ಬಸವಕೇಂದ್ರ-ವಚನ ಶ್ರಾವಣ

ಬಸವಕೇಂದ್ರ-ವಚನ ಶ್ರಾವಣ  Basavakendra-Vachana Shravan

ಹುಬ್ಬಳ್ಳಿ, 23 ; ಬಸವಕೇಂದ್ರ ಪ್ರತಿವರ್ಷದಂತೆ ಶ್ರಾವಣ ಮಾಸದಲ್ಲಿ ವಚನ ಶ್ರಾವಣ ಎಂಬ ಮನೆ-ಮನಗಳಿಂದ ಮನೆ-ಮನಗಳಿಗೆ ವಚನ ಸಂದೇಶ ನೀಡುವ ವಚನ ಶ್ರಾವಣ ಕಾರ್ಯಕ್ರಮ  ವಿದ್ಯಾನಗರ ಕಲ್ಲೂರ ಬಡಾವಣೆಯ ಶ್ರೀ ಸಿದ್ದಾರೂಢ ಸಭಾಭವನದಲ್ಲಿ ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಎಸ್‌. ಅನಾಮಿ ಅವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.  

ನರಗುಂದದ ನಿವೃತ್ ಉಪನ್ಯಾಸಕ ಪ್ರೊ ಮಲ್ಲಿಕಾರ್ಜುನ ಯಾವಗಲ್ ಅವರು ಬಸವಣ್ಣನವರ ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ... ಎಂಬ ವಚನ ಕುರಿತು ಅನುಭಾವ ನೀಡದರು.  ಎರಡು ಮರೆಯಬೇಕು. ಎರಡು ನೆನಪು ಇಟ್ಟುಕೊಳ್ಳಬೇಕು. ದೇವರು ಇದ್ದಾನೆ, ಸಾವು ನಿಶ್ಚೀತ ನೆನಪಿಟ್ಟುಕೊಳ್ಳಬೇಕು. ಉಪಕಾರ ಮಾಡಿರುವುದನ್ನು, ಅಪಕಾರ ಮಾಡಿರುವವರನ್ನು ಮರೆಯಬೇಕು. ಸಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಬಸವಾದಿ ಶರಣರು. ಮಹಿಳಾ ಸ್ವಾತಂತ್ರ್ಯ, ಶ್ರಮ ಸಂಸ್ಕೃತಿ, ಸಾರ್ವಜನಿಕ ಶಿಕ್ಷಣ ಜಾರಿಗೆ ತಂದವರು ಬಸವಣ್ಣನವರು. ಬಸವಾದಿ ಶರಣರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡು ಮೊದಲು ತಾವು ಶುದ್ಧವಾಗಿ ಸಮಾಜದ ಶುದ್ಧಿಗಾಗಿ, ಸಮಷ್ಟಿ ಕಲ್ಯಾಣಕ್ಕೆ ಶ್ರಮಿಸಿದ್ದಾರೆ ಎಂದರು.   

ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಎಸ್‌. ಅನಾಮಿ,  ಸಾಹಿತಿ ಪ್ರೊ ಎಸ್‌.ವಿ.ಪಟ್ಟಣಶೆಟ್ಟಿ, ಕಾಲನಿಯ ಅಧ್ಯಕ್ಷ ಶಿವಲಿಂಗಪ್ಪ ಕತ್ತಿಶೆಟ್ಟರ, ಆರಿ​‍್ಸ.ಹಲಗತ್ತಿ, ಸಾವಿತ್ರಿ ಬಸವರಾಜ ಅನಾಮಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ವೀರಣ್ಣ ಗೊವೇಶ್ವರ,  ಡಾ. ಪ್ರಕಾಶ ಮುನ್ನೋಳಿ, ಪ್ರಬು ಅಂಗಡಿ, ಕೆ.ಎಸ್‌. ಇನಾಮತಿ, ಎಸ್‌.ವಿ.ಕೊಟಗಿ,  ಬಿ.ಎಲ್‌.ಲಿಂಗಶೆಟ್ಟರ, ಸಿದ್ಧಲಿಂಗೇಶ ವಾಲಿ, ಬಸವರಾಜ ಶೇಡಬಾಳ, ನಿಲಗಂಗಾ ಹಳ್ಳಾಳ, ವಿದ್ಯಾ ಲಿಂಗಶೆಟ್ಟರ, ಸಂಜೋತಾ ಪಾಟೀಲ, ರೇಖಾ ನಾರಾ, ಉಮಾ ಹುಲಿಕಂತಿಮಠ, ವಚನಾ ಹಳ್ಳಾಳ, ಮುಂತಾದವರು ಇದ್ದರು.