ಬೆಂಗಳೂರು, ಫೆ. 26 : ಕೂಲಿ ಕಾರ್ಮಿಕನೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಕೆ.ಆರ್. ಮಾರ್ಕೆಟ್ ಬಳಿಯ ಈಸ್ಟ್ ಗೇಟ್ನಲ್ಲಿ ನಡೆದಿದೆ.
24 ವರ್ಷದ ರಮೇಶ್ ಕೊಲೆಯಾದ ಕಾರ್ಮಿಕ.
ಈತ ಕಳೆದ ಮೂರು ನಾಲ್ಕು ವರ್ಷಗಳಿಂದ ಮಾರ್ಕೆಟ್ನಲ್ಲಿ ಮೂಟೆ ಹೊರುತ್ತಿದ್ದನು ಎನ್ನಲಾಗಿದೆ.
ಮಂಗಳವಾರ ರಾತ್ರಿ ಮಾರ್ಕೆಟ್ ಬಳಿ ಆತ ನಿಂತಿದ್ದಾಗ ಏಕಾಏಕೀ ಬಂದ ದುಷ್ಕರ್ಮಿಗಳು ಗುಂಪೊಂದು ಆತನ ಎದೆ, ಕತ್ತಿನ ಭಾಗವನ್ನು ಕೊಯ್ದಿದ್ದು, ಘಟನಾ ಸ್ಥಳದಲ್ಲಿ ಕಾರ್ಮಿಕ ರಮೇಶ್ ಮೃತಪಟ್ಟಿದ್ದಾನೆ.
ಕೃತ್ಯ ಎಸಗಿದ ನಂತರ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೇಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಗೆ ಸಂಬಂಧಿಸಿಂದತೆ ಕೆಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.