ಬ್ಯಾಡಗಿ ಹೋಬಳಿ ಮಟ್ಟದ ಜನಸ್ಪಂದನಾ ಸಭೆ

ಲೋಕದರ್ಶನವರದಿ

ಬ್ಯಾಡಗಿ: ಕಳೆದ ಒಂದು ವರ್ಷದ ಹಿಂದೆ ಬೆಳಕೇರಿ ಗ್ರಾಮದ ರೈತನೊಬ್ಬ ಆತ್ಮ ಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಈವರೆಗೂ ಯಾವುದೇ ಪರಿಹಾರವನ್ನು ಒದಗಿಸದ ತಾಲೂಕಾಡಳಿತ ಹಾಗೂ ಕೃಷಿ ಇಲಾಖೆಯ ಕಾರ್ಯ ವೈಖರಿಯನ್ನು ಗ್ರಾಮಸ್ಥರು ಪ್ರಶ್ನಿಸಿ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಡೆಯಿತು.

   ಬ್ಯಾಡಗಿ ಹೋಬಳಿ ಮಟ್ಟದ ಜನಸ್ಪಂದನಾ ಸಭೆಯಲ್ಲಿ ರೈತ ಕುಟುಂಬಕ್ಕೆ ಅನ್ಯಾಯವಾದ ಬಗ್ಗೆ ಗ್ರಾಮದ ದ್ಯಾಮನಗೌಡ್ರ ಚಿಕ್ಕನಗೌಡ್ರ ಪ್ರಸ್ತಾಪಿಸಿ ಕಳೆದ ವರ್ಷ ಗ್ರಾಮದ ಶೇಖಪ್ಪ ಭರಮಪ್ಪ ಪೂಜಾರ ಎಂಬ ರೈತ ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದು, ಇಲ್ಲಿಯವರೆಗೂ ಸರಕಾರದಿಂದ ಯಾವುದೇ ಪರಿಹಾರ ಬರದೇ ಆತನ ಕುಟುಂಬವು ದಯನೀಯ ಸ್ಥಿತಿಯಲ್ಲಿದೆ. ತಾಲೂಕಾಡಳಿತವಾಗಲಿ ಇಲ್ಲವೇ ಕೃಷಿ ಇಲಾಖೆಯಾಗಲಿ ಯಾವುದೇ ಸ್ಪಂದನೆಯನ್ನು ತೋರುತ್ತಿಲ್ಲಾ, ಇನ್ನಾದರೂ ತಾಲೂಕಾಡಳಿತ ಮೃತ ರೈತನ ಕುಟುಂಬಕ್ಕೆ ಪರಿಹಾರ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

      ಕಳೆದ ವರ್ಷ ಗ್ರಾಮದ ಯೋಧನಾದ ಸಣ್ಣಗೌಡ ಚಿಕ್ಕನಗೌಡ್ರ ಸೇವೆಯ ಸಂದರ್ಭದಲ್ಲಿ ಹುತಾತ್ಮರಾಗಿದ್ದು, ಗ್ರಾಮದಲ್ಲಿ ಅವರ ನೆನಪಿನಾರ್ಥವಾಗಿ ಸ್ಮಾರಕ ನಿಮರ್ಿಸಲು ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ತಹಶೀಲದಾರ ಕೆ.ಗುರುಬಸವರಾಜ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚಚರ್ಿಸಿ ಸ್ಮಾರಕ ನಿಮರ್ಾಣಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.

 ಗ್ರಾ.ಪಂ.ಅಧ್ಯಕ್ಷ ಮಹಬೂಬಸಾಬ ನದಾಫ  ಮಾತನಾಡಿ ಗ್ರಾಮದಲ್ಲಿ ಕಳೆದ 8-10 ದಿನಗಳಿಂದ ಭಾರಿ ಗಾಳಿಮಳೆಯಿಂದಾ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದ್ದು, ಎಲ್ಲೆಂದರಲ್ಲೆ ವಿದ್ಯುತ್ ತಂತಿಗಳು ನೇತಾಡುತ್ತಿವೆಯಲ್ಲದೇ ಕಂಬಗಳು ಸಹ ನೆಲಕ್ಕೆ ಉರುಳಿವೆ. ಈ ಕುರಿತು ಕೆಇಬಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಸ್ಪಂದನೆ ಇಲ್ಲದಾಗಿದೆ. ಜನಪ್ರತಿನಿಧಿಗಳಿಗಂತೂ ಯಾವುದೇ ಕಿಮ್ಮತ್ತಿಲ್ಲದಂತೆ ವತರ್ಿಸುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಈ ಅವ್ಯವಸ್ಥೆಯನ್ನು ಸರಿ ಮಾಡದೇ ಇದ್ದಲ್ಲಿ ಅಧಿಕಾರಿಗಳಿಗೆ ಘೇರಾವು ಹಾಕಲಾಗುವುದೆಂದು ಎಚ್ಚರಿಸಿದರು.

 ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಕೆ.ರಾಜಪ್ಪ  ರಸ್ತೆ ಅಕ್ಕಪಕ್ಕದಲ್ಲಿ ತಿಪ್ಪೆರಾಸಿಗಳು ತುಂಬಿಕೊಂಡಿದ್ದು, ಸಂಬಂಧಪಟ್ಟ ತಿಪ್ಪೆಗಳ ಮಾಲೀಕರು ತಮ್ಮ ತಿಪ್ಪೆರಾಸಿಗಳನ್ನು ರಸ್ತೆಯ ಪಕ್ಕದಿಂದಾ ತೆರವುಗೊಳಿಸಬೇಕು. ಇಲ್ಲದೇ ಹೋದಲ್ಲಿ ತಾವೇ ಇಲಾಖೆಯ ವತಿಯಿಂದಾ ಅಲ್ಲಿರುವ ತಿಪ್ಪೆಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳಾಂತರಿಸುವುದಾಗಿ ಸಭೆಯ ಮೂಲಕ ಗ್ರಾಮಸ್ಥರಿಗೆ ತಿಳಿಸಿದರು.

   ಸಭೆಯಲ್ಲಿ ಅಂಗನವಾಡಿ ಸ್ಥಳಾಂತರ, ಆಧಾರ ಕಾರ್ಡ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ಬಸ್ ವ್ಯವಸ್ಥೆ, ಶಾಲಾ ಮೈದಾನ, ಬಸ್ಶೆಲ್ಟರ್ ನಿಮರ್ಾಣ, ಜಮೀನುಗಳಿಗೆ ದಾರಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚಚರ್ಿಸಲಾಯಿತು. 

        ಸಭೆಯಲ್ಲಿ ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ ಪರಶುರಾಮ ಪೂಜಾರ, ತಾ.ಪಂ.ಸದಸ್ಯ ಗುಡ್ಡಪ್ಪ ಕೋಳೂರ, ಗ್ರಾ.ಪಂ.ಸದಸ್ಯರಾದ ಬಸವರಾಜ ಹಲಗೇರಿ, ಪುಷ್ಪಾ ಗಾಣಗೇರ, ವನಿತಾ ಗದ್ಲೆಪ್ಪನವರ, ಬಸಮ್ಮ ಅಂಬಲಿ ವಿವಿಧ ಇಲಾಖಾಧಿಕಾರಿಗಳಾದ ಕೆ.ನಟರಾಜ್, ವೈ.ಎಂ.ಮಟಗಾರ, ಬಿ.ಕೆ.ರುದ್ರುಮನಿ, ಗೀತಾ ಕುಂದಾಪುರ, ವೈ.ಎನ್.ಹಿರಿಯಕ್ಕನವರ, ಕೆ.ಎಚ್.ಪೂಜಾರ, ಡಾ.ಗೋಪಿನಾಥ, ಟಿ.ವಿಜಯಲಕ್ಷ್ಮಿ, ಮಾಲತೇಶ ಹುಣಿಸಿಮರದ, ಆರೀಫ ಅಹ್ಮದ್, ರಾಮಲಿಂಗ್ಪಪ, ಎಸ್.ಸಿ.ದ್ಯಾಮನಗೌಡ್ರ, ಪಿಡಿಓ ಲತಾ ತಬರಡ್ಡಿ, ಶಿದ್ಲಿಂಗಪ್ಪ ಮಲ್ಲಾಡದ, ಶೋಭಾ ಹುಣಿಸಿಮರದ, ವಿಜಯಕುಮಾರ ಪತ್ತಾರ, ಎಚ್.ಗುಂಡಪ್ಪ ಸೇರಿದಂತೆ ಇನ್ನಿತರರಿದ್ದರು.