ಹಿಂದುಳಿದ ವರ್ಗಗಳ ಬೆಳಗಾವಿ ತಾಲ್ಲೂಕಾಧಿಕಾರಿ ಶಾಂತಾ ಮರಿಗೌಡರ ಭೇಟಿ
Backward Classes meet with Belgaum Taluk Officer Shantha Marigowdar
ಬೆಳಗಾವಿ 12ಃ ಪಂಚಪೀಠಗಳಲ್ಲೂಂದಾದ ಕೇದಾರ ಪೀಠದ ಶಾಖಾ ಮಠವಾಗಿರುವ ತಾಲ್ಲೂಕಿನ ಮುತ್ನಾಳ ಹಿರೇಮಠಕ್ಕೆ ದಿ.ದೇವರಾಜ ಅರಸ ಹಿಂದುಳಿದ ವರ್ಗಗಳ ಬೆಳಗಾವಿ ತಾಲ್ಲೂಕಾಧಿಕಾರಿ ಶಾಂತಾ ಮರಿಗೌಡರ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಅವರನ್ನು ಶ್ರೀಮಠದ ಪರವಾಗಿ,ಸತ್ಕರಿಸಿದ ಪೀಠಾಧ್ಯಕ್ಷ ಶಿವಾನಂದ ಶಿವಾಚಾರ್ಯರು,ಬೆಳಗಾವಿ ತಾಲ್ಲೂಕಾ ಕಲ್ಯಾಣ ಅಧಿಕಾರಿಗಳಾಗಿ ತಾವು ಆಗಮಿಸಿದ್ದು ಸಂತಸದ ವಿಷಯ ಎಂದರು.
ಆದರೆ ಸರ್ಕಾರವು ಹಲವಾರು ಜನ ಮುಖಿ ಯೋಜನೆಗಳನ್ನು ರೂಪಿಸಿದ್ದು, ಅವು ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ತಾವು ಕಾರ್ಯೋನ್ಮುಖರಾಗಬೇಕೆಂದರು.
ಬಡ ಹಾಗು ಮಧ್ಯಮ ವರ್ಗದ ವಿದ್ಯಾರ್ಥಿಗಳು ಬಿಸಿಎಂ ವಸತಿ ನಿಲಯಗಳಲ್ಲಿದ್ದು ವ್ಯಾಸಂಗವನ್ನು ಮಾಡುತ್ತಾರೆ. ಪಾಲಕರು ತಮ್ಮ ಮಕ್ಕಳನ್ನು ವಿಶ್ವಾಸ,ನಂಬಿಕೆಯ ಆಧಾರದ ಮೇಲೆ ಅವರನ್ನು ವಸತಿ ನಿಲಯದಟ್ಟರುತ್ತಾರೆ. ಹಾಗಾಗಿ ನಿಲಯ ಪಾಲಕರು ಮಕ್ಕಳ ಯೋಗ ಕ್ಷೇಮದ ಬಗ್ಗೆ ಬಹಳಷ್ಟು ಮುತುವರ್ಜಿ ವಹಿಸಿಬೇಕೆಂದು ಶ್ರೀಗಳು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಸಿಎಂ ವಸತಿ ನಿಲಯ ಪಾಲಕರಾದ ಸಿ.ಎಂ.ಢವಳೇಶ್ವರ, ವಿಸ್ತಾರಣಾಧಿಕಾರಿ ಗಜಪತಿ ಹಾಗೂ ಬಸವರಾಜ ಮರೇದ ಸೇರಿದಮತೆ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 