ಬಿಜೆಪಿ ನಡೆಸುವ ಅಕ್ರಮ ತಡೆಯದ ಚುನಾವಣಾ ಆಯೋಗ ನಿರ್ಜಿವವಾಗಿವೆ:ವಿ.ಎಸ್.ಉಗ್ರಪ್ಪ ಆರೋಪ
ಬೆಂಗಳೂರು,ನ 21: ಹಲವು ಕಡೆ ಬಿಜೆಪಿ ನಾಯಕರು ಚುನಾವಣಾ ಅಕ್ರಮ ನಡೆಸುತ್ತಿದ್ದು,ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಚುನಾವಣಾ ಆಯೋಗ ನಿರ್ಜಿವವಾಗಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡು ತ್ತಿದೆ.ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಅಭ್ಯಥರ್ಿಗಳನ್ನ ನಾಮಪತ್ರ ವಾಪಸ್ ಪಡೆಯುವಂತೆ ಯಡಿ ಯೂರಪ್ಪ ಒತ್ತಡ ಹಾಕ್ತಿದ್ದಾರೆ.ಚುನಾವಣಾ ಆಯೋಗ ಇದರ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ.ಯಡಿಯೂರಪ್ಪ ಮತ್ತು ಅವರ ತಂಡದ ಮೇಲೆ ದೂರು ದಾಖಲಿಸಲಿ.ಆದರೆ ಚುನಾವಣಾ ಆಯೋಗ ಇದರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನ ನೋಡಿದರೆ ಚುನಾವಣಾ ಆಯೋಗ ಸತ್ತು ಹೋಗಿದೆಯಾ ಇಲ್ಲ ಬಿಜೆಪಿ ಜೊತೆ ನಿಂತಿದೆಯಾ ಎಂಬ ಅನುಮಾನ ಬರುತ್ತದೆ. ಹಿರೆಕೆರೂರು,ಹೊಸಕೋಟೆ,ಗೋಕಾಕ್ ನಲ್ಲಿ ನಡೆಯು ತ್ತಿದೆ.ವಿಜಯೇಂದ್ರ ಅವರು ಸ್ವಾಮೀಜಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಇದನ್ನ ನೋಡಿಯೂ ಆಯೋಗ ಸುಮ್ಮನಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ಹೊಸಕೋಟೆ ಬಿಜೆಪಿ ಅಭ್ಯಥರ್ಿ ಎಂಟಿಬಿ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಗ್ರಪ್ಪ, ಇಟ್ಟಿಗೆ ಲಾರಿ ಇಂದ ಹಣ ಸಂಪಾದನೆ ಮಾಡಿ ದ್ದಾರೆ.2018 ಮತ್ತು 2019 ರ ಚುನಾವಣೆಯಲ್ಲಿ ಎಲೆಕ್ಷನ್ ಅಧಿಕಾರಿಗೆ ಕೊಟ್ಟ ಪ್ರಮಾಣಪತ್ರ ನನ್ನ ಬಳಿ ಇದೆ.ಏಕಾಏಕಿ ಅವರ ಆದಾಯ ಹೆಚ್ಚಾಗಿದೆ.ಇಡಿ ಐಟಿ ಅವರಿಗೆ ಇದು ಕಾಣಿಸುತ್ತಿಲ್ಲವೇ? ಬಿಜೆಪಿ ಸೇರ್ಪಡೆ ಆದರೆ ಇದು ಕ್ಲೀನ್ ಚಿಟ್ ಸಿಕ್ಕಿ ಬಿಟ್ಟಿದೆಯಾ? ಚುನಾವಣಾ ಆಯೋಗ ಜೀವಂತವಾಗಿದೆಯೇ? ನಿಜರ್ಿವವಾಗಿದ್ಯೋ, ಸತ್ತೋಗಿದ್ಯೋ ಗೊತ್ತಾಗುತ್ತಿಲ್ಲ.ಎಂಟಿಬಿ ಮೇಲೆ ಯಾಕೆ ಕ್ರಮಕೈಗೊಳ್ಳುತ್ತಿಲ್ಲ. ಐಟಿ, ಇಡಿ ಯಾಕೆ ಕ್ರಮತೆಗೆದುಕೊಳ್ತಿಲ್ಲ. ಹಣ ಕೊಡುತ್ತೇನೆ ಮತ ಹಾಕಿರಿ ಎಂದು ಮತದಾರರಿಗೆ ಅಮಿಷದ ಕೆಲಸವನ್ನು ಮತದಾರರಿಗೆ ಬಹಿರಂಗವಾಗಿಯೇ ಮಾಡುತ್ತಿದ್ದಾರೆ.ಇದು ಕಾನೂನು ಉಲ್ಲಂಘನೆಯಲ್ಲವೇ?ಚುನಾವಣಾ ಆಯೋಗ ಸುಮ್ಮನಿರುವುದೇಕೆ? ಕಾಂಗ್ರೆಸ್ ನಾಯಕರು ಸಾಲ ಪಡೆದಿ ದ್ದಾರೆಂಬ ಆರೋಪವನ್ನು ಎಂಟಿಬಿ ನಾಗರಾಜು ಮಾಡುತ್ತಿದ್ದಾರೆ.ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡರಿಗೆ ಸಾಲ ಕೊಟ್ಟಿದ್ದೀನಿ ಅಂತ ಹೇಳಿದ್ದಾರೆ.ಈ ಸಾಲದ ಬಗ್ಗೆ ಅಫಿಡವಿಟ್ ನಲ್ಲಿ ನಮೂದಾಗಬೇಕು.ಆದರೆ ಅಫಿಡವಿಟ್ ನಲ್ಲಿ ಏಕೆ ನಮೂದಿಸಿಲ್ಲ.ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ.ಇದರ ಬಗ್ಗೆ ಚುನಾವಣಾ ಆಯೋಗ ಕ್ರಮತೆಗೆದು ಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಸಚಿವ ಕೆ.ಜೆ.ಜಾಜರ್್ ಬಗ್ಗೆ ಸಿಬಿಐ ಬಿ-ರಿಪೋಟರ್್ ಸಲ್ಲಿಕೆ ವಿಚಾರ ಮಾತನಾಡಿದ ಅವರು ,ಈ ಪ್ರಕರಣದಲ್ಲಿ ಕೆ.ಜೆ.ಜಾಜರ್್ ಎಷ್ಟು ಕಷ್ಟ ಅನುಭವಿಸಿದ್ದರು.ಅವರ ಮನೆಯವರಿಗೂ ನಿದ್ರೆಯಿಲ್ಲದ ದಿನಗಳಿವೆ.ಅಂತ ಸನ್ನಿವೇಶವನ್ನ ನೀವು ಸೃಷ್ಟಿಸಿದ್ದಿರಿ. ಆದರೆ ಇದೀಗ ಸಿಬಿಐ ಬಿ- ರಿಪೋಟರ್್ ಕೊಟ್ಟಿದೆ.ಸಿಬಿಐ ಇರೋದು ಕೇಂದ್ರದ ಒಡೆತನದಲ್ಲಿಯೇ.ಇದನ್ನ ಗಮನದಲ್ಲಿಟ್ಟುಕೊಂಡು ನೀವು ಜಾಜರ್್ ಕ್ಷಮೆಯಾಚಿಸಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಉಗ್ರಪ್ಪ ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 