ಬಸವಣ್ಣವರ ತತ್ವ ಆದರ್ಶಗಳು ಜಗತ್ತಿಗೆ ಮಾದರಿ: ಡಾ ಚಂದ್ರಶೇಖರ ಗುಡಸಿ

ಬಸವಣ್ಣವರ ತತ್ವ ಆದರ್ಶಗಳು ಜಗತ್ತಿಗೆ ಮಾದರಿ: ಡಾ ಚಂದ್ರಶೇಖರ ಗುಡಸಿ Basavanna's principles and ideals are a model for the world: Dr Chandrashekar Gudasi

     ಮುಗಳಖೋಡ 15: ಬಸವಣ್ಣವರ ತತ್ವ ಆದರ್ಶಗಳು ಜಗತ್ತಿಗೆ ಮಾದರಿಯಾಗಿವೆ. ಅಣ್ಣ ಎಂದರೆ ಬಸವಣ್ಣ ಅಕ್ಕ ಅಂದ್ರೆ ಅಕ್ಕಮಹಾದೇವಿ, ಲಿಂಗಾಯತ ಧರ್ಮದಲ್ಲಿ 102 ಪಂಗಡಗಳಿವೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ, ಲಿಂಗಾಯಿತ ಧರ್ಮವನ್ನು ಕೈ ಹಿಡಿಯುವವುರು ಜಗತ್ತಿನಲ್ಲಿ ಇಲ್ಲ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಡಾ ಚಂದ್ರಶೇಖರ ಗುಡಸಿ ಅವರು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.  

   ಅವರು ಪಟ್ಟಣದ ಕಿನಾಲ್ ಬಸವೇಶ್ವರ ದೇವಸ್ಥಾನದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.   

ಬಸವಣ್ಣವರ ತತ್ವ ಆದರ್ಶನಗಳನ್ನು ಮುಗುಳಖೋಡದಿಂದ ಆಡಿ ಮಠದವರೆಗೆ ಈ ಜಾಗತಿಕ ಸಭೆಯನ್ನು ನಡೆಸಲಾಗುವುದು ಇದರ ಮೂಲಕ ಬಸವಣ್ಣನವರ ವಿಚಾರಗಳು ಹಾಗೂ ತತ್ವಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲಾಗುವುದು. ಬಸವಣ್ಣವರ ಕಾಲದ 2.86 ಕೋಟಿ ವಚನಗಳನ್ನು ರಚಿಸಿ ರಕ್ಷಿಸಿ ಸಂಗ್ರಹಿಸಲಾಗಿತ್ತು. ಇದರಲ್ಲಿ ಫ ಗು ಹಳೆಕಟ್ಟೆಯ ಹರ್ಡೇಕರ್ ಮಂಜಪ್ಪನವರ ಪಾತ್ರ ಪ್ರಮುಖವಾಗಿದೆ. ಇಂತಹ ತತ್ವ ಆದರ್ಶನಗಳನ್ನು ಮನೆ ಮನೆಗೂ ಮುಟ್ಟಿಸುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ ಎಂದರು. 

ಸರ್ವೇ ಜನ ಸುಖಿನೋ ಭವಂತು ಎಂಬ ತತ್ವವನ್ನು ಹೊಂದಿರುವ ಏಕೈಕ ಧರ್ಮ ಲಿಂಗಾಯತ ಧರ್ಮವಾಗಿದೆ. ಸಕಲ ಜೀವಿಗಳಿಗೆ ಲೇಸನ್ನ ಬಯಸುವ ಧರ್ಮ ಲಿಂಗ ಧರ್ಮವಾಗಿದೆ. ಪ್ರಸ್ತುತವಾಗಿ ಕರ್ನಾಟಕದಲ್ಲಿ ಒಂದು ಕೋಟಿ ಮಹಾರಾಷ್ಟ್ರದ 8 ಜಿಲ್ಲೆಗಳಲ್ಲಿ 20 ಲಕ್ಷ ತೆಲಂಗಾಣ ಹಾಗೂ ಆಂಧ್ರ​‍್ರದೇಶ ಹೀಗೆ 3 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಈ ಧರ್ಮದಲ್ಲಿ ನಾವು ಕಾಣುತ್ತೇವೆ.

         ಪ್ರತಿಯೊಬ್ಬರಿಗೂ ಸಪ್ತಶೀಲಗಳ ಒಡಲನ್ನು ನೀಡುವ ಕನ್ನಡದ ಮೊದಲ ಧರ್ಮ ಲಿಂಗ ಧರ್ಮವಾಗಿದೆ. ಈ ಧರ್ಮವು ಪಂಚ ಸೂತ್ರಗಳಾದ ಗುರು ಲಿಂಗ ಜಂಗಮ ಕಾಯಕ ಹಾಗೂ ದಾಸೋಹ ತತ್ವಗಳ ಆಧಾರ ಮೇಲೆ ನಿಂತಿದೆ. ದೇಹವನ್ನು ದೇವಾಲಯವನ್ನಾಗಿಸಿದ ಏಕೈಕ ಧರ್ಮ ಲಿಂಗಾಯತ ಧರ್ಮವಾಗಿದೆ ಎಂದು ಗುಡಸಿ ಅವರು ಹೇಳಿದರು. ಮಲ್ಲಿಕಾರ್ಜುನ ದೇವಸ್ಥಾನ ಕಮಿಟಿಯ ಮುಖ್ಯಸ್ಥ ಶ್ರೀ ಭೀಮಪ್ಪ ಯಡವನ್ನವರ ಮತ್ತು ಶಿವಬಸಪ್ಪ ಶೆಖ್ಖಿ ಅವರನ್ನು ಸನ್ಮಾನಿಸಲಾಯಿತು.     

 ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭೆಯ ಉಪಾಧ್ಯಕ್ಷ ಬಸವರಾಜ ಮಂಟೂರ, ರಾಯಬಾಗ ತಾಲೂಕ ಘಟಕ ಅಧ್ಯಕ್ಷ ರೇವಪ್ಪ ರಾಮಪ್ಪ ಶಿವಾಪುರ, ಶಂಕರ ಕೋರೆ, ಜಕ್ಕಪ್ಪ ಅಂದಾಣಿ, ಭೀಮಪ್ಪ ಯಡವನ್ನವರ, ಸಂಗಪ್ಪ ಹೊಸಪೇಟೆ, ಸಿದ್ದನ ಹೊಸಪೇಟೆ, ಪರ​‍್ಪ ಮಗಳಕೊಡ, ಗಿರಮಲ್ಲ  ಮುಧೋಳ, ಶಂಬು ಪಾಲಬಾವಿ, ಗಿರಮಲ್ಲ ಹೊಸಪೇಟೆ, ಪರ​‍್ಪ ಜಾನಮಟ್ಟಿ, ಗಿರಮಲ್ಲ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು. ಪ್ರಕಾಶ ಸಿ ಕಂಬಾರ ನಿರೂಪಿಸಿ ವಂದಿಸಿದರು.