ಖೊಟ್ಟಿ ಮತದಾನದಿಂದ ಕೇಂದ್ರದಲ್ಲಿ ಭಾಜಪ ಪಕ್ಷ ಆಡಳಿತ ನಡೆಸುತ್ತಿದೆ: ನಂಜಯ್ಯಮಠ ಆರೋಪ
BJP is ruling at the Centre by rigging votes: Nanjayammath alleges
ಲೋಕದರ್ಶನ ವರದಿ
ಖೊಟ್ಟಿ ಮತದಾನದಿಂದ ಕೇಂದ್ರದಲ್ಲಿ ಭಾಜಪ ಪಕ್ಷ ಆಡಳಿತ ನಡೆಸುತ್ತಿದೆ: ನಂಜಯ್ಯಮಠ ಆರೋಪ
ಮಹಾಲಿಂಗಪುರ 23: ಕೊಟ್ಟಿ ಮತದಾನ ಮೂಲಕ ಕೇಂದ್ರ ಭಾಜಪ ಸರ್ಕಾರ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಈ ಆರೋಪಗಳಿಗೆಲ್ಲ ಕಾಂಗ್ರೆಸ್ ಪಕ್ಷದಲ್ಲಿ ಅಗತ್ಯ ಪುರಾವೆಗಳಿವೆ ಸೂಕ್ತ ಸಮಯದಲ್ಲಿ ಸಾಬೀತು ಪಡಿಸಲಾಗುವುದು ಎಂದು ಕಾಂಗ್ರೆಸ್ ನಾಯಕ, ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ನೇರವಾಗಿ ಕೇಂದ್ರ ಭಾಜಪ ಪಕ್ಷದ ವಿರುದ್ಧ ಆರೋಪ ಮಾಡಿದರು.
ಗುರುವಾರ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ನಿವಾಸದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ತೇರದಾಳ ವಿಧಾನಸಭಾ ಮತ ಕ್ಷೇತ್ರದ ಮುಖಂಡರ ಸಹಯೋಗದಲ್ಲಿ ಮತಗಳ್ಳತನ ನಿಲ್ಲಿಸಿ, ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹಣೆ ನಡೆಯಿತು. ಈ ಸಮಯ ಬ್ಯಾನರ್‌ಗೆ ನಂಜಯ್ಯಮಠ ಸಾಂಕೇತಿಕವಾಗಿ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೊಂದು ಗಂಭೀರ ಚಿಂತನೆ. ದೇಶದ ಪ್ರಜಾ ಪ್ರಭುತ್ವದ ಶ್ರೇಷ್ಠತೆಯನ್ನು ಹಳ್ಳ ಹಿಡಿಸುವ ಬಿಜೆಪಿ ಪಕ್ಷದ ಹುನ್ನಾರವಾಗಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ವಿರೋಧ ಪಕ್ಷದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಜೀ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೇಶಾದ್ಯಂತ ಮತಗಳವು ಪ್ರತಿಭಟನಾ ಸಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಬಾಗಲಕೋಟ್ ಜಿಲ್ಲೆಯ ಪ್ರತಿ ಮತ ಕ್ಷೇತ್ರದಿಂದಲೂ 15 ರಿಂದ 20 ಸಾವಿರ ಪ್ರತಿಭಟನಾ ಸಹಿ ಸಂಗ್ರಹ ನಡೆಯಲಿದೆ ಎಂದರು.
ಎಸ್ ಆಯ್ ಟಿ ಆಳಂದ ಕ್ಷೇತ್ರದಲ್ಲಿ 8 ಸಾವಿರ ಕೊಟ್ಟಿ ಮತಗಳ ಚಲಾವಣೆಯ ದಾಖಲಾತಿಗಳನ್ನು ಸುಟ್ಟು ಸಾಕ್ಷ ನಾಶ ಮಾಡಿರುವುದಕ್ಕೆ ಕೊಟ್ಟಿ ಮತಗಳ ಪೃಕ್ರಿಯೆ ನಡೆದಿದೆ ಎನ್ನುವುದಕ್ಕೆ ಪುಷ್ಟಿ ಎಂದರು.ಇದಕ್ಕೆ ಪೂರಕ ಎಂಬಂತೆ ಬಿಹಾರ ಮತ್ತು ಇನ್ನಿತರ ಕಡೆಗಳಲ್ಲಿಯೂ ಲಕ್ಷಾಂತರ ಮತಗಳವು ನಡೆದಿರುವುದು ಬೆಳಕಿಗೆ ಬಂದಿದೆ.ಅಷ್ಟೆ ಅಲ್ಲದೆ ತೇರದಾಳ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು.
ಮತ್ತೋರ್ವ ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ಮಾತನಾಡಿ, ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ದೇಶದ ಜನತೆ ಎಚ್ಚೆತ್ತು ಈ ವಿಷಯಕ್ಕೆ ವಿರುದ್ಧವಾಗಿ ಪ್ರತಿಭಟನೆ ಕೈಗೊಳ್ಳದೆ ಹೋದರೆ ಮುಂದೊಂದು ದಿನ ಪ್ರಜಾ ಪ್ರಭುತ್ವ ಕೊನೆಗೊಂಡು ನಾವು ನೀವೆಲ್ಲ ಮತ್ತೊಮ್ಮೆ ಗುಲಾಮ ಗಿರಿಗೆ ಶರಣಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ಯಲ್ಲನ್ನಗೌಡ ಪಾಟೀಲ್, ನಾಗರಾಜ ಮನ್ನಿಕೇರಿ, ಲಕ್ಷ್ಮಣ ದೇಸಾರಟ್ಟಿ, ಜಯಪ್ರಕಾಶ್ ಮುತ್ತೂರ, ಮಲ್ಲಪ್ಪ ಸಿಂಗಾಡಿ, ಶ್ರೀಪಾದ ಗುಂಡಾ, ಮುಸ್ತಾಕ್ ಚಿಕ್ಕೋಡಿ, ಬಸವರಾಜ ರಾಯರ, ನಜೀರ್ ಅತ್ತಾರ, ಅಶೋಕ ಅಂಗಡಿ, ಪ್ರಕಾಶ ಮಮದಾಪೂರ, ದಾದಾ ಕರೋಶಿ, ಸುರೇಶ್ ಬಿದ್ರಿ, ಆನಂದ ಬಂಡಿ, ಅಶೋಕ ಜ. ಅಂಗಡಿ, ನಿಯಾಝ್ ಪಟೇಲ್, ಮಹಾಲಿಂಗಪ್ಪ ಮಾಳಿ, ಮಲ್ಲು ಪಾಶ್ಚಾಪೂರ, ಅಲ್ತಾಫ್ ಸಿಂದಗಿ ಮತ್ತು ಮಹಿಳಾ ಘಟಕದ ವಿದ್ಯಾ ಬಿಳ್ಳೂರ, ಸಂಗೀತಾ ಅಳ್ಳಿಮಟ್ಟಿ ಮತ್ತು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 