ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ ಆತ್ಮಹತ್ಯೆ

ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ ಆತ್ಮಹತ್ಯೆ Bank assistant manager commits suicide

ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ ಆತ್ಮಹತ್ಯೆ

ಕಾಗವಾಡ, 27 : ತಾಲೂಕಿನ ಉಗಾರ ಖುರ್ದ್‌ ಪಟ್ಟಣದ  ಮನೆಯೊಂದರಲ್ಲಿ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಸಂಭವಿಸಿದೆ. ಬುಧವಾರ ದಿ. 25 ರ ರಾತ್ರಿ ಉಗಾರದ ನ್ಯಾಯವಾದಿ ಭರಮದೆ ಇವರ ಮನೆಯಲ್ಲಿ  ಬಾಡಿಗೆ  ತೆಗೆದುಕೊಂಡು ಕೋಣೆಯಲ್ಲಿ ಶವ ಪತ್ತೆಯಾಗಿದೆ. 

        ಸೆಂಟ್ರಲ್ ಬ್ಯಾಂಕ ಉಗಾರ ಶಾಖೆಯ ತರಬೇತಿ ಅವಧಿಯಲ್ಲಿ ಬಂದ ಅಸಿಸ್ಟೆಂಟ್ ಮ್ಯಾನೇಜರ ರವಿಕುಮಾರ ವಯಸ್ಸು 26 ವಿಷ ಸೇವಿಸಿ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ. ಉಗರ್ ಶಾಖೆಗೆ ಸೆಂಟ್ರಲ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಆಂಧ್ರ​‍್ರದೇಶದ ರವಿ ರವಿಕುಮಾರ್ ತರಬೇತಿ ಪಡೆಯಲು ಇಲ್ಲಿಗೆ ಬಂದು ಕೇವಲ ಮೂರು ದಿನಗಳ ಕಳೆದಿವೆ ಅಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಯಿಂದ ಚರ್ಚೆಗೆ ಗ್ರಾಸವಾಗಿದೆ. ಬ್ಯಾಂಕಿನ ಉಗಾರ ಶಾಖೆಯ ವ್ಯವಸ್ಥಾಪಕ ಚಂದುದೇವ್ ಇವರು ಕಾಗವಾಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪಿಎಸ್‌ಐ  ಜಿ.ಜಿ. ಬಿರಾದಾರ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.