ಬಗರ್ ಹುಕುಂ ಸಾಗುವಳಿದಾರರ ಅನಿರ್ದಿಷ್ಟವಧಿ ಧರಣಿ
Bagar Hukum cultivators' indefinite strike
ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸುವ ಲಿಖಿತ ಭರವಸೆ ಬಳಿಕ ಹಿಂಪಡೆದ ಹೋರಾಟಗಾರರು
ಗಜೇಂದ್ರಗಡ 17: ಕಳೆದ ಮೂರು ದಿನಗಳಿಂದ ತಹಶಿಲ್ದಾರ ಕಚೇರಿ ಮುಂಭಾಗದಲ್ಲಿ ನಡೆದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಸಾಗುವಳಿ ಚೀಟಿಗಾಗಿ ಒತ್ತಾಯಿಸಿ ನಡೆದ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ಲಿಖಿತ ಭರವಸೆ ನೀಡಿದ ಬಳಿಕ ಸಾಂಕೇತಿಕವಾಗಿ ಮೊಟುಕುಗೊಳಿಸಲಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಬಗರ್ ಹುಕುಂ ಸಮಿತಿ ಕಾರ್ಯದರ್ಶಿಯೂಆಗಿರುವ ತಹಶಿಲ್ದಾರ ಕಿರಣಕುಮಾರ ಕುಲಕರ್ಣಿ, ಬಗರ್ ಹುಕುಂ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಹೋರಾಟಗಾರರ ಸಮಕ್ಷಮದಲ್ಲಿ ಚರ್ಚೆ ನಡೆಸಿ ಅಕ್ಟೊಬರ್ ಮೊದಲ ವಾರದಲ್ಲಿ ಸಭೆ ಕರೆದು ಅರ್ಜಿ ಪರೀಶೀಲಿಸಿ, ಸಾಗುವಳಿ ಚೀಟಿ, ಹಕ್ಕುಪತ್ರ ನೀಡುವ ಕುರಿತು ತ್ವರಿತಗತಿಯಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗುತ್ತೇವೆ ಆ ಸಭೆಗೆ ಎಸಿ ಯವರನ್ನು ಕೂಡಾ ಬರಲು ತಿಳಿಸುತ್ತೇವೆ ಎಂದು ಲಿಖಿತ ಭರವಸೆ ನೀಡಿದರು. ತಾಲೂಕು ಕಾರ್ಯದರ್ಶಿ ಎಂ.ಎಸ್.ಹಡಪದ ಮಾತನಾಡಿ ಲಿಖಿತ ಭರವಸೆ ನೀಡಿದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ ಮೂಗಿಗೆ ತುಪ್ಪ ಹಚ್ಚುವ ಬದಲಾಗಿ ಕಾಲಾವಕಾಶ ತೆಗೆದುಕೊಂಡಿರುವ ತಾಲೂಕಾಡಳಿತ ಸಾಗುವಳಿ ಮಾಡುವ ಬಗ್ಗೆ ಸ್ಥಳ ಪರೀಶೀಲನೆ, ಅರ್ಜಿ ಪರೀಶೀಲನೆ ಕಾರ್ಯಗಳನ್ನು ಮಾಡಬೇಕು. ಜೊತೆಗೆ ಸೆಪ್ಟೆಂಬರ್ 30 ರಂದು ಸಭೆ ಕರೆಯುವ ಬಗ್ಗೆ ನೋಟಿಸ್ ನೀಡಬೇಕು ಇಲ್ಲವಾದ್ರೆ ಅಕ್ಟೋಬರ್ 2 ರಂದು ಪುನಃ ಧರಣಿ ಸತ್ಯಾಗ್ರಹ ಯಾಥಾಸ್ಥಿತಿ ಮುಂದುವರೆಯಲಿದೆ ಹೋರಾಟದ ಸ್ವರೂಪ ತೀವ್ರವಾಗಿರಲಿದೆ ಎಂದು ಎಚ್ಚರಿಸಿದರು.
ಹೋರಾಟವನ್ನು ಬೆಂಬಲಿಸಿ ರಾಜ್ಯ ಉಪಾಧ್ಯಕ್ಷ ಜಿ.ನಾಗರಾಜ್, ಮುಖಂಡ ದಾವಲಸಾಬ ತಾಳಿಕೋಟಿ, ಬೀದಿ ಬದಿ ವ್ಯಾಪಾರಸ್ಥರ ಅಧ್ಯಕ್ಷ ಶಾಮಿದಲಿ ದಿಂಡವಾಡ ಮಾತನಾಡಿದರು. 3 ದಿನಗಳಿಂದ ಹೋರಾಟ ನಡೆಸಿದ ರೈತರಿಗೆ ಹಾಗೂ ಮುಖಂಡರಿಗೆ ಬೀದಿ ಬದಿ ವ್ಯಾಪಾರಸ್ಥರು ಹೂ, ಹಣ್ಣು ವಿತರಿಸಿ ಕೆ.ಕೆ.ವೃತ್ತದಲ್ಲಿ ಗೌರವಿಸಿದರು. ಧರಣಿ ಸತ್ಯಾಗ್ರಹದಲ್ಲಿ ರೈತ ಸಂಘದ ಅಧ್ಯಕ್ಷ ರೂಪೇಶ ಮಾಳೋತ್ತರ ,ಚೆನ್ನಪ್ಪ ಗುಗಲೋತ್ತರ, ಬಾಲು ರಾಠೋಡ, ಪೀರು, ರಾಠೋಡ, , ಮೆಹಬೂಬ್ ಹವಾಲ್ದಾರ್, ಚಂದ್ರು ರಾಠೋಡ, ಗಣೇಶ, ರಾಠೋಡ, ಆನಂದ ರಾಠೋಡ, ಸೇರಿದಂತೆ ನೂರಾರು ರೈತರು, ಬೀದಿ ಬದಿ ವ್ಯಾಪಾರಸ್ಥರು, ಪಾಲ್ಗೊಂಡಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 