ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ : ಕ್ಯಾಂಪಸ್ ಸಂದರ್ಶನದಲ್ಲಿ 81 ಜನ ಆಯ್ಕೆ
BLDE Industrial Training Institute: 81 people selected in campus interview
ವಿಜಯಪುರ 30: ನಗರದ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಸೋಮವಾರ ಕೋಲಾರದ ಹೋಂಡಾ ಮೋಟಾರ್ ಸೈಕಲ್ ಸ್ಕೂಟರ್ ಇಂಡಿಯಾ ಪ್ರೈ. ಲಿ ಕಂಪನಿ ಅಪ್ರೆಂಟಿಸ್ಶಿ ಗಾಗಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ 81 ಜನ ಆಯ್ಕೆಯಾಗಿದ್ದಾರೆ. ಈ ಕ್ಯಾಂಪಸ್ ಡ್ರೈವ್ ನಲ್ಲಿ 122 ತರಬೇತಿದಾರರು ಭಾಗವಹಿಸಿದ್ದರು. ಇವರಲ್ಲಿ 81 ಜನ ಆಯ್ಕೆಯಾಗಿದ್ದು, ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆಯ(ಐಟಿಐ)ಗೆ ಸೇರಿದ 75 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನಿಲಗೌಡ ಪಾಟೀಲ ಹಾಗೂ ಪ್ರಾಚಾರ್ಯರ ಎಂ. ಡಿ. ಪಡಸಲಗಿ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯಪುರ ನಗರದ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ ಕೋಲಾರದ ಹೋಂಡಾ ಮೋಟಾರ್ ಸೈಕಲ್ ಸ್ಕೂಟರ್ ಇಂಡಿಯಾ ಪ್ರೈ. ಲಿ ಕಂಪನಿ ಅಪ್ರೆಂಟಿಸ್ಶಿ ಗಾಗಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ 81 ಜನ ತರಬೇತುದಾರರು ಗ್ರುಪ್ ಫೋಟೋಗೆ ಪೋಸ್ ನೀಡಿದರು. ಈ ಸಂದರ್ಭದಲ್ಲಿ ತರಬೇತಿ ಕೇಂದ್ರದ ಸಿಬ್ಬಂದಿ, ಕಂಪನಿಯವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 