ಬಸವನ ಬಾಗೇವಾಡಿ ಹಾಗೂ ಬಬಲೇಶ್ವರ ಶಾಸಕರೇ ರೈತರಿಗೆ ನ್ಯಾಯ ಕೊಡಿಸಿ: ಜಿಲ್ಲಾಧಿಕಾರಿಗಳಿಗೆ ಮನವಿ
Basavan Bagewadi and Babaleswar MLAs should provide justice to farmers: Appeal to the District Colle
ವಿಜಯಪುರ 04 : ಬಸವನ ಬಾಗೇವಾಡಿ, ಕೋಲ್ಹಾರ, ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನಲ್ಲಿ ಹಾದು ಹೋಗುವ 765 ಕೆ.ವಿ. ಕೂಡಗಿಯಿಂದ ಪುಣೆಗೆ ಹೋಗುವ ಟ್ರಾನ್ಸ್ ಮಿಶನ್ ಲೈನದಲ್ಲಿ ರೈತರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕೆಂದು ಬಸವನ ಬಾಗೇವಾಡಿ ಹಾಗೂ ಬಬಲೇಶ್ವರ ಶಾಸಕರೇ ರೈತರಿಗೆ ನ್ಯಾಯ ಕೊಡಿಸಿ ಇಲ್ಲವಾದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿ ರೈತ ಭಾರತ ಪಕ್ಷ (ರಿ) ಕರ್ನಾಟಕ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಬಸವನ ಬಾಗೇವಾಡಿ, ಕೋಲ್ಹಾರ, ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನಲ್ಲಿ ಹಾದು ಹೋಗುವ 765 ಕೆ.ವಿ. ಕೂಡಗಿಯಿಂದ ಪುಣೆಗೆ ಹೋಗುವ ಟ್ರಾನ್ಸ್ ಮಿಶನ್ ಲೈನದಲ್ಲಿ ಎಲ್ಲ ರೈತರಿಗೆ ಪರಿಹಾರ ಮತ್ತು ಆದೇಶದ ಪ್ರತಿಯನ್ನು ನೀಡುವಲ್ಲಿ ದಬ್ಬಾಳಿಕೆ ಮಾಡಿ ರೈತರಿಗೆ ಮೋಸ ಮಾಡುತ್ತಿರುವದು ಕಂಡು ಬಂದಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ.
ಮುಂಬರುವ ದಿನಗಳಲ್ಲಿ ಈ ಜಮೀನುಗಳು ಹೆದ್ದಾರಿಗೆ ಹೊಂದಿಕೊಂಡಿರುತ್ತವೆ. ಆ ಜಮೀನುಗಳಿಗೆ ಎನ್.ಎ. ಆಗುವ ಹಾಗೆ ರೈತರಿಗೆ ಒಪ್ಪಿಗೆ ನೀಡಬೇಕು. ರೈತರ ಮೇಲೆ ಪೊಲೀಸ್ ಹಾಗೂ ಕಂದಾಯ ಇಲಾಖೆ ದಬ್ಬಾಳಿಕೆ ಮಾಡಿ ರೈತರ ಹೊಲಗಳಿಗೆ ಹೋಗಿ ರೈತರ ಮೇಲೆ ಕೈ ಮಾಡಿ ಅಂಜಿಸಿ ಕಾಮಗಾರಿ ಮಾಡಿಸುತ್ತಿರುವುದು ಮತ್ತು ರೈತರ ಬೆಳೆಗಳನ್ನು ನಾಶಮಾಡಿರುವುದು ತುಂಬಾ ದುಃಖಕರ ಸಂಗತಿ. ಕೂಡಲೇ ರೈತರ ಕ್ಷಮೆ ಕೇಳಬೇಕು ಮತ್ತು ಒತ್ತಾಯು ಪೂರ್ವಕವಾಗಿ ಕಾಮಗಾರಿಯನ್ನು ಮಾಡಬಾರದು.
ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿದ ಆದೇಶದ ಪ್ರತಿಯನ್ನು ಸಂಬಂಧಿಸಿದ ಕಕ್ಷಿಗಾರರಿಗೆ ತಲುಪಿಸದೇ ಡಬ್ಲ್ಯೂಎಸ್‌ಆರ್ ಎಲ್‌ಟಿಡಿ ನವರಿಗೆ ಏಕ ಪಕ್ಷೀಯವಾಗಿ ತಲುಪಿಸಿ ಅಕ್ರಮವಾಗಿ ಕಾಮಗಾರಿಯನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತದ ಕುಮ್ಮಕ್ಕು ಇರುವುದು ಕಂಡು ಬರುತ್ತದೆ. ಕೂಡಲೇ ಬಸವನ ಬಾಗೇವಾಡಿ ಶಾಸಕರು ಹಾಗೂ ಬಬಲೇಶ್ವರ ಮತಕ್ಷೇತ್ರದ ಶಾಸಕರು ರೈತರ ಹಿತ ಕಾಯಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಇದೇ ಕಾಮಗಾರಿಗೆ ಸಂಬಂಧಿಸಿದಂತೆ ದಿನಾಂಕ : 13-02-2024 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಾಧಿತ ರೈತರ ಸಮಾಲೋಚನಾ ಸಭೆಯು ಅಪೂರ್ಣಗೊಂಡಿದ್ದರೂ ಯಾವುದೇ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗದೇ ಇದ್ದರೂ ಸಭೆಯನ್ನು ಮುಂದಿನ ಗೊತ್ತುಪಡಿಸಿ ರೈತರಿಗೆ ಕೂಡಲೇ ಗತಿಸಿದ ಸಭೆಯಲ್ಲಿ ಅಂತಿಮ ನಿರ್ಣಯವನ್ನು ಕೈಗೊಳ್ಳೋಣ ಎಂದು ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಮುಂದೂಡಿದರು. ಈಗ ರೈತರಿಗೆ ನೀಡಿರುವ ಸಭಾ ನಡಾವಳಿಯ ವರದಿಯಲ್ಲಿ ಅಂದೇ ಸಭೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು. ಹಾಗೂ ರೈತರು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಅರ್ಜಿಯನ್ನು ಹಾಕಿದ್ದು ಅದರ ವಿಡಿಯೋ ಕ್ಲಿಪ್ಪನ್ನು ರೈತರು ಕೇಳಿರುತ್ತಾರೆ. ಅದನ್ನು ಬೇಗನೆ ರೈತರಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 