ಮಂಗಳೂರು, ನ. 14 : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ದು, ಅಧಿಕಾರವನ್ನು ಪಡೆದಿದೆ.
ಒಟ್ಟು 60 ವಾಡ್ರ್ಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14, ಎಸ್ ಡಿಪಿಐ 02 ಸ್ಥಾನಗಳನ್ನು ಪಡೆದುಕೊಂಡಿವೆ. ಜೆ.ಡಿ.ಎಸ್.ಹಾಗೂ ಸಿ.ಪಿ.ಐ.ಎಂ ಯಾವುದೇ ಸ್ಥಾನ ಪಡೆದಿಲ್ಲ. ಮಂಗಳೂರಿನ ರೋಸಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ ಇಂದು ನಡೆಯಿತು.
1984 ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ಬಳಿಕ ಬಿಜೆಪಿ ಇದು ಎರಡನೇ ಬಾರಿಗೆ ಅಧಿಕಾರವನ್ನು ಪಡೆಯುತ್ತಿರುವುದು. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ಬಾರಿ ಕಾಂಗ್ರೆಸ್ ನಿಂದ ಅಧಿಕಾರವನ್ನು ಗೆದ್ದು ಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ವಿಜೇತರ ವಿವರ :
ಸುರತ್ಕಲ್ (ಪಶ್ಚಿಮ) ಶೋಭಾ ರಾಜೇಶ್(ಬಿಜೆಪಿ), ಸುರತ್ಕಲ್ (ಪೂರ್ವ) ಎ.ಶ್ವೇತಾ (ಬಿಜೆಪಿ), ಕಾಟಿಪಳ್ಳ(ಪೂರ್ವ) ಲೋಕೇಶ್ ಬೊಳ್ಳಾಜೆ(ಬಿಜೆಪಿ), ಕಾಟಿಪಳ್ಳ(ಕೃಷ್ಣಾಪುರ) ಲಕ್ಷ್ಮಿ ಶೇಖರ್ (ಬಿಜೆಪಿ), ಕಾಟಿಪಳ್ಳ(ಉತ್ತರ) ಶಂಶಾದ್ ಅಬೂಬಕ್ಕರ್ (ಎಸ್ಡಿಪಿಐ), ಇಡ್ಯಾ(ಪೂರ್ವ) ಸರಿತಾ ಶಶಿಧರ್ (ಬಿಜೆಪಿ), ಇಡ್ಯಾ (ಪಶ್ಚಿಮ) ನಯನಾ ಆರ್ ಕೋಟ್ಯಾನ್ (ಬಿಜೆಪಿ), ಹೊಸಬೆಟ್ಟು-ವರೂಣ್ ಚೌಟ(ಬಿಜೆಪಿ), ಕುಳಾಯಿ-ಜಾನಕಿ ಯಾನೆ ವೇದಾವತಿ (ಬಿಜೆಪಿ), ಕುಂಜತ್ತಬೈಲ್ (ದಕ್ಷಿಣ) ಸುಮಂಗಲ(ಬಿಜೆಪಿ), ಬೈಕಂಪಾಡಿ-ಸುಮಿತ್ರಾ (ಬಿಜೆಪಿ), ಬಂಗ್ರ ಕೂಳೂರು- ಕಿರಣ್ ಕುಮಾರ್ (ಬಿಜೆಪಿ), ಪಣಂಬೂರು ಸುನಿತಾ(ಬಿಜೆಪಿ), ದೇರೇಬೈಲ್(ಉತ್ತರ) ಮನೋಜ್ ಕುಮಾರ್ (ಬಿಜೆಪಿ).
ಪಂಜಿಮೊಗರು- ಅನಿಲ್ ಕುಮಾರ್ (ಕಾಂಗ್ರೆಸ್), ಕಾವೂರು ಎ.ಗಾಯತ್ರಿ (ಬಿಜೆಪಿ), ಕುಂಜತ್ತಬೈಲ್(ಉತ್ತರ) ಶರತ್ ಕುಮಾರ್ (ಬಿಜೆಪಿ), ಪಚ್ಚನಾಡಿ- ಸಂಗೀತಾ ಆರ್.ನಾಯಕ್(ಬಿಜೆಪಿ), ಮರಕಡ-ಲೋಹಿತ್ ಅಮಿನ್ (ಬಿಜೆಪಿ), ತಿರುವೈಲ್-ಹೇಮಲತಾ ರಘು ಸಾಲಿಯಾನ್ (ಬಿಜೆಪಿ), ದೇರೆಬೈಲು(ಪಶ್ಚಿಮ) ಜಯಲಕ್ಷ್ಮಿ ವಿ.ಶೆಟ್ಟಿ(ಬಿಜೆಪಿ), ಪದವು(ಪಶ್ಚಿಮ) ವನಿತಾ ಪ್ರಸಾದ್ (ಬಿಜೆಪಿ), ದೇರೆಬೈಲು(ನೈರುತ್ಯ) ಗಣೇಶ್ (ಬಿಜೆಪಿ), ಕದ್ರಿ ಪದವು- ಜಯಾನಂದ ಅಂಚನ್(ಬಿಜೆಪಿ), ಬೋಳೂರು ಜಗದೀಶ ಶೆಟ್ಟಿ(ಬಿಜೆಪಿ), ದೇರೆಬೈಲು(ಪೂರ್ವ) ರಂಜನಿ ಕೋಟ್ಯಾನ್(ಬಿಜೆಪಿ), ಮಣ್ಣಗುಡ್ಡ- ಸಂಧ್ಯಾ(ಬಿಜೆಪಿ), ಕಂಬ್ಳ-ಲೀಲಾವತಿ (ಬಿಜೆಪಿ), ದೇರೆಬೈಲು(ದಕ್ಷಿಣ) ಎಂ.ಶಶಿಧರ ಹೆಗ್ಡೆ(ಕಾಂಗ್ರೆಸ್), ಕೊಡಿಯಾಲ್ ಬೈಲ್- ಸುಧೀರ್ ಶೆಟ್ಟಿ(ಬಿಜೆಪಿ), ಬಜಾರ್-ಅಶ್ರಾಫ್(ಕಾಂಗ್ರೆಸ್), ಬೋಳಾರ್- ಭಾನುಮತಿ(ಬಿಜೆಪಿ), ಜೆಪ್ಪು- ಎಸ್.ಭರತ್ ಕುಮಾರ್ (ಬಿಜೆಪಿ), ಜಪ್ಪಿನಮೊಗರು- ವೀಣಾ ಮಂಗಳ(ಬಿಜೆಪಿ).
ಮಂಗಳಾದೇವಿ- ಪ್ರೇಮಾನಂದ ಶೆಟ್ಟಿ(ಬಿಜೆಪಿ), ಹ್ಯೂಗೆ ಬಜಾರ್- ರೇವತಿ(ಬಿಜೆಪಿ), ಬಂಗ್ರೆ- ಮುನೀಬ್ ಬಂಗ್ರೆ(ಎಸ್ಡಿಪಿಐ), ಡೊಂಗರಕೇರಿ- ಎಂ.ಜಯಶ್ರೀ ಕುಡ್ವ(ಬಿಜೆಪಿ), ಕುದ್ರೋಳಿ- ಸಂಶುದ್ದೀನ್(ಕಾಂಗ್ರೆಸ್), ಬಂದರ್- ಝೀನತ್ ಸಂಶುದ್ದೀನ್(ಕಾಂಗ್ರೆಸ್), ಪೋರ್ಟ- ಅಬ್ದುಲ್ ಲತೀಫ್(ಕಾಂಗ್ರೆಸ್), ಕಂಟೋನ್ಮೆಂಟ್- ದಿವಾಕರ(ಬಿಜೆಪಿ) .