ಬೈಲಹೊಂಗಲ ವಿದ್ಯಾರ್ಥಿಗೆ ರಾಜ್ಯ ಮಟ್ಟದಲ್ಲಿ ಗೌರವ

ಬೈಲಹೊಂಗಲ  ವಿದ್ಯಾರ್ಥಿಗೆ  ರಾಜ್ಯ  ಮಟ್ಟದಲ್ಲಿ  ಗೌರವ Bailhongala student honored at state level

ಬೈಲಹೊಂಗಲ  18: ಬೆಂಗಳೂರಿನ ವಿಕಾಸಸೌಧದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಕಾನೂನು ವಿದ್ಯಾರ್ಥಿಗಳ ಮಾದರಿ ಅಧಿವೇಶನ ಸ್ಪರ್ಧೆಯಲ್ಲಿ ಬೈಲಹೊಂಗಲದ ಕೆ.ಆರಿ​‍್ಸ.ಎಸ್‌. ಸಂಸ್ಥೆಯ ಎಚ್‌.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಸಂತೋಷ ಹಡಪದ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಮಹಾವಿದ್ಯಾಲಯ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ರಾಜ್ಯದ ವಿವಿಧ ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ವಿಧಾನಮಂಡಲದ ಅಧಿವೇಶನದ ಮಾದರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು, ಸಂಸದೀಯ ನಿಯಮಗಳು, ಚರ್ಚಾ ಕೌಶಲ್ಯ, ಪ್ರಶ್ನೋತ್ತರ ಅವಧಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ವಿಚಾರ ಮಂಡನೆ ಮಾಡುವ ಸಾಮರ್ಥ್ಯವನ್ನು ಆಧರಿಸಿ ಸ್ಪರ್ಧಿಗಳನ್ನು ಮೌಲ್ಯಮಾಪನ ಮಾಡಲಾಯಿತು. 

ಸಂತೋಷ ಹಡಪದ ಅವರು ತಮ್ಮ ವಾಗ್ಮಿತೆ, ಕಾನೂನು ಜ್ಞಾನ ಹಾಗೂ ಸಂಸದೀಯ ಪ್ರಕ್ರಿಯೆಗಳ ಮಾತುಗಾರಿಕೆಯಿಂದ ತೀಪುಗಾರರ ಮೆಚ್ಚುಗೆಗೆ ಪಾತ್ರರಾಗಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದರು, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ  ಪಿ ಎನ್ ದೇಸಾಯಿ, ಕಾನೂನು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕರಾದ ಸಿ ಎಸ್ ಪಾಟೀಲ ಮುಖ್ಯಸ್ಥರಾದ ರೇವಯ್ಯ ಒಡೆಯರ್ ಹಾಗೂ ತೀಪುಗಾರರು ಪ್ರಶಸ್ತಿ ನೀಡಿ ಗೌರವಿಸಿದರು, 

ಅವರ ಈ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಸಹಪಾಠಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ಶುಭ ಹಾರೈಸಿದ್ದಾರೆ.ಈ ಸಾಧನೆಯು ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಮಹಾವಿದ್ಯಾಲಯದ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದೆ. ಸಂತೋಷ ಹಡಪದ ಅವರ ಯಶಸ್ಸು ಮಹಾವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ. ಎಂದು ಪ್ರಾಚಾರ್ಯರಾದ ಪಿ ಎನ್, ಪಾಟೀಲರು ತಿಳಿಸಿದ್ದಾರೆ.