ಎಸ್‌ಐಆರ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಎಲ್‌ಒಗಳಿಗೆ ಸನ್ಮಾನ

ಎಸ್‌ಐಆರ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಎಲ್‌ಒಗಳಿಗೆ ಸನ್ಮಾನ BLOs felicitated for successfully completing SIR work

ಎಸ್‌ಐಆರ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಎಲ್‌ಒಗಳಿಗೆ ಸನ್ಮಾನ 


ಸವದತ್ತಿ 16 : ಎಸ್‌ಐಆರ್  ಕಾರ್ಯಕ್ಕೆ ಸಂಬಂಧಿಸಿದ ಗಣತಿ ನಮೂನೆಗಳ ವಿತರಣೆ ಮತ್ತು ಡಿಜಿಟೈಸೇಶನ್ ಪ್ರಕ್ರಿಯೆಯನ್ನು ನಿಗದಿತ ಸಮಯಮಿತಿಯೊಳಗೆ ಅತ್ಯಂತ ಸಮರ್ಥವಾಗಿ ಪೂರ್ಣಗೊಳಿಸಿದ ಬಿಎಲ್‌ಒಗಳನ್ನು ತಹಶೀಲ್ದಾರ್ ಕಚೇರಿಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದ ಅವರು, ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಎಸ್‌ಐಆರ್ ಗಣತಿ ಕಾರ್ಯವನ್ನು ಬಿಎಲ್‌ಒಗಳು ಯಾವುದೇ ಲೋಪದೋಷಗಳಿಲ್ಲದೆ, ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿರುವುದು ಶ್ಲಾಘನೀಯ. ಇವರ ಕರ್ತವ್ಯನಿಷ್ಠೆ ಇತರ ಸಿಬ್ಬಂದಿಗೆ ಮಾದರಿಯಾಗಿದೆ, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ಸೇವೆ ಸಲ್ಲಿಸಿದ ಬಿಎಲ್‌ಒಗಳಾದ ಯು. ಎಸ್‌. ಮಾಣಿಕದಾರ, ಬಿ. ಎಸ್‌. ನರಗುಂದ ಮತ್ತು ನಿಂಗಪ್ಪ ಎಸ್‌. ಕುರಹಟ್ಟಿ ಅವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎ. ಖಾಜಿ, ತಾ.ಪಂ ಇಒ ಆನಂದ ಬಡಕುಂದ್ರಿ, ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿನಮಠ, ಗ್ರೇಡ್‌-2 ತಹಶೀಲ್ದಾರ್ ಎಂ. ಎನ್‌. ಮಠದ್, ಸಿಡಿಪಿಒ ಅಮೃತ ಸಾಣಿಕೊಪ್ಪ, ಚುನಾವಣೆ ಶಿರಸ್ತೇದಾರ್ ಶಶಿರಾಜ ವನಕಿ ಸೇರಿದಂತೆ ಚುನಾವಣಾ ಸಿಬ್ಬಂದಿ, ಸಿಆರ​‍್ಿ ಮತ್ತು ಬಿಆರ​‍್ಿ ವರ್ಗದವರು ಉಪಸ್ಥಿತರಿದ್ದರು.