ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್: ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
Bakrid, a symbol of sacrifice: Mass prayer by Muslim brothers
ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್: ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
ಮುಂಡಗೋಡ 07 : ತ್ಯಾಗ ಮತ್ತು ಬಲಿದಾನ ಸಂಕೇತ ಸಾರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ತಾಲೂಕಾದ್ಯಂತ ಶ್ರದ್ಧಾ, ಭಕ್ತಿ, ಶಾಂತಿಯಿಂದ ಆಚರಣೆ ಮಾಡಿದರು. ಪಟ್ಟಣದ ಮುಸ್ಲಿಂ ಸಮೂದಾಯದವರು ಬೆಳಗ್ಗೆ 8 ಗಂಟೆಗೆ ಯಲ್ಲಾಪುರ ರಸ್ತೆಯಲ್ಲಿರುವ ನೂರಾನಿ ಮಸೀದಿ ಹತ್ತಿರ ಪಟ್ಟಣದ ಐದೂ ಮಸೀದಿಗಳ ಮುಸ್ಲಿಂ ಬಾಂಧವರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಶುಭ್ರವಾದ ಹೊಸಬಟ್ಟೆಗಳನ್ನು ಧರಿಸಿ ಜಮಾವಣೆಗೊಂಡು ನಂತರ ಸಾಮೂಹಿಕವಾಗಿ ಈದ್ಗಾ ಮೈದಾನದಕ್ಕೆ ಕಾಲ್ನಡಿಗಿಯಿಂದ ಅಲ್ಲಾಹನ ನಾಮಸ್ಮರಣೆ ಮಾಡುತ್ತ ಪಟ್ಟಣದ ಕಲಘಟಗಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಈದ್-ಉಲ್-ಅದ್ಹಾ(ಬಕ್ರೀದ) ಹಬ್ಬದ ವಿಶೇಷ ನಮಾಜ ಸಾಮೂಹಿಕವಾಗಿ ಭಕ್ತಿಯಿಂದ ಸಲ್ಲಿಸಿದರು.
ಹಾಫೀಜ್ ಮೌಲಾನಾ ಮೊಹ್ಮದ ಅಜೀಮ್ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಈದ್-ಉಲ್-ಅದ್ಹಾ(ಬಕ್ರೀದ) ಹಬ್ಬದ ಪ್ರಾರ್ಥನೆ ಸಲ್ಲಿಸಿದರು. ನೂರಾನಿ ಮಸೀದಿ ಅಧ್ಯಕ್ಷ ಮಹ್ಮದಸಲೀಂ ನಂದಿಗಟ್ಟಿ ಐದು ಮಸಿದಿಗಳ ಅಧ್ಯಕ್ಷರ ಪರವಾಗಿ ಮುಸ್ಲೀಂ ಬಾಂದವರಿಗೆ ಶುಭಾಶಯ ಕೋರಿದರು. ಕಾಲ ಬದಲಾವಣೆಯಾಗಿದೆ ಆದ್ದರಿಂದ ಮುಸ್ಲಿಂ ಬಾಂಧವರು ಹೆಣ್ಣು-ಗಂಡು ಭೇದಭಾವ ಮಾಡದೆ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿಸಲೇಬೇಕು ಎಂದು ವಿನಂತಿ ಪೂರ್ವಕವಾಗಿ ಕೇಳಿಕೊಂಡರು. ಬಕ್ರೀದ ಹಬ್ಬದ ಪ್ರಯುಕ್ತ ಪೊಲೀಸ ಬಂದೋಬಸ್ತ್ ಏರಿ್ಡಸಿದ್ದರು. ನಮಾಜ ಮುಗಿದ ನಂತರ ಮುಸ್ಲಿಂ ಬಾಂದವರು ಖಬರಸ್ಥಾನ(ಶಂಶಾನ)ಕ್ಕೆ ತೆರಳಿ ಸ್ವರ್ಗಸ್ಥರಾದ ತಮ್ಮ ಬಂಧುಬಳಗದ ಗೋರಿಗಳಿಗೆ ಹೂಮಾಲೆ ಹಾಕಿ ಸುಗಂಧ ದ್ರವ್ಯ ಸಿಂಪಡಿಸಿ ಪ್ರಾರ್ಥನೆ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 