ಪತ್ರಕರ್ತ ಸಿಂಗೇಗೋಳಗೆ ಬಸವ ಚೇತನ ಪ್ರಶಸ್ತಿ: ಸಂತಸ ವ್ಯಕ್ತಪಡಿಸಿದ ಕಿವಡೆ
Basava Chetana award for journalist Singegola
ಇಂಡಿ 09: ಪತ್ರಿಕಾ ರಂಗದಲ್ಲಿ ಅನುಪಮವಾದ ಸೇವೆ ಸಲ್ಲಿಸುತ್ತಿರುವ ಈ ಭಾಗದ ಯುವ ನೇತಾರ ಪತ್ರಕರ್ತ ಮಿತ್ರ ಖಾಜು ಸಿಂಗೇಗೋಳ ಅವರಿಗೆ ರಾಜ್ಯ ಮಟ್ಟದ ಬಸವ ಚೇತನ ನೀಡಿ ಗೌರವಿಸಿದ್ದು ನಮಗೆಲ್ಲರಿಗೂ ಸಂತಸ ತಂದಿದೆ ಎಂದು ಇಂಡಿ ಮಂಡಲ ಬಿಜೆಪಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿವಡೆ ಹೇಳಿದ್ದಾರೆ.
ವಿಜಯಪುರದ ಅಮ್ಮಾ ಫೌಂಡೇಷನ್ ಎಲೆ ಮರಿಯ ಕಾಯಿಯಂತೆ ದಶಕದಿಂದ ವರದಿಗಾರರಾಗಿ ಪ್ರಸ್ತುತ ಪ್ರಧಾನ ಸಂಪಾದಕರಾಗಿ ಮಾಧ್ಯಮ ಕ್ಷೇತ್ರದಲ್ಲಿ ದಕ್ಷ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಖಾಜು ಸಿಂಗೇಗೋಳ ಅವರ ಕಾರ್ಯವೈಖರಿ ಗುರುತಿಸಿ ರಾಜ್ಯ ಮಟ್ಟದ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಳು ಉಳ್ಳವರ ಪಾಲಾಗುತ್ತಿರುವ ಇಂದಿನ ಕಾಲದಲ್ಲಿ ಸಾದಾ ಸರಳ ವ್ಯಕ್ತಿತ್ವದ ಶ್ರಮಜೀವಿ ಖಾಜು ಸಿಂಗೆಗೋಳ ಅವರ ಆಯ್ಕೆಯಿಂದ ಪ್ರಶಸ್ತಿಯ ಗೌರವ ಹೆಚ್ಚಿದಂತಾಗಿದೆ ಅಂದರೆ ಅತಿಶೋಕ್ತಿಯಲ್ಲ. ಬಡತನದಲ್ಲಿ ಹುಟ್ಟಿ ಬೆಳೆದು ನಿಸ್ಪಕ್ಷಪಾತ ಕಾರ್ಯ, ಶ್ರದ್ಧೆ, ಪ್ರಾಮಾಣಿಕತೆ ಆಸ್ತಿ ಮಾಡಿಕೊಂಡು ಈ ಭಾಗದ ಮಾದರಿ ಪತ್ರಕರ್ತರು ಎನಿಸಿಕೊಂಡಿದ್ದಾರೆ.
ಪ್ರತಿಭಾವಂತ ಕ್ರಿಯಾಶೀಲ ಯುವ ಪತ್ರಕರ್ತ ಸಿಂಗೇಗೊಳ್ ಅವರಿಗೆ ಮತ್ತಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿ ಬರಲಿ ಮಾಧ್ಯಮ ರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮೆಲ್ಲರ ಆಶಾ ಆಗಿದೆ ಎಂದು ಮಲ್ಲಿಕಾರ್ಜುನ ಕಿವಡೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 