ಬಸವರಾಜ ಕರಬಸಣ್ಣವರ ಸೇವೆ ಸ್ಮರಣೀಯ: ಗಣ್ಯರ ಮೆಚ್ಚುಗೆ

ಬಸವರಾಜ ಕರಬಸಣ್ಣವರ ಸೇವೆ ಸ್ಮರಣೀಯ: ಗಣ್ಯರ ಮೆಚ್ಚುಗೆ  Basavaraja Karabasannavara's service is memorable: Dignitaries express appreciation

ಬೆಟಗೇರಿ 22: ಶ್ರೀ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ 30 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಡಿ ದರ್ಜೆ ಸಹಾಯಕ ಬಸವರಾಜ ಯಲ್ಲಪ್ಪ ಕರಬಸಣ್ಣವರ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್‌.ಬಿ. ಗಡಾದ್, ಬಸವರಾಜ ಕರಬಸಣ್ಣವರು ಮೂರು ದಶಕಗಳ ಕಾಲ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.  ಮತ್ತೋರ್ವ ಮುಖ್ಯ ಅತಿಥಿ ಸಿದ್ದಪ್ಪ ಲಿಂಗದಾಳ (ಆರೋಗ್ಯ ಇಲಾಖೆ) ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಬಸವರಾಜ ಕರಬಸಣ್ಣವರು ನೀಡಿದ ಸೇವೆ ಅಪಾರವಾಗಿದೆ ಎಂದು ಶ್ಲಾಘಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯೆ ಶ್ರೀಮತಿ ವೈ.ಆರ್‌. ಹಿರೇಗೌಡರ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಿಕೊಂಡು ಸಂಸ್ಥೆಯ ಎಲ್ಲ ಚಟುವಟಿಕೆಗಳಲ್ಲಿ ಬಸವರಾಜ ಕರಬಸಣ್ಣವರು ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖ-ಶಾಂತಿಯಿಂದ ಕೂಡಿರಲಿ ಎಂದು ಹಾರೈಸಿದರು.  

ದಿವ್ಯ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳು, ನಿವೃತ್ತಿಯ ನಂತರವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.  

ಸನ್ಮಾನ ಸ್ವೀಕರಿಸಿದ ಬಸವರಾಜ ಕರಬಸಣ್ಣವರು, ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಸಂಸ್ಥೆಯ ಆಡಳಿತ ಮಂಡಳಿ, ಸಹೋದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.  ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಭೂಮಿಕಾ ಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಸಂಸ್ಥೆಯ ಸಂಸ್ಥಾಪಕ ಶ್ರೀ ಗಣೇಶಸಿಂಗ್ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಈ ಸಂದರ್ಭದಲ್ಲಿ ಸಿದ್ದಪ್ಪ ಹರಿಜನ್, ಬಿ.ಎಲ್‌. ಹೊಸಳ್ಳಿ, ಸಿ.ಎಂ. ಮಾರನಬಸರಿ, ಕೆ.ಎಂ. ಮೂಲಿಮನಿ, ಎಸ್‌.ಆರ್‌. ವಾಲ್ಮೀಕಿ, ಎಸ್‌.ವಿ. ಹಿರೇಮಠ, ಎಸ್‌.ಬಿ. ಚೇಗರೆಡ್ಡಿ, ಎಸ್‌.ಬಿ. ಗೌಡರ, ಐ.ಎಸ್‌. ಅಂಗಡಿ, ಕವಿತಾ ಮಡಿಗಾರ, ಹನುಮಂತಸಿಂಗ್ ಬ್ಯಾಳಿ, ರವೀಂದ್ರ ಮೀಟಡೆ, ಶ್ರೀಮತಿ ಅಕ್ಕಮ್ಮ, ಶ್ರೀಮತಿ ಮಂಜುಳಾ ಹಾಗೂ ಬಸವರಾಜ ಕರಬಸಣ್ಣವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.