ಲೋಕದರ್ಶನವರದಿ
ರಾಣೇಬೆನ್ನೂರು೨೪: ಲೋಕಸಭಾ ಚುನಾವಣೆಯ ಫಲಿತಾಂಶ ಇದು ನಿಜಕ್ಕೂ ಅವಿಸ್ಮರಣೀಯವಾದ ಫಲಿತಾಂಶವಾಗಿದ್ದು, ಮೋದಿಜಿಯವರ ಕನಸು ನನಸಾಗಲು ಮತದಾರರು ಹೃದಯಪೂರ್ವಕವಾಗಿ ಆಶೀರ್ವದಿಸಿದ್ದಾರೆ. ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಈ ಫಲಿತಾಂಶ ತಕ್ಕ ಪಾಠ ಕಲಿಸಿದೆ ಎಂದು ಬಿಜೆಪಿ ಮುಖಂಡ ಶಂಭುಲಿಂಗಪ್ಪ ಭತ್ತದ ಹೇಳಿದರು.
ಗುರುವಾರ ಶಿವಕುಮಾರ ಉದಾಸಿಯವರ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಿ ಮಾತನಾಡಿದರು. ಎನ್ಡಿಎ345ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮತ್ತಿತರರು ಬಿಜೆಪಿ ಹಾಗೂ ನಾಯಕರ ಬಗ್ಗೆ ಮನಬಂದಂತೆ ಮಾತನಾಡಿದವರಿಗೆ ಈ ಚುನಾವಣೆಯ ಫಲಿತಾಂಶ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಮೋದಿಜಿಯವರ ಪಾರದರ್ಶಕವಾದ ಆಡಳಿತ, ಹಲವಾರು ಜನಪರ ಯೋಜನೆಗಳೇ ಇಂದು ಈ ಗೆಲುವಿಗೆ ಅಭೂತಪೂರ್ವ ಸಾಕ್ಷಿಯಾಗಿದೆ ಎಂದರು.
ಗ್ರಾಪಂ ಸದಸ್ಯ ಲಕ್ಷ್ಮಣ ದೀಪಾವಳಿ, ಬೀರಪ್ಪ ಎರೇಶಿಮಿ, ಗುಡ್ಡು ಭತ್ತದ, ಮಲ್ಲಿಕಾಜರ್ುನ ದೀಪಾವಳಿ, ಪ್ರವೀಣ ಚಕ್ರಸಾಲಿ, ವೀರಣ್ಣ ಬಡಿಗೇರ, ನಾಗಪ್ಪ ಎರೇಶೀಮಿ, ಪ್ರವೀಣ ಕಮ್ಮಾರ, ಮುದಿಮಲ್ಲಪ್ಪ ಭತ್ತದ, ಬಸವರಾಜ ಬಾಕರ್ಿ, ಬಸವರಾಜ, ಶಿವಪ್ಪ, ಸಂತೋಷ ಸೇರಿದಂತೆ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.