94ನೇ ದಿನದ ಕ್ವಿಟ್ ಬಲ್ಡೋಟ ಧರಣಿಗೆ ಬಾಮಸೆಫ್ ಬೆಂಬಲ
Bamsafe supports 94th day of Quit Baldota sit-in
ಕೊಪ್ಪಳ 01: ನಗರಸಭೆ ಆವರಣದ ಬಳಿ 94 ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಬಾಮಸೆಫ್ ರಾಜ್ಯ ಉಸ್ತುವಾರಿ ಗೋಪಿ ಬಳ್ಳಾರಿ ಅವರು ಬೆಂಬಲಿಸಿಮಾತನಾಡಿ, ಇದೊಂದು ಹೋರಾಟ ವಿಶಿಷ್ಟವಾದುದು. ಇಲ್ಲಿ ಜೀವ ಮತ್ತು ಆರೋಗ್ಯ ಉಳಿಸಿಕೊಳ್ಳಲು ಇಷ್ಟೊಂದು ಕಷ್ಟ ಪಡುತ್ತಿರುವಾಗ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದು ಸರಿಯಲ್ಲ. ಅಧಿಕಾರಿಗಳು ರಾಜಕಾರಣಿಗಳು ಜನರ ಕುಂದು ಕೊರತೆಗಳಿಗೆ ಕಿವಿಕೊಡದಿದ್ದಾಗ ಅವರ ಕೇಂದ್ರ ಸ್ಥಾನಗಳನ್ನು ಸುತ್ತುವರಿದು ಹೋರಾಟ ಮಾಡಬೇಕು.
ಅವರು ರಸ್ತೆಗಿಳಿಯಲು ಯೋಚನೆ ಮಾಡಬೇಕು. ಕ್ರಿಯಾಶೀಲ ಸಂಘಟನೆಗಳು, ಯುವಜನರು ದೃಢ ನಿಲುವು ತಳೆದು ಹೋರಾಟದ ಕಣಕ್ಕೆ ಧುಮುಕಬೇಕು. ನಮ್ಮ ಸಂಘಟನೆ ನೀವು ಕರೆದಾಗ ಬಂದು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಜನತೆಯ ಒಳಿತಿಗಾಗಿ ಹೋರಾಡುವ ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ ಎಂದರು. ಧರಣಿ ನೇತೃತ್ವವಹಿಸಿದ್ದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ್ ಗೋನಾಳ, ರಾಜಶೆಖರ ಏಳುಭಾವಿ, ಡಿಎಸ್‌ಎಸ್ ಮುಖಂಡ ನಿಂಗಪ್ಪ ಜಿ.ಎಸ್. ಬೆಳಕಲ್, ಗವಿಸಿದ್ದಪ್ಪ ಹಲಿಗಿ, ಸಂಜೀವಮೂರ್ತಿ ಬೇವಿನಗಿಡದ, ಕಾಶಪ್ಪ ಚಲವಾದಿ, ಮೂಕಪ್ಪ ಮೇಸ್ತ್ರಿ ಬಸಾಪುರ, ರತ್ನಮ್ಮ ದೊಡ್ಡಮನಿ, ಶಿವಪ್ಪ ಜೆಲ್ಲಿ, ಗಂಗಮ್ಮ ಮುಂಡರಗಿ, ಮೈಲಪ್ಪ ಮದಿನೂರು, ದ್ಯಾಮಣ್ಣ ಚಿಲವಾಡಗಿ ಮುಂತಾದವರು ಪಾಲ್ಗೊಂಡರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 