ಬಿಮ್ಸ್‌ ನರ್ಸಿಂಗ್ ಕಾಲೇಜ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ

ಬಿಮ್ಸ್‌ ನರ್ಸಿಂಗ್ ಕಾಲೇಜ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ BIMS Nursing College students' graduation ceremony

ಬೆಳಗಾವಿ 31 : ಬೆಳಗಾವಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಿ, ಪದವಿ ಪಡೆಯುತ್ತಿರುವ ನಮ್ಮ ವಿದ್ಯಾರ್ಥಿಗಳು ಮುಂದಿನ ತಮ್ಮ ವೃತ್ತಿ ಜೀವನದಲ್ಲಿಯೂ ಯಶಸ್ವಿಯಾಗಲಿ ಎಂದು ಬಿಮ್ಸನ ನಿರ್ದೇಶಕರಾದ ಅಶೋಕ ಕುಮಾರ ಶೆಟ್ಟಿ ಅವರು ಹೇಳಿದರು.ನಗರದ ಹೋರ ವಲಯದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಬಿಮ್ಸ್‌ ನ ನರ್ಸಿಂಗ್ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಅವರು, ನಮ್ಮ ಬಿಮ್ಸ್‌ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈಗಾಗಲೇ ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರತಿಷ್ಟಿತ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲೂಸುತ್ತಿದ್ದು, ತುಂಬಾ ಪ್ರಾಮುಖ್ಯಯತೆಯನ್ನು ಪಡೆದಿದ್ದಾರೆ.

ಶೈಕ್ಷಣಿಕ ಹಾಗೂ ಇತರೆ ವಿಭಾಗಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಲು ಮುಖ್ಯ ಕಾರಣ ಎಂದರೆ, ನಮ್ಮ ನರ್ಸಿಂಗ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಂದಲೇ ಇಂದು ನಮ್ಮ ಬಿಮ್ಸ್‌ ಕಾಲೇಜು ದೇಶದಲ್ಲಿಯೇ 31 ನೇ ಸ್ಥಾನ ಹಾಗೂ ರಾಜ್ಯದಲ್ಲಿಯೇ 2 ನೇ ಸ್ಥಾನವನ್ನು ಪಡೆದಿದೆ, ನಮ್ಮಲ್ಲಿ 1100 ಹಾಸಿಗೆಯ ಆಸ್ಪತ್ರೆ ಹಾಗೂ 300 ಹಾಸಿಗೆಯ ಸೂಪರ ಸ್ಪೆಷಯಾಲಿಟಿ ಆಸ್ಪತ್ರೆ ಇರುವದರಿಂದ ನಮ್ಮಲ್ಲಿ ಉತ್ತಮ ಕೌಶಲ್ಯದೊಂದಿಗೆ ತರಬೇತಿ ಹೊಂದಿ ತಯಾರಾದ ವಿದ್ಯಾರ್ಥಿಗಳು ಇರುತ್ತಾರೆ ಎಂದು ತಿಳಿಸಿದರು. ಈ ವರ್ಷ ​‍್ರ​‍್ರಥಮವಾಗಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಕಾರ್ಯಕ್ರಮ ಮಾಡುತ್ತಿರುವದು ತುಂಬಾ ಸಂತಸದ ವಿಷಯವಾಗಿದೆ,

ಸ್ನಾತಕೋತ್ತರದಲ್ಲಿ ಒಟ್ಟು 21 ವಿದ್ಯಾರ್ಥಿಗಳಿದ್ದು ಎಲ್ಲರೂ ಡಿಸ್ಟಿಂಗನೇಶನ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ, ಇನ್ನು ಪದವಿ ಹಂತದಲ್ಲಿ ಒಟ್ಟು 94 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 92 ಜನ ಡಿಸ್ಟಿಂಗನೇಷನ ಶ್ರೇಣಿಯಲ್ಲಿ ಪಾಸಾಗಿದ್ದು ಉಳಿದ 2 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಹೇಳಿದರು.ಈ ವೇಳೆ ಪದವಿ ಪಡೆದ ವಿದ್ಯಾರ್ಥಿಗಳು ಅತೀ ಸಂತಸದಿಂದ ಸಂಭ್ರಮಿಸುತ್ತಿದ್ದು ಅವರ ಪಾಲಕರ ಮೊಗದಲ್ಲಿಯೂ ಮಂದಹಾಸ ಮೂಡಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಡಾ ಶ್ರೀಕಾಂತ ಪುಲಾರಿ, ಅಧ್ಯಕ್ಷರಾಗಿ ಡಾ ಅಶೋಕ ಕುಮಾರ ಶೆಟ್ಟಿ, ಡಾ ನಾಮದೇವ ಕೆ ಮಾಳಗಿ, ಡಾ ಸರೋಜ ತಿಗಡಿ, ಕಾಂಚನಮಾಲ ಸೂರ್ಯವಂಷಿ, ಡಾ ಪ್ರಕಾಶ್ ಕೊಡ್ಲಿ, ಪಂಗಣವರ ಸೇರಿದಂತೆ ಹಲವಾರು ವಿಧ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.