ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳಕ್ಕೆ ಬಿಜೆಪಿ ವಿರೋಧ : ತಾಹೇರ್ ಹುಸೈನ್

ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳಕ್ಕೆ ಬಿಜೆಪಿ ವಿರೋಧ : ತಾಹೇರ್ ಹುಸೈನ್ BJP opposes increase in reservation for minorities in housing schemes: Taher Hussain

ಬೆಂಗಳೂರು 22: ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿರುವುದು ಕೇಂದ್ರ ಸರ್ಕಾರದ ಆದೇಶವಾಗಿದ್ದು ಇದನ್ನು ರಾಜ್ಯ ಬಿಜೆಪಿ ವಿರೋಧಿಮಾಡುವುದು ದ್ವೇಷ ರಾಜಕೀಯವಾಗಿದೆ ಇದು ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷರು ಅಡ್ವೋಕೇಟ್ ತಾಹೇರ್ ಹುಸೈನ್ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯವರು ಸದಾಕಾಲ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದರಲ್ಲಿ ನಿಸ್ಸಿಮರು.  

ಅಲ್ಪಸಂಖ್ಯಾತರಿಗೆ ಮನೆ ನೀಡುವಾಗ ಮೀಸಲಾತಿ ನೀಡಲು ಕೇಂದ್ರ ಸರ್ಕಾರವು ಕಾನೂನು ರೂಪಿಸಿದೆ. ಆದರೆ ಈ ವೇಳೆ ರಾಜ್ಯ ಸರ್ಕಾರ ತುಷ್ಟಿಕರಣಕ್ಕಾಗಿ ಮುಸ್ಲಿಂ ಓಲೈಕೆಯಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿ ಜನರ ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.ಬಿಜೆಪಿ ಸದಾಕಾಲ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಅವರಿಗೆ ಮಾತನಾಡಲು ಬೇರೆ ವಿಚಾರಗಳಿಲ್ಲ. ಅದಕ್ಕಾಗಿ ಪ್ರತಿ ವಿಚಾರದಲ್ಲೂ ಜನರ ದಿಕ್ಕು ತಪ್ಪಿಸಲು ಹುಚ್ಚಾಟವಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.ಇತ್ತ ಮಾಜಿ ಮುಖ್ಯ ಮಂತ್ರಿ ಬಿ ಎಸ್ ಎಡಿಯೂರ​‍್ಪ ನಾವು ಅಲ್ಪಸಂಖ್ಯಾತ ವಿರೋಧಿಗಳು ಅಲ್ಲ ಅಂತ ಹೇಳುತ್ತಲೆ ಅಲ್ಪಸಂಖ್ಯಾತರಿಗೆ ಮಿತಿ ಮೀರಿ ನೇರು ಕೊಡುವುದು ಅಕ್ಷಮ್ಯಾ ಅಪರಾಧ ಎಂದು ಹೇಳುವ ಮೂಲಕ ಬಿಜೆಪಿ ಒಳಗಿನ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಹಿರಂಗ ಪಡಿಸಿದ್ದಾರೆ, ಇವರು ಬಿಜೆಪಿ ಅವಧಿಯಲ್ಲಿ ಇದದ್ದನು ಕಸಿದು ಕೊಂಡಿದ್ದು ಬಹುಷಃ ಅಲ್ಪಸಂಖ್ಯಾತ ಪರ ಕ್ರಮವೆ?ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರಿಗೆ ಅವರ ಹಕ್ಕು ಕೊಡುವಾಗ ಬಿಜೆಪಿಗೆ ಹೆದರಿ ನಿರ್ಧಾರ ಗಳು ಮಾಡಬಾರದು ಎಂದು ಅವರು ಹೇಳಿದರು.

ರಾಜ್ಯ ಕಾಂಗ್ರೆಸ್ ಸರಕಾರವು 2 ಎ ಮೀಸಲಾತಿ ಹಾಗೂ ಗೋ ಹತ್ಯೆ ನಿಷೇಧ ಕಾನೂನು ಶೀಘ್ರವೇ ವಾಪಸ್ ಪಡೆಯಲಿ ಶೋಷಿತ ಸಮುದಾಯಗಳಿಗೆ ಕೊಟ್ಟ ಭರವಸೆಯನ್ನು ಈಡೇರಿಸಿ ಎಂದು ವೆಲ್ಫೇರ್ ಪಾರ್ಟಿ ಅಗ್ರಹಿಸಿದೆ.