ಬಿಜೆಪಿ ಗೆಲುವು ಕಷ್ಟಕರವಾಗಿದೆ: ಹೊರಟ್ಟಿ

ಲೋಕದರ್ಶನ ವರದಿ

ಕಾರವಾರ 17: ಕಳೆದ ಲೋಕಸಭಾ ಚುನಾವಣೆಯ ವೇಳೆ ದೆಹಲಿಗೆ ಆಯ್ಕೆಯಾಗಿ ಹೋಗಿದ್ದ ಬಿಜೆಪಿ ಸಂಸದರು ಕೆಲಸ ಮಾಡಿಲ್ಲ. ಹೀಗಾಗಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ರಾಜ್ಯದ ಮತದಾರರು ಬಿಜೆಪಿಯ ಆಟವನ್ನು ನಂಬುವುದಿಲ್ಲ. ಜೆಡಿಎಸ್ -ಕಾಂಗ್ರೆಸ್ ಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿ ಗೆಲುವು ಅಷ್ಟೊಂದು ಸುಲಭವಾಗಿಲ್ಲ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಕಾರವಾರದ  ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2014 ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ,2019 ರ ಚುನಾವಣೆಗೆ ಬಹಳಷ್ಟು ವ್ಯತ್ಯಾಸವಿದೆ. ಆಗ ಕಾಂಗ್ರೆಸ್ ಜೆಡಿಎಸ್  ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಬಾರಿ ಜೆಡಿಎಸ್-ಕಾಂಗ್ರೆಸ್ ಸೇರಿದಂತೆ, ವಿರೋಧ ಪಕ್ಷಗಳು ಮೈತ್ರಿ ಸಾಧಿಸಿ ಒಗ್ಗಟ್ಟಿನ ಬಲ ಪ್ರದಶರ್ಿಸಿವೆ. ಹೀಗಾಗಿ ಬಿಜೆಪಿ ಹಾಗೂ ಮೈತ್ರಿ ಅಭ್ಯಥರ್ಿಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆಯಲಿದೆ. ಜನರು ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಮೈತ್ರಿ ಅಭ್ಯಥರ್ಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಮತದಾರರನ್ನು ತಲುಪಲು ಬಿಜೆಪಿ ಪ್ರಗತಿ ಸಾಧಿಸದ ಕಾರಣ, ಮೈತ್ರಿ ಬಳಗ 20 ರಿಂದ 22 ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಗೆಲುವಿನ ಹೊಣೆಗಾರಿಕೆ ದೇಶಪಾಂಡೆ ಅವರದ್ದು :

ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಟಿಕೆಟ್ ಸಂಬಂಧ ಭಿನ್ನಾಭಿಪ್ರಾಯ ಇದ್ದರೂ, ಇದೀಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಮೇಲೆ ಬಹಳ ಜವಾಬ್ದಾರಿ ಇದೆ. ಅವರ ಮುನಿಸು ಶಮನವಾಗಿ ಸಮಾಧಾನಗೊಂಡಿದ್ದಾರೆ. ಅವರು ಮೈತ್ರಿ ಅಭ್ಯಥರ್ಿ ಆನಂದ ಅಸ್ನೋಟಿಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಅಭ್ಯಥರ್ಿ ಗೆದ್ದರೂ, ಸೋತರೂ ಅವರೇ ಹೊಣೆಗಾರರಾಗಲಿದ್ದಾರೆ. ರಾಜ್ಯದ ಎ.18 ರ ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ, ಮೈತ್ರಿ ಪಕ್ಷಗಳ ಎಲ್ಲ ನಾಯಕರು ಉತ್ತರ ಕನ್ನಡ ಹಾಗೂ ಉತ್ತರ ಕನರ್ಾಟಕದತ್ತ  ಪ್ರಚಾರಕ್ಕೆ ಆಗಮಿಸಲಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಕೆಲಸ ಮಾಡಿಲ್ಲ ಎಂಬ ಭಾವನೆ ಜನರಲ್ಲಿದೆ. ಜನರು ಮೈತ್ರಿ ಅಭ್ಯಥರ್ಿಗೆ ಮತ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ಬಿಜೆಪಿಯಲ್ಲಿ ಸಹ ಎಲ್ಲವೂ ಸರಿಯಿಲ್ಲ. ಆ ಪಕ್ಷೆದೊಳಗಿನ ಭಿನ್ನಾಭಿಪ್ರಾಯವೇ ಬಿಜೆಪಿಗೆ ಮುಳುವಾಗಲಿದೆ ಎಂದರು.

ವ್ಯಕ್ತಿಗತ ಟೀಕೆ ಸರಿಯಲ್ಲ : 

ಚುನಾವಣೆ ಸಮಯದಲ್ಲಿ  ಅಭ್ಯಥರ್ಿಯ ವೈಯಕ್ತಿಕ ವಿಷಯ ಇಟ್ಟುಕೊಂಡು ನಿಂದನೆ ಅಥವಾ ಆರೋಪ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಚುನಾವಣೆಗೆ ನಿಂತ  ವ್ಯಕ್ತಿಯ ವೈಯಕ್ತಿಕ ಟೀಕೆ ಮಾಡುವುದು,  ಹೆಸರು ಕೆಡಿಸುವುದು ಸರಿಯಲ್ಲ. ಈ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳು ಮುಂಚೂಣಿಯಲ್ಲಿವೆ. ಇವುಗಳನ್ನು ಅಸಹ್ಯಕರ ರೀತಿಯಲ್ಲಿ ದುರ್ಬಳಕೆ ಮಾಡುವುದರಿಂದ ಏನೂ ಪರಿಣಾಮವಾಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವಿಷಯಗಳ ಕುರಿತು ಪ್ರಾಮಾಣಿಕ ಚಚರ್ೆಯಾಗಬೇಕು. ಆದರೆ ಜಾತಿ ಹಾಗೂ ವೈಯಕ್ತಿಕ ಟೀಕೆ ಬಿಟ್ಟರೆ ಇಲ್ಲಿ ಇನ್ನೇನೂ ನಡೆಯುತ್ತಿಲ್ಲ. ದೇಶದಲ್ಲಿ ವಾಜಪೇಯಿ, ಇಂದಿರಾ ಗಾಂಧಿಯಂತೆ ಪ್ರಗತಿಪರ ವಿಚಾರಧಾರೆ ಇಟ್ಟುಕೊಂಡು ರಾಜಕೀಯಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ,ಜೆ.ಎಚ್.ಪಟೇಲ್ರಂತೆ ಮೌಲ್ಯಾಧಾರಿತ ರಾಜಕಾರಣ ಮಾಡುವವರೂ ಇಲ್ಲವಾಗಿದ್ದಾರೆ. ಒಟ್ಟಾರೆ ರಾಜಕೀಯ ಎಂಬುದು ಕುಲಗೆಟ್ಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅನಂತಕುಮಾರ ಹೆಗಡೆ ಆಪ್ತ ವಲಯದವರ ಮನೆ ಮೇಲೆ ಐಟಿ ದಾಳಿ ನಡೆಸಿ 81 ಲಕ್ಷ ರೂ. ವಶಕ್ಕೆ ಪಡೆದಿದೆ ಎನ್ನಲಾಗುತ್ತದೆ. ಕಾನೂನು ಪ್ರಕಾರ ಲೆಕ್ಕ ತೋರಿಸಿ ಬಿಡಿಸಿಕೊಂಡು ಹೋಗಲಿಕ್ಕೆ ಅವಕಾಶ ಇದೆ. ಉತ್ತರ ಕನ್ನಡದಲ್ಲಿ ನಡೆದ ಐಟಿ ದಾಳಿ ಕಣ್ಣೊರೆಸುವ ತಂತ್ರವಾಗಿದೆ. ಬಿಜೆಪಿ ಹಿತಾಸಕ್ತಿಯಂತೆ ಐಟಿ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪ್ರಕಾಶ ನಾಯ್ಕ, ಶಿವರಾಮ ಸಿದ್ಧರಕರ ಇದ್ದರು.