ಬಾಬೂಜಿ-ಅಂಬೇಡ್ಕರ್ ಜಯಂತಿ: ಪೂರ್ವಭಾವಿ ಸಭೆ

ಬಾಬೂಜಿ-ಅಂಬೇಡ್ಕರ್ ಜಯಂತಿ: ಪೂರ್ವಭಾವಿ ಸಭೆ Babuji-Ambedkar Jayanti: Preparatory meeting

ದೇವರಹಿಪ್ಪರಗಿ 31:  ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್ ರವರ 135ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ್ 119 ನೇ ಜಯಂತಿ ಏಪ್ರಿಲ್ 5 ರಂದು ಹಾಗೂ ಏಪ್ರಿಲ್ 14 ರಂದು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ದಂದು ಡಾ.ಬಿ.ಆರ್‌. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಧಿಕಾರಿಗಳು ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದರು.

ಏಪ್ರಿಲ್ 5 ರಂದು ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ ಪಟ್ಟಣದ ಪ.ಪಂ ಸಭಾ ಭವನದಲ್ಲಿ ಮಹನೀಯರಿಗೆ ಗೌರವ ನಮನ ಸಲ್ಲಿಸುವುದು. ವಿಶೇಷ ಉಪನ್ಯಾಸ ಈ ಮಹಾನ್ ನಾಯಕರ ಜೀವನ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ಅದೇ ರೀತಿಯಾಗಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್ ರವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಪಟ್ಟಣದ ಪ್ರಮುಖ ವೃತ್ತಗಳಲ್ಲಿರುವ ಮಹನೀಯರಿಗೆ ಮಾಲಾರೆ​‍್ಣ ಮತ್ತು ಪುಷ್ಪಾರ್ಚನೆ. ಭವ್ಯ ಮೆರವಣಿಗೆ ವಿವಿಧ ಕಲಾತಂಡಗಳು ಮತ್ತು ಜಾನಪದ ಮೇಳಗಳೊಂದಿಗೆ  ಪ್ರಮುಖ ರಸ್ತೆಗಳಲ್ಲಿ ಭಾವಚಿತ್ರಗಳ ಮೆರವಣಿಗೆ. ಪ್ರಮುಖ ವೃತ್ತಗಳು ವಿದ್ಯುತ್ ದೀಪಾಲಂಕಾರ ಮಾಡುವುದರ ಕುರಿತು ಚರ್ಚಿಸಲಾಯಿತು.

ಸಮಾಜ ಮುಖಂಡರು ಹಾಗೂ ಅಧಿಕಾರಿಗಳು ಜಯಂತಿ ಕುರಿತು ತಮ್ಮ ಸಲಹೆ ಸೂಚನೆಗಳು ನೀಡಿದರು.ಇದೇ ಸಂದರ್ಭದಲ್ಲಿ ತಾ.ಪಂ ಇಒ ಭಾರತಿ ಚೆಲುವಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಭವಾನಿ ಪಾಟೀಲ,ಬಿಇಒ ಎಂ.ಬಿ.ಯಡ್ರಾಮಿ, ಸಿಡಿಪಿಒ ಅನೀಲ ಹಳ್ಳಿ, ಅಕ್ಷರ ದಾಸೋಹ ಅಧಿಕಾರಿಗಳಾದ ಅರವಿಂದ್ ಡೋಣೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಬಿ.ಗಡಗಿ, ಸದಾಸಿವ ಗುಡಿಮನಿ, ಮುಖಂಡರುಗಳಾದ ರಾವುತ್ ತಳಕೇರಿ,ಜಾನು ಗುಡಿಮನಿ, ಸಿ.ಕೆ.ಕುದರಿ, ಎಸ್‌.ಎನ್‌. ಬಸವರಡ್ಡಿ, ಸಂಗಪ್ಪ ತಡವಲ್,ರಾಹುಲ್ ದೋಡಮನಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಅನೇಕರು ಇದರು.ಕಾರ್ಯಕ್ರಮದ ನಿರೂಪಣೆ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಜಿ.ಪಿ.ಬಿರಾದಾರ, ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ ವಂದಿಸಿದರು.