ಬಲ್ಡೋಟ ಹಟಾವೋ ಮಾ.22 ಕ್ಕೆ ಬೆಂಗಳೂರು ಚಲೋ: ಬೆಟ್ಟದೂರು
Baldota Hatao to Bangalore on March 22: Bettadoor
ಕೊಪ್ಪಳ 16: 136ನೇ ದಿನದಲ್ಲಿ ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಮಾ. 22ಕ್ಕೆ ಬೆಂಗಳೂರು ಚಲೋ ಘೋಷಣೆ ಮಾಡಿದರು. ಮಾ. 22 ರಂದು ರವಿವಾರ ರಾತ್ರಿ 10 ಗಂಟೆಗೆ ಧರಣಿ ಸ್ಥಳದಿಂದ ಬಸ್ ಮೂಲಕ ಬೆಂಗಳೂರು ಚಲೋ ಹೋರಾಟಕ್ಕೆ ಮುನ್ನಡೆಯೋಣ. ಮಾ. 23 ರಂದು ಸೋಮವಾರ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರದ ಕಣ್ಣು ತೆರೆಸೋಣ. ಇದಕ್ಕೂ ಸರ್ಕಾರ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ರೈಲು ತಡೆ, ಹೆದ್ದಾರಿ ತಡೆ ಚಳವಳಿ ರೂಪಿಸೋಣ ಎಂದರು. ಬೆಂಗಳೂರು ಹೋರಾಟಕ್ಕೆ ಬರುವವರು ಈಗಿರುವ ವ್ಯಾಟ್ಸಾಪ್ ಗ್ರೂಪ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಮಹಿಳೆಯರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು. ಧರಣಿಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ, ಎಸ್.ಬಿ. ರಾಜೂರು, ಬಿ.ಜಿ. ಕರಿಗಾರ, ಡಾ. ಬಸವರಾಜ ಪೂಜಾರ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ. ಪಾಟೀಲ್, ಚಾರಣ ಬಳಗದ ಚಂದ್ರಗೌಡ ಬಿ. ಪಾಟೀಲ್ (ಚಂಪಾ), ರಾಜಶೇಖರ ಏಳುಬಾವಿ, ಸುಭಾನ್ ಸಾಬ್ ನೀರಲಗಿ, ತ್ರಿಲಿಂಗೇಶ್ವರ ಖಾನಾವಳಿಯ ಬಸವರಾಜ ಉಂಡಿ, ಮಹಾದೇವಪ್ಪ ಮಾವಿನಮಾಡು, ಮಖ್ಬುಲ್ ರಾಯಚೂರು, ವಿಜಯ ಮಹಾಂತೇಶ ಹಟ್ಟಿ, ರೇವಣಸಿದ್ದಯ್ಯ ಸ್ವಾಮಿ ಚಿತ್ರಗಾರ ಮುಂತಾದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 