ಲೋಕದರ್ಶನ ವರದಿ
ಧಾರವಾಡ 11 : ಇಲ್ಲಿಯ ಆರ್ಟ ಗ್ಯಾಲರಿಯಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯು ಹಮ್ಮಿಕೊಂಡಿದ್ದ ಬಾಪೂಜಿ ಅವರ 150 ಚಿತ್ರಕಲಾ ಕೃತಿಗಳ ಪ್ರದರ್ಶನವು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸುಮಾರು ಸಾವಿರಾರು ವಿದ್ಯಾರ್ಥಿ ಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಗಾಂಧೀಜಿಯವರ ಬಾಲ್ಯ, ವಿದ್ಯಾರ್ಥಿ ಬದುಕು, ವಿದೇಶ ಪ್ರವಾಸ, ಹೋರಾಟದ ಹೆಜ್ಜೆಗಳು, ಅವರ ವಿಶಾಲ ಸಂದೇಶಗಳನ್ನು ತಿಳಿಸುವ ಕಲಾಕೃತಿಗಳನ್ನು ನೋಡಿ ವಿದ್ಯಾಥರ್ಿಗಳು ಹರ್ಷಚಿತ್ತರಾದರು. ತಮ್ಮ ಅನಿಸಿಕೆಗಳನ್ನು ದಾಖಲಿಸಿದರು. ಕುಂಚಗಳಲ್ಲಿ ಅರಳಿದ ಮಹಾತ್ಮಾ ಗಾಂಧಿಯವರ ವಿಶಿಷ್ಟ ಬದುಕು ವಿದ್ಯಾರ್ಥಿ ಗಳಿಗೆ ವಿಭಿನ್ನ ನೆಲೆಗಳಲ್ಲಿ ಸ್ಫೂರ್ತಿ ಯನ್ನು ತುಂಬಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಆಶ್ರಯದಲ್ಲಿ ಈ ಹಿಂದೆ ಹಮ್ಮಿಕೊಂಡಿದ್ದ 'ಗಾಂಧೀಜಿ-150 : ಕುಂಚ ನಮನ' ಶೀಷರ್ಿಕೆಯ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ ಪೇಂಟಿಂಗ್ ಕಾಯರ್ಾಗಾರದಲ್ಲಿ ಗಾಂಧೀಜಿಯವರ ಬಾಲ್ಯದಿಂದ ಅವರ ಅಂತ್ಯದವರೆಗೆ ಬಾಪೂಜಿಯ ಸಮಗ್ರ ಬದುಕನ್ನು ಕೇಂದ್ರೀಕರಿಸಿ ಮೂಡಿ ಬಂದಿದ್ದ 150 ಚಿತ್ರಕಲಾ ಕೃತಿಗಳು ಶಾಲಾ ವಿದ್ಯಾಥರ್ಿಗಳ ಗಮನಸೆಳೆದವು.
ಸಾರ್ವಜನಿಕ ವೀಕ್ಷಣೆ : ಅಕ್ಟೋಬರ್ 2 ರಿಂದ ಆರಂಭಗೊಂಡಿದ್ದ ಈ ಚಿತ್ರಕಲಾ ಪ್ರದರ್ಶನವನ್ನು ಸಾರ್ವಜನಿಕರೂ ಸಹ ವೀಕ್ಷಕಿಸಿ ಮೆಚ್ಚಿಗೆ ಸೂಚಿಸಿದರು. ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾಥರ್ಿಗಳು ಪ್ರದರ್ಶನ ವೀಕ್ಷಣೆ ಮಾಡಿ, 'ನಾವು ಗಾಂಧೀಜಿ ಅವರನ್ನು ಜೀವಂತವಾಗಿ ಕಂಡಿಲ್ಲ. ಆ ಸೌಭಾಗ್ಯ ನಮಗಿಲ್ಲ. ಆದರೆ ಈ ಕಲಾಕೃತಿಗಳನ್ನು ವೀಕ್ಷಕಿಸಿದಾಗ ಗಾಂಧೀಜಿಯವರನ್ನು ಜೀವಂತವಾಗಿ ಕಂಡಷ್ಟು ಖುಷಿಯಾಯಿತು' ಎಂದೆಲ್ಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಶಿಕ್ಷಕರು, ಅಧಿಕಾರಿಗಳು, ಪ್ರಾಧ್ಯಾಪಕರು, ವೈದ್ಯರು, ವ್ಯಾಪಾರಸ್ಥರು, ಉದ್ಯಮಿಗಳು ಮುಂತಾದವರೂ ಸೇರಿದಂತೆ ಸಾರ್ವಜನಿಕರೂ ಸಹ ಪ್ರದರ್ಶನ ವೀಕ್ಷಿಸಿ ಮೆಚ್ಚಿಗೆ ಸೂಚಿಸಿದರು.
ಅಭಿನಂದನೆ : ಚಿತ್ರಕಲಾ ಪ್ರದರ್ಶನ ಸಂಘಟಿಸಲು ಮಾರ್ಗದರ್ಶನ ಮಾಡಿದ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ನಿದರ್ೆಶಕ ಡಾ.ಬಿ.ಕೆ.ಎಸ್. ವರ್ಧನ್ ಸೇರಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳನ್ನು, ಹಿರಿಯ ಚಿತ್ರಕಲಾವಿದ ಎಂ.ಆರ್. ಬಾಳಿಕಾಯಿ ಹಾಗೂ ಚಿತ್ರಕಲಾ ವಿದ್ಯಾಲಯದ ಮುಖ್ಯಸ್ಥ ಬಸವರಾಜ ಕುರಿಯವರ ಅವರನ್ನು ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ ಅಭಿನಂದಿಸಿದ್ದಾರೆ.