ಬಸವಣ್ಣನವರು ಅಕ್ಷರಶಃ ಸಾಂಸ್ಕೃತಿಕ ನಾಯಕ: ಹೇಮಲತಾ ನಾಯಕ
Basavanna is literally a cultural leader: Hemalatha Nayaka
ಲೋಕದರ್ಶನ ವರದಿ
ಕೊಪ್ಪಳ 21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ನಗರಸಭೆ, ಬಸವ ಜಯಂತ್ಯುತ್ಸವ ಸಮಿತಿ ಕೊಪ್ಪಳ ಮತ್ತು ಬಸವಾನುಯಾಯಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏಪ್ರೀಲ್ 20ರಂದು ಕರ್ನಾಟಕದ ಸಾಂಸ್ಕೃತಿಕನಾಯಕ ಶ್ರೀ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು. ಶ್ರೀ ಗವಿಸಿದ್ದೇಶ್ವರ ಮಠದ ಬಯಲ ಆವರಣದಲ್ಲಿ ಇಳಿಹೊತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಬಸವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಹೇಮಲತಾ ನಾಯಕ, ಬಸವಣ್ಣನವರು ತೆರೆದ ಪುಸ್ತಕ ಇದ್ದಂತೆ. ಬಸವ ಹೇಳಿದ ಹಾದಿಯಲ್ಲಿ ನಾವು ನಡೆಯೋಣ. ಬಸವಣ್ಣನೆಂಬ ಬೆಳಕು ಉದಯಿಸಿದ್ದರಿಂದಲೇ ಈ ಜಗದ ಬದುಕು ಪಾವನವಾಯಿತು ಎಂದು ನಾವೆಲ್ಲರೂ ತಿಳಿಯಬೇಕು. ಅಂತಹ ಮಾನವತವಾದಿ ಬಸವಣ್ಣನವರು ಅಕ್ಷರಶಃ ಸಾಂಸ್ಕೃತಿಕ ನಾಯಕ ಎಂದು ತಿಳಿಸಿದರು. ವೈಚಾರಿಕ ವಿಚಾರಧಾರೆಯ ವಚನಗಳ ಓದುವ ಮೂಲಕ ಯುವಕರು ಧನಾತ್ಮಕ ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಬಸವ ಕಾರುಣ್ಯ ಪುರಸ್ಕಾರ ಪ್ರದಾನ: ಉತ್ತಮ ಸಾಧಕರಾದ, ದಿವ್ಯಾಂಗ ಮಕ್ಕಳೊಂದಿಗೆ ಬದುಕುತ್ತ, ಮಕ್ಕಳ ಪಾಲನೆ ಪೋಷಣೆ ಮಾಡಿ ಸುಸ್ಥಿರ ಬದುಕು ಕಟ್ಟಿಕೊಂಡ ಶ್ರೀ ಯಲ್ಲಮ್ಮ ಬೆಳ್ಳಟ್ಟಿ ಅವರಿಗೆ, ಕೊಪ್ಪಳ ಇತಿಹಾಸದಲ್ಲಿ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿ ತಂದುಕೊಟ್ಟ ಕೊಟ್ಟೂರ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ, 600ಕ್ಕೆ 598 ಅಂಕ ಗಳಿಸಿ ಸಾಧನೆ ತೋರಿದ ಸಂಗೀತ ಪಾಟೀಲ ಅವರಿಗೆ, ವೃತ್ತಿಯಲ್ಲಿ ಪಶು ವೈದ್ಯರಾದ ಜಾನುವಾರು ಸಂರಕ್ಷಕರಾದ ವಿಕಲಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಸಹಾಯ ಸೌಕರ್ಯ ಮಾಡುತ್ತಿರುವ, ಪರಿಸರ, ನಾಡು ನುಡಿಯ ಲೇಖನ ಬರೆಯುವ ಡಾ.ಜಿ ಎಸ್ ಅಶ್ವತ್ಥಕುಮಾರ ಅವರಿಗೆ ಸಮಾರಂಭದಲ್ಲಿ ಬಸವ ಕಾರುಣ್ಯ ಪುರಸ್ಕಾರ 2026 ನೀಡಿ ಗೌರವಿಸಲಾಯಿತು. ಗವಿಸಿದ್ದಪ್ಪ ಕೊಪ್ಪಳ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 