ಖರ್ಗೆ ಮೇಲೆ ಕಾನೂನು ಕ್ರಮ ಭಾಜಪ ಆಗ್ರಹ

ಖರ್ಗೆ ಮೇಲೆ ಕಾನೂನು ಕ್ರಮ ಭಾಜಪ ಆಗ್ರಹ BJP demands legal action against Kharge

ಶಿಗ್ಗಾವಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚೋದನಾಕಾರಿ ಭಾಷಣ ಖಂಡಿಸಿ, ಅವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ತಾಲೂಕು ಯುವ ಬಿಜೆಪಿ  ಮೋರ್ಚಾ ಪದಾಧಿಕಾರಿಗಳು ಸ್ಥಳೀಯ ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿದರು.  ಯುವ ಘಟಕದ ಅಧ್ಯಕ್ಷ ಅನೀಲ ಸಾತಣ್ಣವರ ನೇತೃತ್ವದಲ್ಲಿ ಪದಾಧಿಕಾರಿಗಳು ಖರ್ಗೆ ಅವರು ಅತ್ಯಂತ ಜವಾಬ್ದಾರಿ ಹೊಂದಿದ್ದು, ಅಲ್ಪಸಂಖ್ಯಾತರ ಓಲೈಕೆಯನ್ನು ಸದಾ ಮಾಡುತಿರುತ್ತಾರೆ.   ಇಂತಹ ವ್ಯಕ್ತಿಯ ಪ್ರಚೋದನಾಕಾರಿ ಭಾಷಣ ದೇಶದಲ್ಲಿರುವ ಲಕ್ಷಾಂತರ ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರ ಜೀವಕ್ಕೆ ಅಪಾಯವೊಡ್ಡಿದೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳದಿದ್ದರೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು   ಉಗ್ರ ಹೋರಾಟ ಮಾಡುತ್ತಾರೆ  ಎಂದು ಎಚ್ಚರಿಕೆ ನೀಡಿದರು.   ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ಯುವ ಘಟಕದ ಮುಖಂಡ  ವಿವೇಕ ರಾಮಗೇರಿ, ಸಚಿನ ಮಡಿವಾಳರ, ಸತೀಶ ಬಾಣದ,  ರೇಣುಕು ಗೌಡ ಪಾಟೀಲ, ಸೇರಿದಂತೆ ಇತರರು   ಇದ್ದರು.