ಬಸವಕೇಂದ್ರದ ವಚನ ಶ್ರಾವಣ

ಬಸವಕೇಂದ್ರದ ವಚನ ಶ್ರಾವಣ Basavakendra's Vachana Shravana

ಲೋಕದರ್ಶನ ವರದಿ

ಹುಬ್ಬಳ್ಳಿ  ೨೪: ಬಸವಕೇಂದ್ರದ ವತಿಯಿಂದ ವಚನ ಶ್ರಾವಣ ಕಾರ್ಯಕ್ರಮವು ಆಗಸ್ಟ್ ೨೫ರಂದು ಸಂಜೆ ೬ ಗಂಟೆಗೆ ಕಂಚಗಾರಗಲ್ಲಿಯ ನಗರೇಶ್ವರ ಗುಡಿ ಸಮೀಪದ ಅನಸೂಯಾ ಅರಕೇರಿ ಅವರ ಮನೆಯಲ್ಲಿ ನಡೆಯಲಿದೆ. 

ಬಸವಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಳಾಳ ಅವರು ಬಸವಣ್ಣನವರ “ಉಳ್ಳವರು ಶಿವಾಲಯ ್ಕ್ಣ¿್ದ್ಝ್ಘ್ದ…'' ಎಂಬ ವಚನದ ಕುರಿತು ಅನುಭಾವ ನೀಡಲಿದ್ದಾರೆ ಎಂದು ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ತಿಳಿಸಿದ್ದಾರೆ. 

ತಿಂಗಳ ಪರ್ಯಂತ ನಡೆಯುವ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಡಾ. ಸುರೇಶ ಡಿ. ಹೊರಕೇರಿ ಮನವಿ ಮಾಡಿದ್ದಾರೆ.