ಬ್ಯಾಡ್ಮಿಂಟನ್ : ಎರಡನೇ ಸುತ್ತಿಗೆ ಕಿಡಂಬಿ ಶ್ರೀಕಾಂತ್
kidmbi shrikant
ಲಖನೌ, ನ 27 -ಮೂರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾತ್ ಅವರು ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.ಬುಧವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಆಟಗಾರ ರಷ್ಯಾದ ವ್ಲಾಡಿಮಿರ್ ಮಾಲ್ಕೋವ್ ಅವರ ವಿರುದ್ಧ 21-12, 21-11 ಅಂತರದಲ್ಲಿ ನೇರ ಸೆಟ್‌ಗಳಲ್ಲಿ ಗೆದ್ದ ಶುಭಾರಂಭ ಮಾಡಿದ್ದಾಾರೆ. ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಫ್ರೆೆಂಚ್‌ಮನ್ ಲುಕಾಸ್ ಕಾರ್ವೆ ಅವರ ವಿರುದ್ಧ ಭಾರತದ ಮತೊರ್ವ ಆಟಗಾರ ಪರುಪಳ್ಳಿ ಕಶ್ಯಪ್ ಅವರಿಗೆ ವಾಕ್ ಓವರ್ ಸಿಕ್ಕಿದೆ. ಹಾಗಾಗಿ, ಅವರು ಅಂಗಳಕ್ಕೆೆ ಇಳಿಯದೆ ಎರಡನೇ ಸುತ್ತಿಗೆ ಲಗ್ಗೆೆ ಇಟ್ಟರು.
ಕಳೆದ ವಾರ ಸ್ಕಾಟಿಷ್ ಓಪನ್ ಗೆದ್ದ 18ರ ಪ್ರಾಯದ ಲಕ್ಷ್ಯಸೇನ್ ಅವರು ಕೂಡ ಫ್ರೆೆಂಚ್ ಶಟ್ಲರ್ ಥಾಮಸ್ ರಾಕ್ಸೆೆಲ್ ಎದುರು ವಾಕ್ ಓವರ್ ಲಭಿಸಿತು. ಇನ್ನೂ ಮಹಿಳೆಯರ ವಿಭಾಗದಲ್ಲಿ ಅಶ್ಮಿತಾ ಚಲಿಯಾ ಅವರು ವೃಶಾಲಿ ಗುಮ್ಮಾಡಿ ಅವರ ವಿರುದ್ಧ 21-16, 21-16 ಅಂತರದಲ್ಲಿ ಗೆಲುವು ಪಡೆದರು. ಆ ಮೂಲಕ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.
ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸೋಮವಾರ ಕೊನೆಯ ಗಳಿಗೆಯಲ್ಲಿ ಸೈಯದ್ ಮೋಡಿ ಚಾಂಪಿಯನ್‌ಶಿಪ್‌ನಿಂದ ವಿಥ್‌ಡ್ರಾ ಮಾಡಿಕೊಂಡಿದ್ದರು. ಅಲ್ಲದೇ, ವಿಶ್ವ ದರ್ಜೆಯ ಟೂರ್ನಿಗಳಲ್ಲಿ ತಮ್ಮ ಗಮನ ಕೇಂದ್ರಿಕರಿಸಲು ಮುಂದಿನ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಿಂದ ದೂರ ಉಳಿಯುವುದಾಗಿ ಘೋಷಿಸಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 