ಬಿಡಿಸಿಸಿ ಬ್ಯಾಂಕನ 106ನೇ ನೂತನ ಶಾಖೆ ಉದ್ಘಾಟನೆ
BDCC Bank's 106th new branch inaugurated
ರಾಯಬಾಗ, 25 ; ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 6 ಸಾವಿರ ಕೋಟಿ ರೂ.ಗಳ ಶೇರು ಬಂಡವಾಳ ಹೊಂದಿದ್ದು, 5 ಸಾವಿರ ಕೋಟಿ ಸಾಲವನ್ನು ನೀಡಿದ ರಾಜ್ಯದಲ್ಲಿಯೇ ಏಕೈಕ ಬ್ಯಾಂಕ್ ಇದಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.
ಶುಕ್ರವಾರ ತಾಲೂಕಿನ ನಿಪನಾಳ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕನ 106ನೇ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 22 ಬ್ಯಾಂಕ್‌ಗಳಲ್ಲಿ ಬಿಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ. ತಾಲೂಕಿನಲ್ಲಿ ಬ್ಯಾಂಕಿನಿಂದ ವಿವಿಧ ಯೋಜನೆಗಳಲ್ಲಿ 395 ಕೋಟಿ ರೂ.ಗಳ ಸಾಲವನ್ನು ನೀಡಲಾಗಿದೆ ಎಂದರು.
ಪ್ರಭಾರಧಾರಕ ಮುಖ್ಯ ಕಾರ್ಯುನಿರ್ವಾಹಣಾಧಿಕಾರಿ ಎನ್.ಜಿ. ಕಲಾವಂತ ಮಾತನಾಡಿ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರೈತರ ಸಮಗ್ರ ಅಭಿವೃದ್ದಿಗಾಗಿ ಸದಾ ಸಿದ್ಧವಿದೆ. ಸರಕಾರಗಳು ನೀಡುವ ಹಲವಾರು ಸಾಲಮನ್ನಾ ಯೋಜನೆಯನ್ನು ಕಟ್ಟು ನಿಟ್ಟಾಗಿ ಕಾರ್ಯರೂಪಕ್ಕೆ ತಂದು ರೈತರಿಗೆ ಮುಟ್ಟಿಸುವಂತಹ ಕಾರ್ಯವನ್ನು ಮಾಡುತ್ತಿದೆ. ನಿಪನಾಳ ನೂತನ ಶಾಖೆಯು 1.50 ಕೋಟಿ ರೂ.ಗಳ ಠೇವನ್ನು ಸಂಗ್ರಹ ಮಾಡಿ ದಾಖಲೆ ಸ್ಠಷ್ಟಿಸಿದೆ. ಅಲ್ಲದೇ ರಾಯಬಾಗ ಡಿ.ಸಿ.ಸಿ ಬ್ಯಾಂಕ್ ಕೃಷಿಯೇತರ ಸಾಲದಲ್ಲಿ 3ನೇ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು.
ಭೆಂಡವಾಡ ರೇವಣಸಿದ್ದೇಶ್ವರ ವಿರಕ್ತಮಠದ ಗುರುಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಪ್ರಧಾನ ವ್ಯವಸ್ಥಾಪಕ ಎ.ಸಿ. ಕಲ್ಮಠ, ಶಂಕರ ಕುರಬೇಟ, ರಾಮಚಂದ್ರ ಹೀರಿಕೋಡಿ, ಅರ್ಜುನ ನಾಯಿಕವಾಡಿ, ರಾಜಶೇಖರ ಖನದಾಳೆ, ಸಿದ್ದಪ್ಪ ಮೀಸಿ, ಮೋಹನರಾವ ದೇಸಾಯಿ, ಪ್ರಕಾಶ ಹುಕ್ಕೇರಿ, ಶಿವಾನಂದ ಪಾಟೀಲ, ರೇಣುಕಾ ಪಡತರಿ, ಕೆಂಪಣ್ಣ ಮಳವಾಡ, ಶ್ರೀಶೈಲ ಅಗ್ನೇಪ್ಪಗೋಳ, ಪಾಂಡುರಂಗ ದೇಸಾಯಿ, ಎಸ್.ಬಿ.ಪಾಟೀಲ, ಎಂ.ಎ.ಜಂಬಗಿ, ಚಿದಾನಂದ ಬನಶಂಕರಿ, ಬಿ.ಎಂ.ಬಬಲೇಶ್ವರ, ಎಂ.ಬಿ.ಮರಡಿ, ಅಪ್ಪಾಸಾಹೇಬ ಬ್ಯಾಕೂಡ, ನಟರಾಜ ಮಾವರಕರ ಹಾಗೂ ಕಂಕಣವಾಡಿ, ಭೆಂಡವಾಡ, ನಿಪನಾಳ, ಕಟಕಬಾವಿ ಪಿಕೆಪಿಎಸ್ ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಗ್ರಾಮಸ್ಥರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 