ಸ್ಕೇಟಿಂಗ್‌ನಲ್ಲಿ ಬಿಎಲ್‌ಡಿಇ ಸ್ಪೋರ್ಟ್ ಅಕಾಡೆಮಿ ಅತ್ಯುತ್ತಮ ಸಾಧನೆ
BLDE Sport Academy excels in skating
ವಿಜಯಪುರ 17: ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿಯಲ್ಲಿರುವ ಬಿ.ಎಲ್.ಡಿ.ಇ ಸ್ಪೋರ್ಟ್ ಅಕಾಡೆಮಿಯ ವಿದ್ಯಾರ್ಥಿಗಳು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ 79 ನಿಮಿಷಗಳ ಸತತ ಸ್ಕೇಟಿಂಗ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಯುನೈಟೆಟ್ ಸ್ಟೇಟ್ ಆಫ್ ಅಮೇರಿಕಾ ಬುಕ್ ಆಫ್ ವರ್ಲ್ಡ ರೆಕಾರ್ಡ್ಸ್, ಜೀನಿಯಸ್ ಇಂಡಿಯನ್ ಬುಕ್ ಆಫ್ ವರ್ಡ್ಲ ರೆಕಾರ್ಡ್ಸ ಮತ್ತು ಯು. ಎನ್. ಬುಕ್ ಆಫ್ ವರ್ಲ್ಡ ರೆಕಾರ್ಡ್ಸ ಜಂಟಿಯಾಗಿ ಶುಕ್ರವಾರ ದೇಶಾದ್ಯಂತ ಜಿಲ್ಲಾ ಕೇಂದ್ರದಲ್ಲಿ ಸ್ಕೇಟಿಂಗ್ ಆಯೋಜಿಸಿತ್ತು. ಬಾಗಲಕೋಟೆ ಜಿಲ್ಲೆಯ ಕಾರ್ಯಕ್ರಮದ ಜಮಖಂಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಎಲ್.ಡಿ.ಇ ಸ್ಪೋರ್ಟ್ ಅಕ್ಯಾಡೆಮಿಯ ಸಂಚಾಲಕ ಮತ್ತು ಸ್ಕೇಟಿಗ್ ಹಾಗೂ ವ್ಹಾಲಿಬಾಲ್ ತರಬೇತುದಾರ ಸಂಜಯ ಮನ್ನಿಕೇರಿ ಅವರ ಮಾರ್ಗದರ್ಶನದಲ್ಲಿ 27 ಜನ ವಿದ್ಯಾರ್ಥಿಗಳು ಭಾಗವಹಿಸಿ ಸತತ 79 ನಿಮಿಷ ಸ್ಕೇಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜಮಖಂಡಿ ಬಿ.ಎಲ್.ಡಿ.ಇ ಸಿ.ಬಿ.ಎಸ್.ಇ ಶಾಲೆ ಸೇರಿದಂತೆ ನಾನಾ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಇದಕ್ಕೂ ಮುಂಚೆ ಈ ಕ್ರೀಡಾಪಟುಗಳು ಮೂರು ತಿಂಗಳು ತರಬೇತಿ ಪಡೆದಿದ್ದರು. ಶುಕ್ರವಾರ ಸಂಜೆ 5 ಗಂಟೆಗೆ ಪ್ರಾರಂಭವಾದ ಈ ಸ್ಕೇಟಿಂಗ್ ಸಂಜೆ 6 ಗಂಟೆ 19 ನಿಮಿಷಕ್ಕೆ ಮುಕ್ತಾಯವಾಯಿತು.
ವಿಶೇಷ ಸ್ಕೇಟಿಂಗ್‌ನಲ್ಲಿ ಪಾಲ್ಗೋಂಡು ಹೆಮ್ಮೆ ತಂದಿರುವ ವಿದ್ಯಾರ್ಥಿಗಳು ಮತ್ತು ತರಬೇತುದಾರ ಸಂಜಯ ಮನ್ನಿಕೇರಿ ಅವರ ಸಾಧನೆಯಲ್ಲಿ ಬಿ.ಎಲ್.ಡಿ.ಇ ಜಮಖಂಡಿ ಆವರಣದ ಆಡಳಿತಾಧಿಕಾರಿ ಎಸ್. ಎಚ್. ಲಗಳಿ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಜಿ. ಎಂ. ವೀರಭದ್ರ್ಪ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಶಿವಕುಮಾರ, ಬಿ. ಎಡ್. ಕಾಲೇಜಿನ ಪ್ರಾಚಾರ್ಯ ಹುಸೇನ ಮಿಯಾ, ಡಿಗ್ರಿ ಕಾಲೇಜಿನ ಪ್ರಾಚಾರ್ಯ ಪಿ. ಡಿ. ಪೋಳ, ಪಿಯು ಕಾಜೇಜಿನ ಪ್ರಾಚಾರ್ಯರಾದ ಎಂ. ಎಂ. ಪುಟ್ಟಣ್ಣನವರ, ಬಿ. ಐ. ಕರಳಟ್ಟಿ ಅವರು ಸನ್ಮಾನಿಸಿ ಅಭಿನಂದಿಸಿದರು.
ಸ್ಪೋರ್ಟ್ಸ ಅಕ್ಯಾಡೆಮಿ ವಿದ್ಯಾರ್ಥಿಗಳ ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ಮತ್ತು ತರಬೇತುದಾರರನ್ನು ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 