ಷ್ಮಣ ಮುತ್ಯಾ, ಅರ್ಜುಣಗಿಯ ಗುರುದೇವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಲೆ ಮರೆಯ ಕಾಯಿಯಂತ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಹೋಳಗಿ, ಬಾಹುಬಲಿ ಆಲಗೂರ, ಅಪ್ಪಾಸಾಹೇಬ ದೇವರವರ, ಕಾಸಪ್ಪ ಸನದಿ, ಪ್ರಭಾ ಪಾರಸಿ, ಭಾರತಿ ಜಾಧವ, ಗಿರಿಜಾ ದೊಡಮನಿ, ಮುತ್ತವ್ವ ಪೂಜಾರಿ, ಅಬೂಬಕರ ಕುಡಚಿ, ಸಿ.ಜಿ. ಕಡಕೋಳ, ಪಿ.ಬಿ. ಅಜ್ಜನವರ, ನರಸಿಂಹ ಕಲ್ಲೊಳ್ಳಿ, ಏಗಪ್ಪ ಸವದಿ, ಪ್ರಭು ಜನವಾಡ, ಎಚ್‌.ಎಂ. ಶೆಟ್ಟರ, ರಾಜು ಗಸ್ತಿ, ಎಂ.ಬಿ. ಇಂಡಿ, ಧನರಾಜ ಮೋರೆ, ಮಲ್ಲಿಕಾರ್ಜುನ ನಿಂಗನೂರ ಇತರರು ವೇದಿಕೆಯಲ್ಲಿ ಇದ್ದರು. ಶ್ರುತಿ ನಿಗಡೆ, ಎಸ್‌.ಎಚ್‌. ಮಠಪತಿ ನಿರೂಪಿಸಿ, ವಂದಿಸಿದರು.