ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿ ಜರ್ನಲ್ ಆಫ್ ಹೆಲ್ತ್‌ ಸಾಯಿನ್ಸ್‌ ಪರಿಷ್ಕೃತಿ ಆವೃತ್ತಿ ಉದ್ಘಾಟನೆ

ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿ ಜರ್ನಲ್ ಆಫ್ ಹೆಲ್ತ್‌ ಸಾಯಿನ್ಸ್‌ ಪರಿಷ್ಕೃತಿ ಆವೃತ್ತಿ ಉದ್ಘಾಟನೆ BLDE Deemed University Journal of Health Sciences Revised Edition Launched

  ವಿಜಯಪುರ  21: ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಎಸ್‌ಎಜಿಇ(ಖಂಉಇ) ಪಬ್ಲಿಕೇಷನ್ಸ್‌ ಸಹಯೋಗದೊಂದಿಗೆ ಪ್ರಕಟವಾಗುತ್ತಿರುವ ಬಿ.ಎಲ್‌.ಡಿ.ಇ ಜರ್ನಲ್ ಆಫ್ ಹೆಲ್ತ್‌ ಸಾಯಿನ್ಸ್‌ (ಬಿ.ಜೆ.ಎಚ್‌.ಎಸ್) ವೆಬ್‌ಸೈಟ್‌ನ ಪರಿಷ್ಕೃತ ಆವೃತ್ತಿಯನ್ನು ಸಮಕುಲಾಧಿಪತಿ, ಡಾ. ವೈ. ಎಂ. ಜಯರಾಜ ಅವರು ಗುರುವಾರ ಉದ್ಘಾಟಿಸಿದರು.ಬಳಿಕ ಸಂದರ್ಭದಲ್ಲಿ ಮಾತನಾಡಿದ ಅವರು ಎಸ್‌ಎಜಿಇ ಪಬ್ಲಿಕೇಷನ್ಸ್‌ ಸಹಯೋಗದೊಂದಿಗೆ ಬಿ.ಎಲ್‌.ಡಿ.ಇ ಜರ್ನಲ್ ಆಫ್ ಹೆಲ್ತ ಸೈನ್ಸಸ್ (ಬಿ.ಜೆ.ಎಚ್‌.ಎಸ್) ಅನ್ನು ಪ್ರಕಟಿಸುವುದರಿಂದ ಅದರ ವಿಶ್ವಾಸಾರ್ಹತೆ, ಪ್ರಕಟಣೆಗಳ ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚುವ ನೀರೀಕ್ಷೆಯಿದೆ ಎಂದು ಹೇಳಿದರು.   ಈ ಪಬ್ಲಿಕೇಷನ್ಸ್‌ ಸಹಯೋಗವು ಜರ್ನಲ್ ನ್ನು ಸ್ಕೊಪಸ್, ಪಬಮೆಡ್ ಹಾಗೂ ವೆಬ್ ಆಫ್ ಸಾಯಿನ್ಸ್‌ ಮುಂತಾದ ಪ್ರಮುಖ ಅಂತಾರಾಷ್ಟ್ರೀಯ ಡೇಟಾಬೇಸಗಳಲ್ಲಿ ಸೂಚಿಕೆ ಮಾಡಲು ಸಹಾಯವಾಗುತ್ತದೆ ಮತ್ತು ಆರೋಗ್ಯ ವಿಜ್ಞಾನಗಳಲ್ಲಿ ಪರಿಣಾಮಕಾರಿ ಸಂಶೋಧನೆಯನ್ನು ಪ್ರಸಾರ ಮಾಡಲು ದೃಢವಾದ ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ.  

 ಇದರಿಂದ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಸಂಶೋಧನ ಖ್ಯಾತಿ ಮತ್ತಷ್ಟು ವೃದ್ಧಿಯಾಗುವುದರೊಂದಿಗೆ ಅಧ್ಯಾಪಕರು ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಕಟಣೆಗಳಿಗೆ ಅವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಡೀಮ್ಡ್‌ ವಿವಿ ಕುಲಪತಿ, ಡಾ. ಅರುಣ ಚಂ. ಇನಾಮದಾರ, ಪರೀಕ್ಷೆ ನಿಯಂತ್ರಣಾಧಿಕಾರಿ ಡಾ. ಶಶಿಧರ ದೇವರಮನಿ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಬಿ.ಜೆ.ಎಚ್‌.ಎಸ್ ಪ್ರಧಾನ ಸಂಪಾದಕ ಡಾ. ಕುಶಾಲ ದಾಸ, ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಆರ್ ಮತ್ತು ಡಿ ಉಪನಿರ್ದೇಶಕಿ ಡಾ. ಚಂದ್ರಿಕಾ ದೊಡ್ಡಿಹಾಳ ಹಾಗೂ ನಾನಾ ವೈದ್ಯಕೀಯ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. 

ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಎಸ್‌ಎಜಿಇ ಪಬ್ಲಿಕೇಷನ್ಸ್‌ ಸಹಯೋಗದೊಂದಿಗೆ ಪ್ರಕಟವಾಗುತ್ತಿರುವ ಬಿ.ಎಲ್‌.ಡಿ.ಇ ಜರ್ನಲ್ ಆಫ್ ಹೆಲ್ತ ಸೈನ್ಸಸ್ (ಬಿ.ಜೆ.ಎಚ್‌.ಎಸ್) ವೆಬ್‌ಸೈಟ್‌ನ ಪರಿಷ್ಕೃತ ಆವೃತ್ತಿಯನ್ನು ಸಮಕುಲಾಧಿಪತಿ, ಡಾ. ವೈ. ಎಂ. ಜಯರಾಜ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಕುಲಪತಿ ಡಾ. ಅರುಣ ಚಂ. ಇನಾಮದಾರ, ಡಾ. ಶಶಿಧರ ದೇವರಮನಿ, ಡಾ. ತೇಜಶ್ವಿನಿ ವಲ್ಲಭ, ಡಾ. ಕುಸಾಲ ದಾಸ, ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು