ನೇಸರಗಿಯಲ್ಲಿ ಮುಸ್ಲಿಂ ಭಾಂದವರಿಂದ ಸಂಭ್ರಮದ ಭಕ್ರೀದ್ ಹಬ್ಬ ಆಚರಣೆ

ನೇಸರಗಿಯಲ್ಲಿ ಮುಸ್ಲಿಂ ಭಾಂದವರಿಂದ ಸಂಭ್ರಮದ ಭಕ್ರೀದ್ ಹಬ್ಬ ಆಚರಣೆ Bakrid celebration in Nesaragi

ನೇಸರಗಿ 28: ತ್ಯಾಗ, ಬಲಿದಾನದ ಪವಿತ್ರ ಹಬ್ಬವಾದ ಭಕ್ರೀದ್ ಹಬ್ಬವನ್ನು ಗ್ರಾಮದ ಮೇಕಲಮರಡಿ ರಸ್ತೆಯಲ್ಲಿ ಇರುವ ಮುಸ್ಲಿಂ ಸಮಾಜದ ಪ್ರಾರ್ಥನಾ ಮಸೀದಿಯಲ್ಲಿ ಮತ್ತು ಪೇಟೆಯಲ್ಲಿ ಇರುವ ಮಸೀದಿಯಲ್ಲಿ ಮುಸ್ಲಿಂ ಸಮಾಜದ ಜನತೆ  ಸಡಗರ ಸಂಭ್ರಮದ  ಹಬ್ಬವನ್ನು ಆಚರಿಸಿದರು. 

ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಮುಸ್ಲಿಂ ಭಾಂದವರು ಪರಸ್ಪರ ಅಪ್ಪಿಕೊಂಡು, ಪ್ರಾರ್ಥನೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳು, ಮುಸ್ಲಿಂ ಜಮಾತ್, ಮುಸ್ಲಿಂ ಸಮಾಜದ ಮುಖಂಡರು, ಹಿರಿಯರು, ಸಮಾಜದ ಜನತೆ ಭಾಗವಹಿಸಿದ್ದರು.