ಭವಿಷದಲ್ಲಿ ಬಸನಗೌಡ ಪಾಟೀಲ್ (ಯತ್ನಾಳ್)ಗೆ ಉನ್ನತ ಸ್ಥಾನ: ಭವಿಷ್ಯವಾಣಿ
Basanagowda Patil (Yatnal) will have a high position in the future: Prediction
ಭವಿಷದಲ್ಲಿ ಬಸನಗೌಡ ಪಾಟೀಲ್ (ಯತ್ನಾಳ್)ಗೆ ಉನ್ನತ ಸ್ಥಾನ: ಭವಿಷ್ಯವಾಣಿ
ಇಂಡಿ 16: ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಭವಿಷ್ಯದಲ್ಲಿ ಉನ್ನತ ಸ್ಥಾನ ಸಿಗಲಿದೆ ಎಂದು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಹೇಳಿದ್ದಾರೆ. ಅವರು ಇಂಡಿ ತಾಲ್ಲೂಕಿನ ಹೋರ್ತಿ ಗ್ರಾಮದ ಶ್ರೀ ರೇಣುಕಾ ಮಂಗಲ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಗ್ನಿಹೋತ್ರಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿ ಮಾತನಾಡಿದ ಅವರು ಭಾರತದಲ್ಲಿ ಸನಾತನ ಕಾಲದಿಂದಲೂ ಹೋಮ, ಹವನಾದಿಗಳನ್ನು, ಯಜ್ಞ, ಯಾಗಾದಿಗಳನ್ನು ಮೂಗೂಡಿಸಿಕೊಂಡು ಬರಲಾಗಿದೆ. ಹೋಮ, ಯಾಗಗಳೆಂದರೆ ಕೇವಲ ನಮ್ಮ ಬಯಕೆಗಳನ್ನು, ಆಸೆ, ಆಕಾಂಕ್ಷೆಗಳನ್ನು ದೇವರ ಮುಂದಿಟ್ಟು ನೆರವೇರಿಸು ದೇವರೇ ಎಂದು ಬೇಡಿಕೊಳ್ಳುವುದಲ್ಲ, ಬದಲಾಗಿ, ಯಾಗ - ಯಜ್ಞವೆಂದರೆ ತ್ಯಾಗ. ನೀನು ನನಗೆ ಜೀವನದಲ್ಲಿ ನೀಡಿದ ಪ್ರತಿಯೊಂದು ವಸ್ತುಗಳು, ಅಂಶಗಳು ನನ್ನದಲ್ಲ. ಎಲ್ಲವೂ ನಿನ್ನದೇ. ಹಾಗಾಗಿ ಎಲ್ಲವನ್ನು ನಿನಗೆ ಅರ್ಿಸುತ್ತೇನೆಂದು ಹೇಳಿ ತ್ಯಾಗ ಮಾಡುವ ಮನೋಭಾವ.ವೈದಿಕ ಪರಂಪರೆಯಲ್ಲಿ ಯಾವಾಗಲೂ ಯಾಗ, ಹೋಮ, ಹವನಾದಿಗಳು ನಡೆಯ್ತಾ ಬಂದಿದೆ ಎಂದು ಹೇಳಿದರು. ಈ ಕರ್ನಾಟಕ ರಾಜ್ಯ ಜನಪ್ರಿಯ ನಾಯಕ ಹಾಗೂ ವಿಜಯಪೂರ ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸೋಲ್ಲಾಪೂರ ಮಾಜಿ ಸಂಸದರಾದ ಜಯಸಿದ್ದೇಶ್ವರ ಸ್ವಾಮಿ ಅಖಿಲ ಭಾರತ ಸನಾತನ ಧರ್ಮ ಜಾಗರಣ ಮಂಚ್ ಮುಖ್ಯಸ್ಥ ಎಸ್ ಆರ್ ರಾಜು ವಿಜುಗೌಡ ಪಾಟೀಲ ಶ್ರೀನಾಥ ಜೋಶಿ ಜಗದೀಶ ಶೇಖರ ನಾಯಕ ಬಸವರಾಜಪ್ಪ ಸಿದ್ಧರಾಮ ಮೇತ್ರಿ ಸುರೇಶ ಗೆಜ್ಜೆ ರಾಜಶೇಖರ ದೈವಾಡಿ ರೇವಣಸಿದ್ದ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 