ಬಾಳಾಸಾಹೇಬಗೌಡ ಪಾಟೀಲ ಸಮಾಜಮುಖಿ ಕೆಲಸ ಅಜರಾಮರ : ಸಿದ್ದರಾಮ ದೇವರು

ಬಾಳಾಸಾಹೇಬಗೌಡ ಪಾಟೀಲ ಸಮಾಜಮುಖಿ ಕೆಲಸ ಅಜರಾಮರ : ಸಿದ್ದರಾಮ ದೇವರು  Balasaheb Gowda Patil's social work is not appreciated: Siddaramaiah

        ದೇವರಹಿಪ್ಪರಗಿ 28: ಸಹಕಾರಿ ಕ್ಷೇತ್ರದಲ್ಲಿ ದಿ.ಡಾ. ಬಾಳಾಸಾಹೇಬಗೌಡ ಪಾಟೀಲ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು  ಅಜರಾಮರವಾಗಿವೆ, ಈ ಭಾಗದ ಸಹಕಾರಿ ಭೀಷ್ಮ ಎಂದು ಖ್ಯಾತಿ ಪಡೆದಿದ್ದರು ಎಂದು ಜಂಬಲದಿನ್ನಿ ಗ್ರಾಮದ    ಪ.ಪೂ ಸಿದ್ದರಾಮ ದೇವರು ಹೇಳಿದರು. ತಾಲೂಕಿನ ನಿವಾಳಖೇಡ ಗ್ರಾಮದ ತೋಟದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಿ.ಡಾ.ಬಾಳಾಸಾಹೇಬಗೌಡ ಪಾಟೀಲ ಅವರ ನಾಲ್ಕನೇಯ ಪುಣ್ಯ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇವರಹಿಪ್ಪರಗಿ ಪಟ್ಟಣದಲ್ಲಿ  ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ ಸ್ಥಾಪನೆ ಮಾಡಿ ಎಲೆಮರೆ ಕಾಯಿಯಂತಿದ್ದು ಸಹಕಾರಿ ಕ್ಷೇತ್ರದಲ್ಲಿ ಅವರು ಕೈಗೊಂಡ ಸಮಾಜಮುಖಿ ಕೆಲಸಗಳು ಅಜರಾಮರವಾಗಿವೆ ಎಂದು ಹೇಳಿದರು.

       ಸಿಂದಗಿ ವಕೀಲರಾದ ಎಸ್‌.ಬಿ.ಪಾಟೀಲ ಅವರು ಮಾತನಾಡಿ, ಶಿಸ್ತು ಮತ್ತು ದೃಢಸಂಕಲ್ಪದಿಂದ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ದಿ.ಡಾ.ಬಾಳಾಸಾಹೇಬಗೌಡ ಪಾಟೀಲ ಅವರು ಸಾಕ್ಷಿ, ಅವರು ಇಹಲೋಕ ತ್ಯಜಿಸಿ ನಾಲ್ಕು ವರ್ಷ ಕಳೆದಿದೆ. ಆದರೆ, ಅವರ ಮೇರು ಸಾಧನೆ ಮತ್ತು ಹಲವು ಸಹಕಾರಿ ಕ್ಷೇತ್ರಗಳಲ್ಲಿ ಮೂಡಿಸಿದ ಹೆಜ್ಜೆ ಗುರುತುಗಳು ಶಾಶ್ವತವಾಗಿವೆ. ಅದೇ ರೀತಿ ಅವರ ಮಕ್ಕಳು ಉನ್ನತ ಸ್ಥಾನದಲ್ಲಿದ್ದು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಡಾ. ವೃತ್ತಿಯ ಜೊತೆ ಗ್ರಾಮೀಣ ಭಾಗದ ಜನರ ಅಭಿವೃದ್ಧಿಗಾಗಿ ಸಹಕಾರಿ ಕ್ಷೇತ್ರದಲ್ಲಿ ಅವರ ಅಪ್ರತಿಮ ಪರಿಶ್ರಮ, ಶಿಸ್ತು, ಮೌಲ್ಯಗಳು ಮತ್ತು ವಿಶ್ವಾಸಾರ್ಹತೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

      ಇದೇ ಸಂದರ್ಭದಲ್ಲಿ ಬಾಗೇವಾಡಿಯ .ಪ.ಪೂ ಮುತ್ತಯ್ಯ ಸ್ವಾಮೀಜಿ, ಪಿಡಬ್ಲ್ಯೂಡಿ ಇಲಾಖೆಯ ಮಾಜಿ ಇ.ಇ ಬಿ.ಬಿ.ಪಾಟೀಲ, ಪ್ರಗತಿ ಪಟ್ಟಣ ಬ್ಯಾಂಕ ಅಧ್ಯಕ್ಷರಾದ ವಾಯ್‌.ಬಿ.ಪಾಟೀಲ, ಮುಖಂಡರುಗಳಾದ ನಿಂಗನಗೌಡ ಪಾಟೀಲ(ಯರನಾಳ), ಸಿ.ಕೆ.ಕುದರಿ, ಶ್ರೀಶೈಲ ಬೆನಕನಹಳ್ಳಿ, ಚಂದ್ರಶೇಖರ ಹೊಸಮನಿ, ಶಂಕರಗೌಡ ಪಾಟೀಲ,ಈಶ್ವರ ಚವ್ಹಾಣ, ಮಹಾಂತೇಶ ಬಿರಾದಾರ ಸೇರಿದಂತೆ ಪ್ರಗತಿ ಪಟ್ಟಣ ಬ್ಯಾಂಕ ನಿರ್ದೇಶಕ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ, ಕುಟುಂಬದ ಸದಸ್ಯರು ಹಾಗೂ ಅವರ ಅಭಿಮಾನಿಗಳು ಭಾಗವಹಿಸಿದ್ದರು.