ಬಿಜೆಪಿ ಸಂಘಟನಾ ಸಭೆ: ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷ ಸಂಘಟನೆಗೆ ಒತ್ತು

ಬಿಜೆಪಿ ಸಂಘಟನಾ ಸಭೆ: ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷ ಸಂಘಟನೆಗೆ ಒತ್ತು  BJP Organizational Meeting: Focus on strengthening the party by taking workers into confidence

ಆಲಮೇಲ 30: ಪಟ್ಟಣದ ಅಳ್ಳೋಳ್ಳಿ ಮಠದಲ್ಲಿ ಶನಿವಾರ ಬಿಜೆಪಿ ಸಂಘಟನಾ ಸಭೆ ನಡೆಯಿತು. ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ನಂಬಳ ಅಧ್ಯಕ್ಷತೆ ವಹಿಸಿದ್ದರು. ಮೂಲ ಬಿಜೆಪಿ ಕಾರ್ಯಕರ್ತರ ಅಸಮಾಧಾನಗಳನ್ನು ಚರ್ಚಿಸಿ, ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು ಎಂದು ಅವರು ಹೇಳಿದರು. ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಪಕ್ಷನಿಷ್ಠೆ ಮತ್ತು ಶ್ರಮ ಮುಖ್ಯವಾಗಿದೆ ಎಂದರು. ಆಂತರಿಕ ಸಮಸ್ಯೆಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಎಸ್‌ಐಆರ್ ಮತ ಪರೀಶೀಲನೆ ಕುರಿತು ಬಿಜೆಪಿ ಮತ ಪರೀಶೀಲನಾ ಮುಖ್ಯಸ್ಥ ಗುರು ತಳವಾರ ಮಾತನಾಡಿ, ಸಿಂದಗಿ ಮತಕ್ಷೇತ್ರದಲ್ಲಿ 32,290 ಮತಗಳು ಡೀಲೀಟ್ ಆಗಿದ್ದು, ನಿಜವಾದ ಮತದಾರರ ಹೆಸರುಗಳನ್ನು ದಾಖಲೆಗಳೊಂದಿಗೆ ಮರು ಸೇರೆ​‍್ಡಗೊಳಿಸಲು ಕಾರ್ಯಕರ್ತರು ಕ್ರಮ ಕೈಗೊಳ್ಳಬೇಕು ಎಂದರು. ಅಲ್ಲದೆ, ಕ್ಷೇತ್ರಕ್ಕೆ ಸಂಬಂಧಿಸದ ಮತದಾರರನ್ನು ಗುರುತಿಸಿ ಮತಪಟ್ಟಿಯಿಂದ ತೆಗೆದುಹಾಕುವಂತೆ ತಿಳಿಸಿದರು. ಜಿಲ್ಲಾ ಮುಖಂಡರಾದ ಮಲ್ಲಿಕಾರ್ಜುನ ಜೋಗುರ, ಈರಣ್ಣ ರಾವೂರ, ಚಿದಾನಂದ ಚಲವಾದಿ, ಪ್ರಭುಗೌಡ ಪಾಟೀಲ, ಸಿದ್ದರಾಮ ಆನಗೊಂಡ, ಶ್ರೀಮಂತ ನಾಗುರ, ದೇವಪ್ಪ ಗುಣಾರಿ, ಬಾಬುಗೌಡ ಬಿರಾದಾರ ಹಾಗೂ ಗುರು ತಳವಾರ ಉಪಸ್ಥಿತರಿದ್ದರು.