ಪುಟಿದೆದ್ದ ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 356 ಅಂಕ ಏರಿಕೆ

ಮುಂಬೈ, ಜೂನ್‍ 26: ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟು ಮತ್ತು ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ, ಬ್ಯಾಂಕಿಂಗ್‍ ಷೇರುಗಳಿಗೆ ಹೊಸ ಖರೀದಿ ಬೆಂಬಲ ವ್ಯಕ್ತವಾಗಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್, ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 356 ಅಂಕ ಏರಿಕೆ ದಾಖಲಿಸಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 106 ಅಂಕ ಏರಿಕೆ ಕಂಡು 10,395.35 ಕ್ಕೆ ತಲುಪಿದೆ.ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 35,198.61 ಮತ್ತು 35,054.55ರಲ್ಲಿತ್ತು.ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 10,403.75 ಮತ್ತು 10,352.95ರ ಮಟ್ಟದಲ್ಲಿತ್ತು. 

ವಲಯ ಸೂಚ್ಯಂಕಗಳಾದ ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಲೋಹ ಮತ್ತು ಕೈಗಾರಿಕಾ ಷೇರುಗಳು ಮಾರುಕಟ್ಟೆಯನ್ನು ಸುಧಾರಿಸಿದವು ಎಂದು ಮಾರುಕಟ್ಟೆಯಲ್ಲಿನ ಮಧ್ಯವರ್ತಿಗಳು ತಿಳಿಸಿದ್ದಾರೆ. ಇಂಡಸ್‍ ಇಂಡ್‍ ಬ್ಯಾಂಕ್ , ಇನ್ಫೋಸಿಸ್, ಒಎನ್‌ಜಿಸಿ ಮತ್ತು ಟಿಸಿಎಸ್‍ ಷೇರುಗಳು ಉತ್ತಮ ಲಾಭ ಕಂಡಿವೆ. ಕೊಟಕ್ ಬ್ಯಾಂಕ್, ಹಿಂದ್ ಯೂನಿಲಿವರ್, ಸನ್ ಫಾರ್ಮಾ ಹೆಚ್ಚು ನಷ್ಟ ಕಂಡಿವೆ.ಐಟಿಸಿ, ಕೋಲ್ ಇಂಡಿಯಾ, ಮತ್ತು ಗ್ಲೆನ್ಮಾರ್ಕ್ ಫಾರ್ಮಾ ಸೇರಿದಂತೆ ಒಟ್ಟು 247 ಕಂಪನಿಗಳು ಇಂದು ಮಾರ್ಚ್ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಲಿವೆ.