ರಜಾ ಅವಧಿಯ ವಿಶೇಷ ಕ್ಲಾಸ್ಗಳಿಗೆ ಬಿಇಓ ಭೇಟಿ
BEO visits special classes during the holiday period
ರಜಾ ಅವಧಿಯ ವಿಶೇಷ ಕ್ಲಾಸ್ಗಳಿಗೆ ಬಿಇಓ ಭೇಟಿ
ರನ್ನ ಬೆಳಗಲಿ 14: ಮುಧೋಳ್ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಎಸ್ ಎಂ ಮುಲ್ಲಾ ರವರು ದಸರಾ ರಜೆಯಲ್ಲಿ ಹತ್ತನೇ ತರಗತಿಯ ಮಕ್ಕಳಿಗೆ ವಿಶೇಷ ತರಗತಿಯನ್ನು ಕೈಗೊಳ್ಳುತ್ತಿರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ವಿಶೇಷ ಬೋಧನಾ ತರಗತಿಗಳನ್ನು ಹಾಗೂ ವಿದ್ಯಾರ್ಥಿಗಳ ಅಭ್ಯಾಸದಲ್ಲಿ ತೊಡಗುವಿಕೆಯನ್ನು ಕಂಡು ಮುಧೋಳ ತಾಲೂಕಿನ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇದು ನಿಮ್ಮ ಜೀವನದ ಅತ್ಯಂತ ಮಹತ್ವದ ಘಟ್ಟ ಎಲ್ಲ ವಿದ್ಯಾರ್ಥಿಗಳು ತಂದೆ ತಾಯಿ ಗುರು ಹಿರಿಯರು ಶಿಕ್ಷಕರ ಮಾತನ್ನು ಕೇಳಿಕೊಂಡು ಒಳ್ಳೆಯ ಸಂಸ್ಕಾರದಿಂದ ಶಿಕ್ಷಣ ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅಭ್ಯಾಸದ ಕ್ರಮವಿಧಿ ವಿಧಾನಗಳನ್ನು ಪರೀಶೀಲಿಸಿ ಎಲ್ಲರೂ ಬೆಳಗಿನ ಜಾವ ಬೇಗನೆ ಎದ್ದು ಅಭ್ಯಾಸ ಮಾಡಬೇಕು ,ರಜಾ ಅವಧಿಯಲ್ಲಿ ಇಲಾಖೆಯ ಆದೇಶವಿಲ್ಲದಿದ್ದರೂ ಸಹ ಕೆಲವು ಶಿಕ್ಷಕರು ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಮಕ್ಕಳ ಶ್ರೇಯೋಭಿವೃದ್ಧಿ ಶ್ರಮಿಸುತ್ತಿರುವ ಶಿಕ್ಷಕರಿಗೆ ತುಂಬಾ ಧನ್ಯವಾದಗಳು ಎಂದರು.
ನಂತರ ಬೆಳಗಲಿ ವಿದ್ಯಾವರ್ಧಕ ಸಂಘದಲ್ಲಿ ನಡೆಯುತ್ತಿರುವ ಎನ್‌ಎಂಎಂಎಸ್ ವಿಶೇಷ ರಸಪ್ರಶ್ನೆ ಕಾರ್ಯಕ್ರಮಕ್ಕೆ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು. ಬೆಳಗಲಿ ವಲಯದ ಸಿಆರಿ್ಪಗಳಾದ ಬಸವರಾಜ್ ಬಳ್ಳಾರಿ, ಶಿಕ್ಷಕ ಕೆ ಎ ಧಡುತಿ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎ ಜಿ ಮೂಡಲಗಿ ಬಸವರಾಜ್ ಬೂದಿಹಾಳ, ಎ ಎಂ ಕಂಬಾರ್, ಬಿ ಪಿ ಚೋಪಡೆ ಪತ್ರಕರ್ತ ಎಂ ಕೆ ಕುಲಗೋಡ ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 