ಹಿಂದುಳಿದ ವರ್ಗಗಳು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು : ಕೀರ್ತಿ ಗಣೇಶ

ಹಿಂದುಳಿದ ವರ್ಗಗಳು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು : ಕೀರ್ತಿ ಗಣೇಶ Backward classes must build a self-reliant life: Keerthi Ganesha

ಲೋಕದರ್ಶನ ವರದಿ 

ಮಹಾಲಿಂಗಪುರ : ಹಿಂದುಳಿದ ವರ್ಗದ ಎಲ್ಲ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು ಅದಕ್ಕಾಗಿ ಸರ್ಕಾರ ಸಕಲ ಸೌಲಭ್ಯ ಕೊಡಲು ಸಿದ್ದವಾಗಿದೆ. ಇದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಬೆಳೆದು ಸ್ವಾವಲಂಬನೆಯ್ ಬದುಕು ಕಟ್ಟಿಕೊಳ್ಳಬೇಕೆಂದು ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ  ಕೀರ್ತಿಗಣೇಶ ಏನ್ ಜಿ ಹೇಳಿದರು.

ನಗರದ ಶಕ್ತಿ ದೇವತೆ ಬನಶಂಕರಿ ದೇವಸ್ಥಾನದ ಸಂಸ್ಕೃತಿಕ ಭವನದಲ್ಲಿ ನಡೆದ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಅರ್ಹ ಫಲಾನುಭವಿಗಳಿಗೆ ಹೋಲಿಗೆ ಯಂತ್ರಗಳನ್ನು ವಿತರಸಿ ಮಾತನಾಡಿ ರಾಜ್ಯ ಸರ್ಕಾರ ಎಲ್ಲ ವರ್ಗಗಳ, ಆರ್ಥಿಕವಾಗಿ ಹಿಂದುಳಿದ ಜನರ ಅಭಿವೃದ್ಧಿಗೆ ಸಕಲ ನೆರವು ನೀಡಲು ಸಿದ್ದವಾಗಿದೆ. ಇದರ ಸದುಪಯೋಗ ಪಡಿಸಿಕೊಂಡು ಜನ ಆರ್ಥಿಕ ಸಬಲತೆ ಸಾಧಿಸಲು ಸಹಕರಿಯಾಗಿದೆ.

ಈ ಬಾರಿ ತೇರದಾಳ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಮಹಿಳೆಯರು ಹೋಲಿಗೆ ಯಂತ್ರಗಳಿಗೆ ಅರ್ಜಿ ಹಾಕಿದ್ದು ಅದರಲ್ಲಿ ಅರ್ಹ 300 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಈ ಹಿಂದೆಯೂ 350 ಜನರಿಗೆ ಯಂತ್ರಗಳನ್ನು ವಿತರಿಸಿದ್ದು. ಮಹಿಳೆಯರು ಸ್ವ ಉದೋಗ್ಯ ಮಾಡಿ ಸ್ವಾವಲಂಬನೆ ಹೊಂದಲು ಇದು ಸಹಕಾರಿಯಾಗುತ್ತದೆ ಎಂದರು. ನಂತರ ಮಾತನಾಡಿದ ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಯಾವುದೇ ಸರ್ಕಾರವಿರಲಿ ಅದರ ಉದ್ದೇಶ ಹಿಂದುಳಿದವರ ಅಭಿವೃದ್ಧಿಯೇ ಮುಖ್ಯ್‌ ದೆಯವಾಗಿರುತ್ತದೆ.

ನಿಗಮದಲ್ಲಿ ಹಲವಾರು ಯೋಜನೆಗಳು ಇದ್ದು ಇದರ ಸಹಾಯ ಸಹಕಾರ ಪಡೆದು ಎಲ್ಲ ವರ್ಗದ ಜನ ಆರ್ಥಿಕವಾಗಿ ಸಬಲತೆ ಹೊಂದಬೇಕು ಎಂದರು.  ಈ ಸಂಧರ್ಭದಲ್ಲಿ ಮಲ್ಲಪ್ಪ ಭಾವಿಕಟ್ಟಿ, ಶಿವಲಿಂಗ್ ಟಿರ್ಕಿ, ರವಿ ಬಾಡಗಿ ಮಾತನಾಡಿದರು.

ಮುಖಂಡರಾದ ಡಾ ಎ ಆರ್ ಬೆಳಗಲಿ, ಶಂಕರಗೌಡ ಪಾಟೀಲ, ಮಹಾಲಿಂಗ ಕುಳ್ಳೊಳ್ಳಿ, ಲಕ್ಕಪ್ಪ ಚಮಕೇರಿ, ಮಹಾದೇವ ಬರಗಿ, ಬಸವರಾಜ ಚಮಕೇರಿ, ಶೀಲಾ ಭಾವಿಕಟ್ಟಿ, ಮಾಲಾ ಭಾವಲತ್ತಿ, ಗುರುಪಾದ ಅಂಬಿ, ವಿಜಯಕುಮಾರ್ ಸಬಕಾಳೆ, ಶ್ರೀಪಾದ್ ಗುಂಡಾ, ಆನಂದ ಹಟ್ಟಿ, ಅಪ್ಪಾಸಾಬ ನಾಲಬಂಧ, ವಿನೋದ ಸಿಂಪಿ, ಮಲ್ಲು ದಲಾಲ,ನಿಗಮದ ಅಧಿಕಾರಿಗಳಾದ ಶಿವಪ್ರಸಾದ, ಲಕ್ಷ್ಮಿಕಾಂತ್, ಮಹಾಂತೇಶ್ ಗುಡೆಪ್ಪನವರ. ಸೇರಿ ಹಲವರು ಇದ್ದರು.