ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಂದಿನಿ ಅವರಿಗೆ ಜಯ
BJP-backed candidate Nandini wins by-election
ಅಥಣಿ, 20 ; ಉಗಾರ ಪುರಸಭೆಯ 15 ನೇ ವಾರ್ಡಿಗೆ ನಡೆದ ಜಿದ್ದಾ ಜಿದ್ದಿನ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ನಂದಿನಿ ಸುಜಯ ಪರಾಕಟೆ 37 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮಾಜಿ ಸಚಿವ ಶ್ರೀಮಂತ ಪಾಟೀಲರ ಕೈ ಬಲ ಪಡಿಸಿದರು.
ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಂದಿನಿ ಸುಜಯ ಪರಾಕಟೆ ಇವರು ಚಲಾವಣೆಗೊಂಡ 574 ಮತಗಳ ಪೈಕಿ 306 ಮತಗಳನ್ನು ಪಡೆಯುವ ಮೂಲಕ 37 ಮತಗಳ ಅಂತರದಿಂದ ವಿರೋಧಿ ಅಭ್ಯರ್ಥಿ ವಿನಾಯಕ ಕಾಂಬಳೆ ಇವರನ್ನು ಪರಾಭವಗೊಳಿಸಿದರು.
ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಂದಿನಿ ಸುಜಯ ಫರಾಕಟೆ ಇವರು ಬಿಜೆಪಿ ಯುವ ಧುರೀಣ ಶ್ರೀನಿವಾಸ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುಲಾಲ ಎರಚಿ, ಪಟಾಕಿ ಸಿಡಿಸಿ ಮಾಜಿ ಸಚಿವ ಶ್ರೀಮಂತ ಪಾಟೀಲ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.
ವಿಜಯೋತ್ಸವದ ನಂತರ ಮಾತನಾಡಿದ ನಂದಿನಿ ಫರಾಕಟೆ, ನನ್ನ ಗೆಲುವಿಗೆ ಬಿಜೆಪಿ ಕಾರ್ಯಕರ್ತರ, ಮಹಿಳಾ ಮಂಡಳ ಸದಸ್ಯೆಯರ, ಮಾಜಿ ಸಚಿವ ಶ್ರೀಮಂತ ಪಾಟೀಲ ಮತ್ತು ಶ್ರೀನಿವಾಸ ಪಾಟೀಲರ ಸಹಕಾರದಿಂದ ನಾನು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದ ಅವರು ಅನೇಕ ಅವಧಿಯಿಂದ ನಾನು ಹಾಗೂ ನನ್ನ ದಿವಂಗತ ಪತಿ ಇದೇ ವಾರ್ಡನಿಂದ ಗೆಲುವು ಸಾಧಿಸಿ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿದ್ದರ ಪರಿಣಾಮವೇ ಮತದಾರರು ನನ್ನ ಕೈ ಹಿಡಿದಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಯುವ ಧುರೀಣ ಶ್ರೀನಿವಾಸ ಪಾಟೀಲ, ಉಗಾರ ಪುರಸಭೆಯ 15 ನೇ ವಾರ್ಡಿನ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಂದಿನಿ ಫರಾಕಟೆಯವರ ಗೆಲುವು ನಮಗೆ ಬಲ ತಂದಿದೆ ಎಂದರು. ಮುಂದಿನ ದಿನಗಳಲ್ಲಿ ನಂದಿನಿ ಫರಾಕಟೆಯವರು ಗೆಲುವು ಸಾಧಿಸಿದ 15 ನೇ ವಾರ್ಡನಲ್ಲಿ ವಿಶೇಷವಾಗಿ ಜನಪರ ಕಾರ್ಯಗಳನ್ನು ಅನುಷ್ಢಾನಗೊಳಿಸಿ ಮಾದರಿ ವಾರ್ಡನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ವಿಜಯೋತ್ಸವದಲ್ಲಿ ರಾಕೇಶ ಪಾಟೀಲ, ಸದಾಶಿವ ಸಿಂಗೆ, ವಿಕ್ರಮ ಧನಗರ, ರಾಜು ಕೊರಬು, ಸಚೀನ ತುವಾರ, ವಿನಾಯಕ ಕಾಮಿರೆ, ದಿಗಂಬರ ಗವಂಡಿ, ಅಶೋಕ ಕಾಂಬಳೆ, ಬಾನು ಉಸ್ಮಾನ, ಪ್ರಸಾದ ಜಗತಾಪ, ಸಚೀನ ಚವ್ಹಾಣ, ಸಾಗರ ಚವ್ಹಾಣ, ಯೋಗೇಶ ಕಾಮಿರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 