ಎಕರೆಗೆ 5 ಲಕ್ಷ ರೂ. ಕೊಡಿ-ಸರಕಾರಕ್ಕೆ ಬಿಜೆಪಿ ನಾಯಕರ ಆಗ್ರಹ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ
BJP leaders demand Rs 5 lakh per acre from government, visit crop damage area
ಕೊಪ್ಪಳ 17: ಜಿಲ್ಲೆಯ ವಿವಿಧೆಡೆ ಮಳೆಗೆ ಹಾಳಾಗಿರುವ ತೋಟಗಾರಿಕೆ ಹಾಗೂ ಕೃಷಿ ಬೆಳೆ ಬೆಳೆದ ರೈತರಿಗೆ ಸರಕಾರ ಕೂಡಲೇ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಜಿಲ್ಲಾ ಬಿಜೆಪಿ ನಾಯಕರು ಒತ್ತಾಯಿಸಿದರು. ತಾಲೂಕಿನ ಹೊಸಹಳ್ಳಿ, ಮುದ್ದಾಬಳ್ಳಿ, ಹ್ಯಾಟಿ ಗ್ರಾಮದ ರೈತರ ಹೊಲಗಳಿಗೆ ಭಾನುವಾರ ಬೆಳಂ-ಬೆಳಗ್ಗೆ ಅನ್ನದಾತರೊಂದಿಗೆ ಭೇಟಿ ನೀಡಿ, ಪರೀಶೀಲಿಸಿದರು. ಏಕಾಏಕಿ ಸುರಿದ ಮಳೆಗೆ ಬೆಳೆ ಹಾಳಾಗಿರುವುದನ್ನು ರೈತರು ಬಿಜೆಪಿ ನಾಯಕರಿಗೆ ತೊರಿಸಿದರು. ಬಾಳೆ ಬೆಳೆ, ಕಬ್ಬು, ಎಲೆ ನೂರಾರು ಎಕರೆ ಪ್ರದೇಶದಲ್ಲಿ ಹಾಳಾಗಿರುವುದನ್ನು ನೋಡಿ ಬಿಜೆಪಿ ನಾಯಕರು ಮಮ್ಮಲ ಮರಗಿದರು.
ಈ ವೇಳೆ ಮಾತನಾಡಿದ ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳೆಲ್ಲ ಹಾಳಾಗಿರುವುದು ಸಂಕಟ ತಂದಿದೆ. ಎಕರೆಗೆ ಲಕ್ಷಾಂತರ ರೂ. ಖರ್ಚು ಮಾಡಿ, ಇನ್ನೇನು ಬೆಳೆ ಕೈಗೆ ಬರುತ್ತದೆ ಎನ್ನುವಷ್ಟರಲ್ಲಿ ಅಕಾಲಿಕ ಮಳೆಗೆ ಬೆಳೆ ಹಾಳಾಗಿದೆ. ಸರಕಾರ, ಹಾಳಾದ ಬೆಳೆಗೆ ಎಕರೆಗೆ 22,500 ರೂ. ಕೊಡಲು ಮುಂದಾಗಿದೆ. ಆದರೆ, ಇದು, ಸರಿಯಲ್ಲ. ಎಕರೆಗೆ ಕನಿಷ್ಠ 5 ಲಕ್ಷ ರೂ. ಪರಿಹಾರ ಕೊಡಬೇಕು. ಅಲ್ಲದೆ, ಬಹಳಷ್ಟು ಹಲವು ರೈತರು ವರ್ಷಕ್ಕೆ 1.5 ಲಕ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಹೊಲ ಪಡೆದು ಉಳುಮೆ ಮಾಡಿದ್ದಾರೆ. ಇತ್ತ ಬೆಳೆ ಬೆಳೆ ಬೆಳೆಯಲು 2 ಲಕ್ಷ ರೂ.ವರೆಗೆ ಖರ್ಚು ಮಾಡಿದ್ದಾರೆ. ಹೀಗಾಗಿ ಸರಕಾರ ಕೊಡುವ 22500 ರೂ. ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಕೂಡಲೇ ಪರಿಹಾರವನ್ನು 5 ಲಕ್ಷ ರೂ. ಗೆ ಏರಿಸಿ ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಅಕಾಲಿಕ ಮಳೆಗೆ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರ ಕಷ್ಟವನ್ನು ನೋಡಲಾಗುತ್ತಿಲ್ಲ. ನಮಗೆಲ್ಲ ಅನ್ನ ಕೊಡುವ ರೈತನಿಗೆ ಸಂಕಷ್ಟ ಎದುರಾಗಿದೆ. ಸರಕಾರ, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಕೂಡಲೇ ಹೆಚ್ಚಿನ ಮಟ್ಟದಲ್ಲಿ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.ಗ್ರಾಮೀಣ ಹಾಗೂ ನಗರ ಮಂಡಲದ ಬಿಜೆಪಿ ಅಧ್ಯಕ್ಷರಾದ ಶ್ರೀ ವೀರೇಶ ಸಜ್ಜನ್ ಹಾಗೂ ಶ್ರೀ ಅಮರೇಶ ಮುರುಳಿ, ಮುಖಂಡರಾದ ಶ್ರೀ ಅಪ್ಪಣ್ಣ ಪದಕಿ, ಶ್ರೀ ಮಹಾಂತೇಶ್ ಪಾಟೀಲ್ ಮೈನಳ್ಳಿ, ಶ್ರೀ ಚಂದ್ರಶೇಖರ ಕವಲೂರ್, ಹಲವರ್ತಿ ವೆಂಕಟೇಶ್, ಗಣೇಶ ಹೊರತಟ್ನಾಳ್, ಪ್ರದೀಪ್ ಹಿಟ್ನಾಳ್, ರಮೇಶ ಕವಲೂರ್, ಯೋಗಾನಂದ ಲೇಬಗೇರಿ, ಚನ್ನಬಸವ ಗಾಳಿ, ಗವಿ ಹಲವರ್ತಿ , ಮಾರುತಿ ಹಡಪದ, ಗುರ್ಪ, ದೇವರಾಜ ಹಾಲಸಮುದ್ರ, ಸಿದ್ದನಗೌಡ ಪಾಟೀಲ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು., ನೂರಾರು ರೈತರು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.
ಮೂರು ತಿಂಗಳ ಹಿಂದೆ ಬಸಾಪೂರ ಬಳಿ ಕಾಲುವೆ ಹೊಡೆದು ಅಪಾರ ಪ್ರಮಾಣದಲ್ಲಿ ಭತ್ತ ಬೆಳೆ ಹಾಳಾದರೂ ಈವರೆಗೆ ರೈತರಿಗೆ ಪರಿಹಾರ ಕೊಟ್ಟಿಲ್ಲ. ಅದರಂತೆ ಈಗಲೂ ಮಳೆಗೆ ಹಾನಿಗೊಳಗಾದ ರೈತರ ಪರಿಸ್ಥಿತಿಯಾಗಬಾರದು. ಶಾಸಕ ಹಿಟ್ನಾಳ್ ಕೇವಲ ಕಾಟಾಚಾರಕ್ಕೆ ಬೆಳೆ ಹಾನಿ ವೀಕ್ಷಣೆ ಮಾಡುವುದಲ್ಲ. ಕೂಡಲೇ ಸರಕಾರದಿಂದ ಪರಿಹಾರ ಕೊಡಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೇ ರೈತರು ದಂಗೆ ಏಳಲಿದ್ದಾರೆ. ಅನ್ನದಾತರೊಂದಿಗೆ ನಾವು ಕೂಡ ಜತೆಯಾಗಿ ಊಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ.**ಡಾ. ಬಸವರಾಜ್ ಎಸ್ ಕ್ಯಾವಟರಿ್ನಕಟಪೂರ್ವ ಬಿಜೆಪಿ ಅಭ್ಯರ್ಥಿಗಳು ಕೊಪ್ಪಳ ಲೋಕಸಭಾ ಕ್ಷೇತ್ರ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ 