ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ಹೊಡೆದಾಟ ಮನೆಗೆ ನುಗ್ಗಿ ಹೆಣ್ಣುಮಕ್ಕಳು, ಚಿಕ್ಕಮಕ್ಕಳ ಮೇಲೆ ಗುಂಡಾವರ್ತನೆ

ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ಹೊಡೆದಾಟ ಮನೆಗೆ ನುಗ್ಗಿ ಹೆಣ್ಣುಮಕ್ಕಳು, ಚಿಕ್ಕಮಕ್ಕಳ ಮೇಲೆ ಗುಂಡಾವರ್ತನೆ   BJP workers fight over trivial reason, enter house, assault girls and children

ಲೋಕದರ್ಶನ ವರದಿ, 

ಜಮಖಂಡಿ 22: ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡು ಅದು ವಿಕೋಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಒಂದು ಗುಂಪಿನ ತಂಡ ಪವನ ಸಾಳೋಂಕಿ ಅವರ ಮನೆಗೆ ನುಗ್ಗಿ ಮಕ್ಕಳು ಹಾಗೂ ಹೆಣ್ಣುಮಕ್ಕಳ ಮೇಲೆ ಕರುಣೆತೊರದೆ ಗುಂಡಾವರ್ತನೆ ನಡೆಸಿರುವ ಘಟನೆ ನಡೆದಿದೆ.  ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಂಗಮೇಶ ದಳವಾಯಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪವನ ಸಾಳೋಂಕಿ ನಡುವೆ ರಾತ್ರಿ ಕ್ಷುಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಅಲ್ಲಿಯೇ ಇದ್ದ ಮುಖಂಡರು ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿಕೊಟ್ಟಿದ್ದರು. ಆದರೆ ಬೆಳಗ್ಗೆ ಪವನ ಸಾಳೋಂಕಿ ಮನೆಗೆ ನುಗ್ಗಿದ ಸಂಗಮೇಶ ದಳವಾಯಿ ಕಡೆಯವರು ಗ್ಯಾಂಗ್ ಮನೆಯಲ್ಲಿದ್ದ ಹೆಣ್ಣುಮಕ್ಕಳು ಮತ್ತು ಚಿಕ್ಕ ಚಿಕ್ಕಮಕ್ಕಳು ಸೇರಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿ ಗುಂಡಾರ್ವನೆ ಮೆರೆದಿದ್ದಾರೆ. ಮನೆಯಲ್ಲಿ ಸಾಮಗ್ರಿಗಳನ್ನು ಬಿಸಾಕಿ ರೌಡಿಸಂ ತಹರ ತಮ್ಮ ಅಟ್ಟಹಾಸವನ್ನು ಮೆರದಿದ್ದಾರೆ ಎಂದು ಪವನ ಸಾಲೋಂಕಿ ಸಹೋದರ ಹಲ್ಲೆಗೊಳಗಾದ ಕಿರಣ ಸಾಳೊಂಕಿ ಆರೋಪಿಸಿದ್ದಾರೆ. ಘಟನೆಯಿಂದ ಪಕ್ಕದ ನಿವಾಸಿಗಳು ಗಾಬರಿಗೊಂಡಿದ್ದು ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  

ಪವನ ಸಾಳೋಂಕಿ ಇಬ್ಬರು ಸಹೋದರರ ಪೈಕಿ ಓರ್ವನ ತಲೆಯ ಭಾಗಕ್ಕೆ ಹಾಗೂ ಮತ್ತೊಬ್ಬನ ಎಡಗೈ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಸಂಗಮೇಶ ದಳವಾಯಿ ಕಡೆಯವರು ಗ್ಯಾಂಗ್ ಸಾವಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.