ಬಿಜೆಪಿಯಿಂದ ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಸ್ಮರಣೆ

ಬಿಜೆಪಿಯಿಂದ ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಸ್ಮರಣೆ BJP remembers Dr. Shyama Prasad Mukherjee, founder of Bharatiya Jana Sangh

ಬೆಳಗಾವಿ 23 : ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಇಂದು  ಬೆಳಗಾವಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ  ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ  ಪುಷ್ಪ ನಮನ ಸಲ್ಲಿಸಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿ ಒಂದೇ ದೇಶದಲ್ಲಿ ’ಎರಡು ಪ್ರಧಾನ, ಎರಡು ಸಂವಿಧಾನ ಮತ್ತು ಎರಡು ಧ್ವಜ’ ಇರಲು ಸಾಧ್ಯವಿಲ್ಲ ಎಂದು ಕಾಶ್ಮೀರದ ಸಂಪೂರ್ಣ ವೀಲೀನಕ್ಕಾಗಿ ಅವರು ನಡೆಸಿದ ಹೋರಾಟ ಮತ್ತು ಬಲಿದಾನ ಇತಿಹಾಸದಲ್ಲಿ ಸದಾ ಅಮರ.

ಅವರ ರಾಷ್ಟ್ರೀಯತಾ ವಾದದ ಆದರ್ಶಗಳು ಹಾಗೂ ದೇಶಪ್ರೇಮದ ತತ್ತ್ವಗಳು ನಮಗೆಲ್ಲರಿಗೂ ಸದಾ ದಾರೀದೀಪವಾಗಿವೆ ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ ಕಾಶ್ಮೀರಕ್ಕೆ 370ನೇ ವಿದಿಯ ಮೂಲಕ ನೀಡಿದ್ದ ಪ್ರತ್ಯೇಕ ಸ್ಥಾನಮಾನವನ್ನ ರದ್ದು ಗೊಳಿಸಲು ಹೋರಾಡಿ ನಿಗೂಢವಾಗಿ ಶರೀರ ತ್ಯಜಿಸಿದ ಮಹಾನ ಚೇತನ ನಮ್ಮನ್ನು ಅಗಲಿ ಇಂದಿಗೆ 73 ವರ್ಷಗಳು ಗತಿಸಿವೆ ಆದರೆ ಅವರ ಮಹಾನ್ ಕಾರ್ಯ ಹಾಗೂ ಸಮಾಜದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆ ಇಂದಿಗೂ ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ಸ್ಮರಿಸಿದರು. 

ಈ ಸಂದರ್ಭದಲ್ಲಿಮಾಜಿ ಶಾಸಕರಾದ ಸಂಜಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈರಣ್ಣ ಅಂಗಡಿ, ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ್ ಚೌಗಲೆ, ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶನೂರ, ಪ್ರಕೋಷ್ಠಗಳ ಸಂಯೋಜಕ ಮಹೇಶ ಮೋಹಿತೆ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ ಕೋಲಕಾರ ಮುಖಂಡರಾದ ಮಂಜುನಾಥ ಪಮ್ಮಾರ, ಚೇತನ ಅಂಗಡಿ, ಸಾಮಾಜಿಕ ಜಾಲತಾಣ ಸಹ ಸಂಚಾಲಕ ಮನೋಜ ಪಾಟೀಲ, ವೀರಭದ್ರ ಪೂಜಾರಿ, ಶ್ವೇತಾ ಜಗದಾಳೆ, ಪ್ರವೀಣ ಮಾಳೇದವರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.