ಬಸವಣ್ಣನವರ ಸಂದೇಶ ಇಂದಿಗೂ ಪ್ರಸ್ತುತ : ಮರಿ ಕೊಟ್ಟೂರು ದೇವರು
Basavanna's message is still relevant today: Marikottur Deva
ಲೋಕದರ್ಶನ ವರದಿ
ಕಂಪ್ಲಿ:22 : ನಮ್ಮ ನಡೆ-ನುಡಿ ಹೇಗಿರಬೇಕು ಎಂದು ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣನವರು ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ’ ಎಂದು ಶ್ರೀಧರಗಡ್ಡೆ ಹಾಗೂ ವಿರಕ್ತ ಕೊಟ್ಟೂರು ಶಾಖಾ ಮಠದ ಪರಮಪೂಜ್ಯ ಮರಿ ಕೊಟ್ಟೂರು ದೇವರು ಹೇಳಿದರು. ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ವೀರಶೈವ ಸಂಘದ ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ನಮ್ಮ ನಡೆಯಂತೆ ನುಡಿ ಇರಬೇಕು. ಕಾಯಕದ ಮೂಲಕ ಕೈಲಾಸ ಕಾಣಬೇಕು ಎಂಬ ಬಸವಣ್ಣನವರ ಸಂದೇಶ ಇಂದಿಗೂ ಪ್ರಸ್ತುತ’ ಎಂದರು.
ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದಲ್ಲಿ ಆಯೋಜಿಸಿದ್ದ ಬಸವ ಜಯಂತ್ಯೋತ್ಸವದಲ್ಲಿ ಗ್ರಾಮೀಣ ಭಾಗದ ವೀರಶೈವ ಸಮಾಜದವರು ಭಾಗವಹಿಸಿರುವುದು ಖುಷಿಯ ಜೊತೆಗೆ ಯಶಸ್ವಿಗೆ ಕಾರಣವಾಗಿದೆ ಎಂದರು.ಉಪನ್ಯಾಸಕ ಡಾ.ಸುನೀಲ್ ಮಾತನಾಡಿ, ಸ್ವತಂತ್ರ ವಿಚಾರ ಮಾಡಿದ ಮಹಾನ್ ವ್ಯಕ್ತಿ ಬಸವಣ್ಣ. ಅವರು ಇಡೀ ಜಗತ್ತಿಗೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಶಕ್ತಿಯನ್ನು ದಾರಿ ಎಳೆದು ಅನುಭವ ಮಂಟಪ ಕಟ್ಟಿದ್ದಾರೆ ಎಂದರು.ನಂತರ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಹಾಗೂ ವೀರಶೈವ ಸಂಘದ ಮಾಜಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಸೇರಿದಂತೆ ವಿವಿಧ ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವೀರಶೈವ ಸಂಘದ ಉಪಾಧ್ಯಕ್ಷ ಹೊನ್ನಳ್ಳಿ ಶಿವಪುತ್ರ್ಪ, ಕಾರ್ಯದರ್ಶಿ ವಾಗೀಶ್, ಖಜಾಂಚಿ ವಿ.ವಿದ್ಯಾಧರ, ಸಹ ಕಾರ್ಯದರ್ಶಿ ಪುಟ್ಟಿ ಸಚ್ಚಿನ್, ನಿರ್ದೇಶಕರಾದ ಎಸ್.ಡಿ.ಬಸವರಾಜ, ಟಿ.ಸುರೇಶ ರೆಡ್ಡಿ, ಯು.ಟೇಕೂರ್ಪ, ಪಿ.ಸೋಮನಗೌಡ, ಜೀರ್ ಗಾದಿಲಿಂಗ, ಎಚ್.ಎಸ್.ವಿರೇಶ, ಎಂ.ಮುರುಗೇಂದ್ರ, ಟಿ.ರೇಣುಕಾ ಸ್ಚಾಮಿ, ಕೆ.ಮರಿಶಾಂತಪ್ಪ, ಅಂಗಡಿ ಬಸವರಾಜ, ಆರ್.ರವಿಗೌಡ, ಎಚ್.ಸಂಗೀತಾ, ಬಿ.ಎಂ.ಪುಷ್ಪಾ, ಮುಖಂಡರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಶಶಿಧರ್ ಶಾಸ್ತ್ರಿ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಬಸವರಾಜ ಶಾಸ್ತ್ರಿ, ವಾಲಿ ಕೊಟ್ರ್ಪ, ಹೊನ್ನಳ್ಳಿ ಗಂಗಾಧರ, ಹೊಸಕೋಟೆ ಜಗದೀಶ, ಜಿ.ಚಂದ್ರಶೇಖರಗೌಡ, ಮಂಜುಗೌಡ, ಕೋರಿ ಚನ್ನಬಸವರಾಜ, ಜವುಕು ಶಂಕರ ಸೇರಿದಂತೆ ಅನೇಕರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 