ಬಸವಣ್ಣ ಒಂದು ಜಾತಿಗೆ ಸೀಮಿತ ಬೇಡ: ಸಾಹಿತಿ ಪತ್ತಾರ
Basavanna should not be limited to one caste: Sahitya Pattara
ತಾಳಿಕೋಟಿ 21 : ಬಸವ ಜಯಂತಿ ದಿನದಂದು ವಿಶ್ವಗುರು ಬಸವಣ್ಣನನ್ನು ಕೇವಲ ಪೂಜಿಸಿ, ಅದ್ದೂರಿ ಮೆರವಣಿಗೆ ತಗೆದು ಹಾಡಿ ಹೊಗಳಿದರೆ ಸಾಲದು ಅವನ ಬದುಕಿನ ಆದರ್ಶಗಳು ನಮ್ಮ ಜೀವನದ ಭಾಗವಾಗಬೇಕು ಎಂದು ಜೆಎಸ್ಜಿ ಫೌಂಡೇಶನ್ ಕಾರ್ಯದರ್ಶಿ ಸಾಹಿತಿ ಶ್ರೀಕಾಂತ ಪತ್ತಾರ ಹೇಳಿದರು. ಸೋಮವಾರ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ತಾಲೂಕ ಆಡಳಿತ ತಾಲೂಕು ಪಂಚಾಯತ ಪುರಸಭೆ ಹಾಗೂ ಬಸವೇಶ್ವರ ಉತ್ಸವ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಬಸವಣ್ಣ 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ವಿಶ್ವದ ಮಹಾನ್ ಚೇತನ. ಅವನನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಅಕ್ಷಮ್ಯ ಅಪರಾಧವಾಗಿದೆ. ಎಲ್ಲರೂ ನನ್ನವರೆನ್ನುವ ವಿಶ್ವಭಾತೃತ್ವ ಹಾಗೂ ಎನಗಿಂತ ಕಿರಿಯರಿಲ್ಲ ಎಂಬ ವಿನಮ್ರ ಪ್ರಭಾವದಿಂದ ಜಗತ್ತನ್ನೇ ಬೆಳಗಿದ ಜಗಜ್ಯೋತಿ. ಇಡೀ ವಿಶ್ವಕ್ಕೆ ಕಾಯಕ ತತ್ವವನ್ನು ಸಾರಿದ ಶ್ರೇಷ್ಠ ಮಾನವತಾವಾದಿ ಬಸವಣ್ಣನವರ ಬದುಕಿನ ಅಧ್ಯಯನ ಇಂದಿನ ಅಗತ್ಯವಾಗಿದೆ, ನಮ್ಮ ಯುವ ಪೀಳಿಗೆಗೆ ಅವರ ಚಿಂತನೆಗಳನ್ನು ತಿಳಿಸಿಕೊಡುವ ಕಾರ್ಯ ನಾವೆಲ್ಲರೂ ಒಗ್ಗೂಡಿ ಮಾಡಬೇಕಾಗಿದೆ ಅಂತಹದೊಂದು ಆತ್ಮವಲೋಕನಕ್ಕೆ ಇಂದಿನ ಈ ಜಯಂತಿ ಕಾರ್ಯಕ್ರಮ ಸಾಕ್ಷಿಯಾಗಲಿ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಆರಿ್ಬ.ದಮ್ಮೂರಮಠ ಮಾತನಾಡಿ ವಿಶ್ವದ ಮೊದಲ ಪ್ರಜಾಪ್ರಭುತ್ವ ಅನುಭವ ಮಂಟಪವನ್ನು ಜಾರಿಗೆ ತಂದ ಜಗಜ್ಯೋತಿ ವಿಶ್ವಗುರು ಸಂಸ್ಕೃತಿಕ ನಾಯಕ ಬಸವಣ್ಣನವರನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದರು. ತಹಸಿಲ್ದಾರ್ ಪ್ರದೀಪ ದೇವಗಿರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿಆರ್ಸಿ ರಾಜು ವಿಜಾಪುರ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ, ಖ್ಯಾತವಾಗ್ಮಿ ಶ್ರೀಕಾಂತ ಪತ್ತಾರ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಮಹನೀಯರನ್ನು ತಾಲೂಕ ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಇಒ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಪಿಎಸ್‌ಐ ಜ್ಯೋತಿ ಖೋತ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಸಹಕಾರಿ ಬ್ಯಾಂಕ್ ನಿರ್ದೇಶಕ ಮುರಿಗೆಪ್ಪ ಸರಶಟ್ಟಿ, ಬಸವೇಶ್ವರ ಉತ್ಸವ ಸಮಿತಿ ಅಧ್ಯಕ್ಷ ಮಹಾಂತೇಶ ಮುರಾಳ, ಕಾಶಿನಾಥ ಮುರಾಳ, ಆರ್ ಎಸ್ ಪಾಟೀಲ (ಕೂಚಬಾಳ), ಗಂಗಾಧರ ಕಸ್ತೂರಿ, ಮಾನಸಿಂಗ್ ಕೊಕಟನೂರ, ಇಬ್ರಾಹಿಂ ಮನ್ಸೂರ, ಪ್ರಕಾಶ ಹಜೇರಿ, ಅಮೀತಸಿಂಗ್ ಮನಗೂಳಿ, ಶಿವಶಂಕರ ಹಿರೇಮಠ, ವಿಜಯಸಿಂಗ್ ಹಜೇರಿ, ಪರಶುರಾಮ ತಂಗಡಗಿ, ಸಾಹೇಬಗೌಡ ಬಿರಾದಾರ, ಶರಣಗೌಡ ಪಾಟೀಲ, ಪ್ರಭು ಬಿಳೆಭಾವಿ, ಸಂಗನಗೌಡ ಅಸ್ಕಿ, ರಾಮನಗೌಡ ಬಾಗೇವಾಡಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹಿಬೂಬಕೆಂಭಾವಿ, ಜಗದೀಶ ಬಿಳೆಭಾವಿ, ಡಿ.ಕೆ. ಪಾಟೀಲ,ನಾಗೇಶ ಕಟ್ಟಿಮನಿ, ಎಂ.ಕೆ. ಮೇತ್ರಿ,ಮಹಮ್ಮದ್ ಶಫೀಕ ಇನಾಮದಾರ, ನಾಗಪ್ಪ ಚಿನಗುಡಿ, ಅಶೋಕ ಜಾಲವಾದಿ, ರಾಜು ಅಲ್ಲಾಪೂರ, ಬಸವ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 