ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ನಿವಾಸಕ್ಕೆ ಭೇಟಿ ನೀಡಿ, ಗಣತಿ ನಮೂನೆ ವಿತರಿಸಿದ ಬಿಎಲ್‌ಒಗಳು

ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ನಿವಾಸಕ್ಕೆ ಭೇಟಿ ನೀಡಿ, ಗಣತಿ ನಮೂನೆ ವಿತರಿಸಿದ ಬಿಎಲ್‌ಒಗಳು BLOOs visited former Minister Bandeppa Kashempur's residence and distributed census forms

ಲೋಕದರ್ಶನ ವರದಿ 

ಬೀದರ್ 13 : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮದ ನಿಮಿತ್ಯವಾಗಿ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್‌ ಸಂಖ್ಯೆ 106ರ ಮತಗಟ್ಟೆ ಮಟ್ಟದ ಅಧಿಕಾರಿಗಳಾದ (ಬಿಎಲ್‌ಒಗಳಾದ) ಎಂ.ಡಿ. ಅಂಜುಮ್ ಹಾಗೂ ಸೈಯದ್ ಇಪ್ತಿಕಾರ್ ರವರು ಬೀದರ್ ನಗರದಲ್ಲಿರುವ ಮಾಜಿ ಸಚಿವರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ, ಗಣತಿ ನಮೂನೆ (ಎನುಮಾರೇಷನ್ ಫಾರಂ) ವಿತರಿಸಿದರು. 

ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರಿಗೆ ಎನುಮಾರೇಷನ್ ಫಾರಂ (ಗಣತಿ ನಮೂನೆ) ನೀಡಿದ ಬಿಎಲ್‌ಒಗಳು, ಅದನ್ನು ಭರ್ತಿ ಮಾಡಿ ಸಲ್ಲಿಸುವಂತೆ ಮನವಿ ಮಾಡಿದರು. ಬಿಎಲ್‌ಒಗಳ ಮಾರ್ಗದರ್ಶನದಂತೆ ಬಂಡೆಪ್ಪ ಖಾಶೆಂಪುರ್ ರವರು ಗಣತಿ ನಮೂನೆ (ಎನುಮಾರೇಷನ್ ಫಾರಂ) ಯನ್ನು ಭರ್ತಿ ಮಾಡಿದರು. ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಮತದಾರರು ಬಿಎಲ್‌ಒಗಳಿಗೆ ಸಹಕರಿಸಬೇಕು ಎಂದರು. 

ಬಿಎಲ್‌ಒಗಳು ನೀಡುವ ಸೂಚನೆಗಳಂತೆ ಅಗತ್ಯ ದಾಖಲೆಗಳೊಂದಿಗೆ ಗಣತಿ ನಮೂನೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಬಿಎಲ್‌ಒಗಳಾದವರು, ಮತದಾರರಿಗೆ ತಿಳಿಯುವ ರೀತಿಯಲ್ಲಿಯೇ ಮಾಹಿತಿ ಮಾರ್ಗದರ್ಶನ ನೀಡಬೇಕು. ಒಟ್ಟಾರೆಯಾಗಿ ಎಲ್ಲರೂ ಸೇರಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ವಾರ್ಡ್‌ ಸಂಖ್ಯೆ 106 ಮತಗಟ್ಟೆ ಮಟ್ಟದ ಅಧಿಕಾರಿಗಳಾದ (ಬಿಎಲ್‌ಒಗಳಾದ)  ಎಂ.ಡಿ. ಅಂಜುಮ್ ಹಾಗೂ ಸೈಯದ್ ಇಪ್ತಿಕಾರ್ ರವರು ಸೇರಿದಂತೆ ಅನೇಕರಿದ್ದರು.