ಖೇತ್ ಬಚಾವೋ ಅಭಿಯಾನದಡಿ ಸಮತೋಲಿತ ರಸಗೊಬ್ಬರಗಳ ಬಳಕೆ ಹಾಗೂ ಬೀಜೊಪಚಾರ ಆಂದೊಲನ ಕಾರ್ಯಕ್ರಮ

ಖೇತ್ ಬಚಾವೋ ಅಭಿಯಾನದಡಿ ಸಮತೋಲಿತ ರಸಗೊಬ್ಬರಗಳ ಬಳಕೆ ಹಾಗೂ ಬೀಜೊಪಚಾರ ಆಂದೊಲನ ಕಾರ್ಯಕ್ರಮ   Balanced fertilizer use and seed treatment campaign under Khet Bachao Abhiyan

ಲೋಕದರ್ಶನ ವರದಿ 

ಹುಲಕೋಟಿ 10 : ಖೇತ್ ಬಚಾವೋ ಅಭಿಯಾನದಡಿ ಕೃಷಿ ಇಲಾಖೆ ಗದಗ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ತಾಲೂಕಿನ ಬೂದಿಶ್ವರ ಹೊಸಳ್ಳಿ ಹಾಗೂ ಶ್ಯಾಗೋಟಿ ಗ್ರಾಮಗಳಲ್ಲಿ ದಿನಾಂಕ 08-06-2026 ರಂದು ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ಬೀಜೊಪಚಾರದ ಕುರಿತು ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು  

ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಉತ್ಪಾದನೆ, ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ (ಏಗಿಏ) ಹುಲಕೋಟಿ ಸಹಭಾಗಿತ್ವದಲ್ಲಿ ಖೇತ್ ಬಚಾವೋ ಅಭಿಯಾನ ಎಂಬ ಮಹತ್ವದ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಅಭಿಯಾನದ ಮುಖ್ಯ ಉದ್ದೇಶ ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವುದು, ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದಾಗಿದೆ.

ಸದರಿ ಕಾರ್ಯಕ್ರಮದಲ್ಲಿ  ಜಂಟಿ ಕೃಷಿ ನಿರ್ದೆಶಕಿ   ಚೇತನಾ ಪಾಟೀಲ, ಉಪ ಕೃಷಿ ನಿರ್ದೆಶಕರು-1 ಗದಗ   ಸ್ಪೂರ್ತಿ ಜಿ. ಎಸ್ ,  ಹಾಗೂ   ಎನ್‌. ಎಚ್ ಭಂಡಿ,   ಪ್ರವೀಣ ಕರಿಕಟ್ಟಿ, ವಿಜ್ಙಾನಿಗಳು, ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ, ಶ್ರೀಮತಿ ರಾಜರಾಜೇಶ್ವರಿ ಚಿನಿವಾರ ಹಾಗೂ ಬಸವರಾಜೇಶ್ವರಿ ಸಜ್ಜನರ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ಹಾಗು   ವಿಜಯಕುಮಾರ ಸುಂಕದ ಹಾಗೂ ಇನ್ನಿತರ ಪ್ರಗತಿಪರ ರೈತರು ಭಾಗವಹಿಸಿದ್ದರು.  

ವಿಜ್ಙಾನಿಗಳು  ಮಣ್ಣು ಪರೀಕ್ಷೆಯ ಮಹತ್ವ, ಸಮತೋಲನ ಗೊಬ್ಬರ ಬಳಕೆ, ಜೈವಿಕ ಕೃಷಿ ವಿಧಾನಗಳು, ನೀರಿನ ಸಂರಕ್ಷಣೆ ಹಾಗೂ ಸಮಗ್ರ ಕೀಟ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ರೈತರಿಗೆ ಪ್ರಾಯೋಗಿಕವಾಗಿ ಬೀಜೊಪಚಾರ ಮಾಡುವ ಕುರಿತು ಮಾಹಿತಿ ನೀಡಲಾಯಿತು. 

ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರದ ವಿವಿಧ ಯೋಜನೆಗಳು, ಸಬ್ಸಿಡಿ ಸೌಲಭ್ಯಗಳು ಹಾಗೂ ಕೃಷಿ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ರೈತರಿಗೆ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲಾಯಿತು. 

ಈ ಕಾರ್ಯಕ್ರಮವು ರೈತರಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು,  ಖೇತ್ ಬಚಾವೋ ಅಭಿಯಾನ ವು ಸಾವಯವ ಕೃಷಿ ಹಾಗೂ ಕೃಷಿ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಾಯಕಾರಿಯಾಗಲಿದೆ ಎಂದು ಪ್ರಗತಿ ಪರ ರೈತರು ವ್ಯಕ್ತ ಪಡಿಸಿದರು.  

ಸದರಿ ಕಾರ್ಯಕ್ರಮದಲ್ಲಿ ಬೂದಿಶ್ವರ ಹೊಸಳ್ಳಿ, ಕುರ್ತಕೋಟಿ, ಶ್ಯಾಗೋಟಿ, ದುಂದೂರ ಹಾಗೂ ಚಿಕ್ಕಹಂದಿಗೋಳ  ಗ್ರಾಮದ ಹಲವಾರು ರೈತರು, ರೈತ ಮಹಿಳೆಯರು  ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ್ಲ ಬಾಗವಹಿಸಿದ್ದರು.