ಗದ್ಯಾಳ ಗ್ರಾಮದ ಬಿಎಸ್ಎಫ್ ಯೋಧ ರಸ್ತೆ ಅಪಘಾತದಲ್ಲಿ ಸಾವು
BSF soldier from Gadyal village dies in road accident
ಲೋಕದರ್ಶನ ವರದಿ
ಜಮಖಂಡಿ 10: ತಾಲೂಕಿನ ಗದ್ಯಾಳ ಗ್ರಾಮದ ಭಾರತೀಯ ಸೇನೆಯ ಬಿಎಸ್ಎಫ್ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಜರುಗಿದೆ. ಗದ್ಯಾಳ ಗ್ರಾಮದ ಮಾದೇವ ಸದಾಶಿವ ಡಪಳಾಪೂರ (30) ಭಾರತೀಯ ಸೇನೆಯಲ್ಲಿ ಮೇಘಾಲಯ, ಅಸ್ಸಾಂ, ಜಮ್ಮುವಿನಲ್ಲಿ ಸೇವೆ ಸಲಿಸುತ್ತಿದ್ದ ಯೋಧ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿರುತ್ತಾರೆ. ತಮ್ಮ ಮನೆಯ ದೇವರಿಗೆ ಪೂಜೆ ಸಲಿಸಿ ಮರಳಿ ಬರುವ ಸಮಯದಲ್ಲಿ ವಿಜಯಪುರ ಬೈಪಾಸ್ ರಸ್ತೆಯ ಬಳಿ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಭಾರತೀಯ ಸೇನೆಯ ಬಿಎಸ್ಎಫ್ ಯೋಧ ಮಾದೇವ ಸದಾಶಿವ ಡಪಳಾಪೂರ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗಿದ್ದು. ಸರಕಾರಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೇರವೆರಿಸಲಾಗಿದೆ. ಬಿಎಸ್ಎಫ್ ಕಮಾಂಡರಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಭಾರತೀಯ ಯೋಧರ ಪ್ರಕಾರ ಗಾಳಿಯಲ್ಲಿ ಮೂರು ಸುತ್ತು ಗುಂಡುಗಳನ್ನು ಹಾರಿಸಿ. ರಾಷ್ಟ್ರ ಧ್ವಜವನ್ನು ಪಾರ್ಥಿವ ಶರೀರದ ಮೇಲೆ ಹಾಕಲಾಗಿತ್ತು. ನಂತರ ನಿಧನ ಹೊಂದಿದ ಯೋಧನ ಧರ್ಮಪತ್ನಿಗೆ ಹಸ್ತಾಂತರಿಸಲಾಯಿತು. ಧರ್ಮಪತ್ನಿ 6 ತಿಂಗಳು ತುಂಬು ಗರ್ಭಿಣಿಯಾಗಿದ್ದು. ಗಂಡನ ನಿಧನ ಹೊಂದಿರುವದನ್ನು ಕಂಡು ಧರ್ಮಪತ್ನಿ ಹಾಗೂ ಹೆತ್ತ ತಂದೆ, ತಾಯಿಯ ಮತ್ತು ಕುಟುಂಬಸ್ಥರ ಅಕ್ರಂದಣ ಮುಗಿಲು ಮುಟ್ಟುವಂತೆ ಇಂತು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 