ಹತ್ಯೆಯಾದ ಕುನ್ನೂರ ಮನೆಗೆ ಶ್ರೀಗಳ ಭೇಟಿ, ಸಾಂತ್ವನ
Basava Jaya Mrityunjaya Swamiji visits Shivananda Kunnur's house
ಶಿಗ್ಗಾವಿ 30: ಪಂಚಮಸಾಲಿ ಪಂಚ ಸೈನ್ಯ ತಾಲೂಕ ಅಧ್ಯಕ್ಷ ಹಾಗೂ ಗುತ್ತಿಗೆದಾರ ಶಿವಾನಂದ ಕುನ್ನೂರ ಅವರನ್ನು ದುಷ್ಕರ್ಮಿಗಳು ಹಾಡುಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಮಾಡಿ ಮರಣ ಹೊಂದಿದ ಕಾರಣ ಇವರ ಮನೆಗೆ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಬೇಟಿ ಕೊಟ್ಟು ಸಾಂತ್ವನ ಹೇಳಿದರು. ಶ್ರೀಗಳ ಪಾದಗಳಿಗೆ ಶಿವಾನಂದ ಕುನ್ನೂರ ಧರ್ಮಪತ್ನಿ ನಮಸ್ಕರಿಸಿ ನನ್ನ ಗಂಡನನ್ನು ಹತ್ಯೆಗೈದವರಿಗೆ ಗಲ್ಲು ಶಿಕ್ಷೆ ಆಗಬೇಕು ಹಾಗೂ ಇನ್ನೂ 5-6 ಜನರ ಹೆಸರು ಹೇಳುತ್ತೇನೆ ಅವರಿಗೆ ಪೋಲಿಸ ತನಿಖೆಯಾಗಿ ಶಿಕ್ಷೆಯಾಗಬೇಕು ಎಂದು ಸ್ವಾಮೀಜಿಗಳಿಗೆ ತಿಳಿಸಿದರು.
ಶ್ರೀಗಳು ಹಾವೇರಿ ಜಿಲ್ಲೆಯ ಹೆಚ್ಚುವರಿ ಪೋಲಿಸ ಅಧೀಕ್ಷಕ ಲಕ್ಷ್ಮಣ ಶಿರಕೋಳ ಅವರಿಗೆ ಪೋನ ಮಾಡಿ ಕುನ್ನೂರ ಕುಟುಂಬಕ್ಕೆ ನ್ಯಾಯಬದಗಿಸುವ ಕೆಲಸವಾಗಬೇಕು ಎಂದರು.ಈ ಸಂದರ್ಭದಲ್ಲಿ ಪಂಚ ಸೈನ್ಯದ ರಾಜ್ಯಾಧ್ಯಕ್ಷ ರುದ್ರಗೌಡ, ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷರಾದ ವೀರೇಶ್ ಆಜೂರ, ಶಿವಾನಂದ ಬಾಗೂರ, ಮುಖಂಡರಾದ ಮಂಜುನಾಥ ಮಣ್ಣಣ್ಣವರ, ಬಸಲಿಂಗಪ್ಪ ನರಗುಂದ ಸೇರಿದಂತೆ ಕುಟುಂಬದ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 